ಕಾರವಾರ; ತಾಲೂಕಿನ ಸರಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದ ಎನ್.ಎಸ.ಎಸ. ಘಟಕ 1ರ ವಿಶೇಷ ಶಿಬಿರದ ಸಮಾರೋಪ ಸಮಾರಂಭ ದಿನಾಂಕ 22 ರಂದು ನಡೆಯಿತು. ಪ್ರಾಸ್ತಾವಿಕವಾಗಿ ಮಾತನಾಡಿದ ಎನ್.ಎಸ.ಎಸ ಕಾರ್ಯಕ್ರಮಾಧಿಕಾರಿ ಪೋ ಐ ಕೆ ನಾಯ್ಕ ಏಳು ದಿನಗಳ ಕಾಲ ಕೈಗೊಂಡ ಕೆಲಸಗಳ ಮತ್ತು ಉಪನ್ಯಾಸ ಕಾರ್ಯಕ್ರಮಗಳ ಸೂಲ ಪರಿಚಯ ಮಾಡಿಕೊಟ್ಟರು. ಜೀವಜಲ ಸಂರಕ್ಷಣೆ ಎನ್.ಎಸ.ಎಸನ ಹೊಣೆ ಎಂಬ ಧ್ಯೇಯೋದ್ದೇಶ ಹೊಂದಿದ್ದ ಶಿಬಿರದಲ್ಲಿ ವಿದ್ಯಾರ್ಥಿಗಳು ಮುಡಗೇರಿಯ ವೆಂಕಟರಮಣ ದೇವಸ್ಥಾನದ ಕೆರೆಯನ್ನು ಸ್ವಚ್ಛಗೊಳಿಸಿದರು. ಅಲ್ಲದೇ ಅಂಗಡಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸರ್ಕಾರಿ ಬಾವಿಗೆ ಸುಣ್ಣ ಬಣ್ಣ ಬಳಿದು ಸ್ವಚ್ಛಗೊಳಿಸಿದರು. ಶಿಬಿರದುದ್ದಕ್ಕೂ ವಿದ್ಯಾರ್ಥಿಗಳು ಪಲ್ಸ್ ಪೋಲಿಯೋ ಜಾಗ್ರತಿ , ಅಂಗಾಂಗ ದಾನ ಜಾಗೃತಿ, ಸ್ವಚ್ಛಭಾರತ ಜಾಗ್ರತಿ, ಮತದಾನ ಜಾಗ್ರತಿ, ಹಸಿರು ಜಾಗ್ರತಿ, ಜೀವಜಲ ಜಾಗ್ರತಿ ಜಾಥಾಗಳನ್ನು ನಡೆಸಿ ಗ್ರಾಮದ ಜನರಿಗೆ ಅರಿವು ಮೂಡಿಸಿದರು.
ಮುಡಗೇರಿಯ ದೇವಸ್ಥಾನ, ಬಸಸ್ಟೆಂಡ, ಹಾಗೂ ಬೀದಿಗಳನ್ನು ಸ್ವಚ್ಛಗೊಳಿಸಿ ಜನರಲ್ಲಿ ಅಚ್ಚರಿ ಮೂಡಿಸಿದರು. ಏಳು ದಿನಗಳವರೆಗೆ 9 ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶೇಷವಾಗಿ ಸಮಾಜ ಸೇವೆಯಲ್ಲಿ ನಿರತರಾದರು ಶ್ರೀ ಮಾಧವ ನಾಯಕ, ಶ್ರೀ ಅನಮೋಲ ರೇವಣಕರ ಮತ್ತು ಶ್ರೀ ಅಮಿತ್ ಖಾನ ಹಾಗೂ ಶ್ರೀ ಶಿವಮೂರ್ತಿ ಆರ್ ಜೋಶಿರವರನ್ನು ವಿದ್ಯಾರ್ಥಿಗಳು ಸನ್ಮಾನಿಸಿದರು. ಸಮಾರೋಪ ಸಮಾರಂಭದಂದು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕಾರವಾರದ ಮಹಿಳಾ ಕಾಲೇಜಿನ ಪ್ರಾಂಶುಪಾಲರಾದ ವಿ.ಪಿ ಗಂಗೊಳ್ಳಿ ಮಾತನಾಡಿ ಮುಖ್ಯವಾಗಿ ವಿದ್ಯಾರ್ಥಿಗಳು ಆತ್ಮವಿಶ್ವಾಸ ಬೆಳೆಸಿಕೊಂಡು ಸಮಾಜ ಕಟ್ಟುವ ಕೆಲಸದಲ್ಲಿ ಭಾಗಿಗಳಾಗಬೇಕೆಂದು ತಿಳಿಸಿದ್ದರು ಮತ್ತು ಮಕ್ಕಳ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಪಿ.ಜೀ ಸೆಂಟರನ ಎನ್.ಎಸ.ಎಸ ಕಾರ್ಯಕ್ರಮಾಧಿಕಾರಿ ಡಾ.ಹನುಮಂತ ಎನ್.ಮಸ್ತಾರಿ ಮಾತನಾಡಿ ಸ್ವ ಇಚ್ಛೆಯಿಂದ ಸೇವೆಗ್ಯೆಯದ ಎನ್.ಎಸ.ಎಸ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಅನೇಕ ಒತ್ತಡಗಳ ನಡುವೆಯೂ ಹಳ್ಳಿಗೆ ಬಂದು ಕೆಲಸಮಾಡಿ ಸಮಾಜಸೇವೆಯ ಅರಿವು ಮೂಡಿಸುತ್ತಿರುವ ಮಕ್ಕಳ ಕೆಲಸವನ್ನು ಕೊಂಡಾಡಿದರು ಮತ್ತು ತಾವು ತಂದ ಸಿಹಿ ತಿಂಡಿ ಹಂಚಿದರು. ಕನ್ನಡ ಉಪನ್ಯಾಸಕರಾದ ಪ್ರೊ ಹಳ್ಳಿಗುಡಿ ಮಾತನಾಡಿ ಮಕ್ಕಳನ್ನು ಸ್ಪೂರ್ತಿದಾಯಕ ಮಾತುಗಳಿಂದ ಹುರಿದುಂಬಿಸಿದರು ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರೊ ವೆಂಕಟೇಶ್ ಗಿರಿ ಮಾತನಾಡಿ ಸಾಗಿಬರುವ ಎಡರು ತೊಡರುಗಳನೆಲ್ಲಾ ಎದುರಿಸಿ ಧೃರ್ಯದಿಂದ ಮುನ್ನುಡಿ ಕಾರ್ಯಸಾಧಿಸುವವನೇ ಉತ್ತಮವಾದ ಮನುಷ್ಯ, ಅಂತಹ ಕೆಲಸವನ್ನು ಎನ್.ಎಸ.ಎಸ ಕಾರ್ಯಕ್ರಮಾಧಿಕಾರಿಗಳು ಮತ್ತು ವಿದ್ಯಾರ್ಥಿಗಳು ಸಾಧಿಸಿದ್ದೀರಿ ಎಂದು ಹರ್ಷ ವ್ಯಕ್ತಪಡಿಸಿದರು. ಒಟ್ಟಾರೆ ಏಳು ದಿನಗಳವರೆಗೆ ನಡೆದ ಶಿಬಿರದಲ್ಲಿ ನಡೆದ ಕಾರ್ಯಗಳನ್ನು ಕಂಡು ಗ್ರಾಮದ ಜನ ಮೆಚ್ಚುಗೆ ವ್ಯಕ್ತಪಡಿಸಿ ಮತ್ತೆ ಮುಂದಿನ ವರ್ಷವೂ ಕೂಡ ಬರುವಂತೆ ಬೀಳ್ಕೊಟ್ಟರು.