ಗೋಕರ್ಣ : ತಾಲೂಕಿನಲ್ಲಿ ವೈವಿದ್ಯಮಯ ಬಿಸನೆಸ್ಗಳು ನಡೀತಾವೆ, ಆದರೆ ತಾಲೂಕಿನಲ್ಲಿ ನಡೆಯುತ್ತಿದ್ದ ಬಾಡಿಗೆ ಸ್ಕೂಟಿಗಳ ಕಥೆ ಮಾತ್ರ ವಿಚಿತ್ರವಾಗಿದೆ. ಪರವಾನಗಿಇಲ್ಲದೇ ಬಾಡಿಗೆಗೆ ನೀಡುತ್ತಿದ್ದ ಸುಮಾರು 25ಕ್ಕೂ ಹೆಚ್ಚಿನ ಸ್ಕೂಟಿಗಳನ್ನು ಪೊಲೀಸ್‌ಠಾಣೆಯ ಪಿಎಸ್‌ಐ ಸಂತೋಷ ಕುಮಾರ್‌ ನೇತೃತ್ವದಲ್ಲಿ ವಶಪಡಿಸಿಕೊಳ್ಳುವ ಮೂಲಕ ಪೋಲೀಸರಯ ಕಾರ್ಯಾಚರಣೆ ನಡೆಸಿದ್ದಾರೆ .

RELATED ARTICLES  ಅಪಘಾತ : ಸವಾರನ ತಲೆ, ಕೈ, ಕಾಲಿಗೆ ಪೆಟ್ಟು

ಸದ್ಯ ವಿದೇಶಿ ಮಹಿಳೆಯೊಬ್ಬಳು ಬಾಡಿಗೆ ಸ್ಕೂಟಿಯನ್ನು ಆಟೋರಿಕ್ಷಾಗೆ ಗುದ್ದಿ ಗಾಯಗೊಂಡಿದ್ದಳು. ಇದರಿಂದ ಎಚ್ಚೆತ್ತ ಪೊಲೀಸರು ಹಳದಿ ಪ್ಲೇಟ್‌ ಹಾಗೂ ಕಪ್ಪು ಅಕ್ಷರ ಹೊಂದಿರದ ಸ್ಕೂಟಿಗಳನ್ನು ವಶಪಡಿಸಿಕೊಂಡು ಈ ಬಗ್ಗೆ ತನಿಖೆ ನಡೆಸಿದ್ದು ಆ ಸಮಯದಲ್ಲಿ ಪರವಾನಿಗೆ ಇಲ್ಲದ ಸ್ಕೂಟಿಗಳ ವಿವರ ಹೊರ ಬಿದ್ದಿದೆ.

RELATED ARTICLES  ಕೃಷಿಯಲ್ಲಿ ತೊಡಗಿ ಗಮನ ಸೆಳೆದ ವಿದ್ಯಾರ್ಥಿಗಳು.

ಈ ಬಗ್ಗೆ ಗೋಕರ್ಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.