ಕುಮಟಾ : ಉತ್ತರಕನ್ನಡ ಜಿಲ್ಲೆಯ ವಿಶೇಷ ವೀಕಲ ಚೇತನ ಯುವಕ ದುಬೈನಲ್ಲಿ ನಡೆದ ಓಲಂಪಿಕ್ ನಲ್ಲಿ ಕೀರ್ತಿ ಪತಾಕಿ ಹಾರಿಸಿದ್ದಾನೆ.

ಜಿಲ್ಲೆಯ ಕುಮಟ ತಾಲೂಕಿನ ಬರ್ಗಿ ಗ್ರಾಮದ ಸಂದೇಶ ಕೃಷ್ಣ ಹರಿಕಾಂತ ದುಬೈನಲ್ಲಿ ನಡೆದ ಓಲಂಪಿಕ್ ಟೇಬಲ್ ಟೆನ್ನಿಸ್ ವಿಭಾಗದಲ್ಲಿ ಭಾಗವಹಿಸಿ ಚಿನ್ನದ ಪದಕವನ್ನು ಗೆಲ್ಲುವ ಮೂಲಕ ಸಾಧನೆ ಮಾಡಿದ್ದಾನೆ.

RELATED ARTICLES  ಕರೋನಾ ಹಿನ್ನೆಲೆ ಪರಿಹಾರ ನಿಧಿಗೆ 1 ಲಕ್ಷ ರೂ ನೀಡಿದ ದೀವಗಿ ರಾಮಾನಂದ ಶ್ರೀಗಳು.

ವಿಶೇಷ ವಿಕಲ ಚೇತನ ವಾಗಿರುವ ಸಂದೇಶನಿಗೆ ಗ್ರಾಮದ ಜನರಿಂದ ಅದ್ದೂರಿ ಸ್ವಾಗತ ಸಿಕ್ಕಿದೆ. ಕುಮಟದಲ್ಲಿರುವ ದಯಾನಿಲಯ ಬುದ್ದಿಮಾಂದ್ಯ ಸಂಸ್ಥೆ ಹಾಗೂ ಗ್ರಾಮದ ಜನರು ಬೈಕ್ ರ‌್ಯಾಲಿ ಮೂಲಕ ತವರಿಗೆ ಕರೆತಂದ್ರು.

RELATED ARTICLES  ಪತ್ರಿಕಾ ದಿನಾಚರಣೆ ಸ್ಪರ್ಧೆ: ಸೃಜನಾ, ಚಿತ್ರಾವತಿ ಪ್ರಥಮ

ಈ ವೇಳೆಯಲ್ಲಿ ಬರ್ಗಿ ಗ್ರಾಮ ಪಂಚಾಯತದಿಂದ ಅಧ್ಯಕ್ಷ ರಾಮ ಕೆ ಪಟಗಾರ ಸಾಧನೆ ಗೈದ ಯುವಕನಿಗೆ ಸ್ವಾಗತ ಮಾಡಕೊಂಡ್ರು.

ವಿದೇಶದಲ್ಲಿ ಚಿನ್ನ ಗೆದ್ದ ಯುವಕ ಗ್ರಾಮಕ್ಕೆ ಆಗಮನದ ಹಿನ್ನೆಲೆ ಊರಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು.