ಹೊನ್ನಾವರ : ತಾಲೂಕ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ನೂತನ ಅಧ್ಯಕ್ಷರಾಗಿ ನಗರದ ಜೋಗಮಠ ನಿವಾಸಿ ಮಹಮದ್ ಜಕ್ರಿಯ್ಯ ಶೇಖ್ ನೇಮಕಗೊಂಡಿದ್ದಾರೆ.

ಇತ್ತೀಚಿಗೆ ಶಿರಸಿಯ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಮಹಮದ್ ಮಜೀದ್ ಶೇಖ್ ಇವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಭೀಮಣ್ಣ ನಾಯ್ಕ್ ಅಧಿಕಾರ ಪತ್ರ ಹಸ್ತಾಂತರಿಸಿದರು.

RELATED ARTICLES  ಬದುಕಿಗೆ ಬಣ್ಣ ತುಂಬಿದವರು ಸಂಚಿಕೆ -104

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಹೊನ್ನಾವರ ಭಾಗದಲ್ಲಿ ಜಕ್ರಿಯ್ಯ ಶೇಖ್ ಅವರು ತುಂಬಾ ಚಟುವಟಿಕೆಯಿಂದ ಕೆಲಸ ಕಾರ್ಯ ನಿರ್ವಹಿಸಿದ್ದರು.. ಜಕ್ರಿಯ್ಯ ಶೇಖ್ ಅವರು ಈ ನೂತನ ಜವಾಬ್ದಾರಿಯನ್ನು ನಿರ್ವಹಿಸಿ ಪಕ್ಷವನ್ನು ತಳಹಂತದಿಂದ ಇನ್ನೂ ಹೆಚ್ಚು ಸದೃಢಗೊಳಿಸಲಿ, ಅವರ ರಾಜಕೀಯದಲ್ಲಿ ಇನ್ನೂ ಹೆಚ್ಚಿನ ಸ್ಥಾನಮಾನ ದೊರಕಲಿ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಜಗದೀಪ ತೆಂಗೇರಿ ಹಾರೈಸಿದ್ದಾರೆ.

RELATED ARTICLES  ಈಜಲು ಹೋಗಿ ಮೃತನಾದ ವಿದ್ಯಾರ್ಥಿಯ ಮನೆಗೆ ಶಾಸಕ ಮಾಂಕಳ ವೈದ್ಯ ಭೇಟಿ.