ಹಣಕಾಸು ವರ್ಷದ ಕೊನೆಯ ದಿನ ಮಾರ್ಚ್ 31 ಭಾನುವಾರದಂದು ಬಂದಿದ್ದು, ಈ ಬಾರಿ ಬ್ಯಾಂಕುಗಳು ಭಾನುವಾರವೂ ಕೆಲಸ ಮಾಡಲಿವೆ ಎಂದು ಆರ್ಬಿಐ ಹೇಳಿದೆ.ಸರ್ಕಾರಿ ವಹಿವಾಟು ನಡೆಸುವ ಎಲ್ಲ ಬ್ಯಾಂಕ್ ಶಾಖೆಗಳು ಈ ಭಾನುವಾರ ಕಾರ್ಯ ನಿರ್ವಹಿಸಬೇಕೆಂದು ಎಲ್ಲಾ ಬ್ಯಾಂಕುಗಳಿಗೆ ಆರ್ಬಿಐ ನೊಟೀಸ್ ಜಾರಿಗೊಳಿಸಿದೆ.

ಭಾನುವಾರ ಮಾರ್ಚ್ 31 ರಂದು ಸರ್ಕಾರಿ ಪಾವತಿ ಹಾಗೂ ರಸೀದಿಗಾಗಿ ಎಲ್ಲ ಶಾಖೆಗಳನ್ನು ತೆರೆದಿಡಬೇಕೆಂದು ಕೇಂದ್ರ ಸರ್ಕಾರ ಸೂಚನೆ ನೀಡಿರುವುದರಿಂದ, ಎಲ್ಲ ಬ್ಯಾಂಕ್ ಗಳು ಭಾನುವಾರ ಕೆಲಸ ಮಾಡಬೇಕೆಂದು ಆರ್ಬಿಐ ಸೂಚನೆ ನೀಡುತ್ತದೆ ಎಂದು ಸುತ್ತೋಲೆಯಲ್ಲಿ ಹೇಳಿದೆ.ಸರ್ಕಾರದ ರಸೀದಿ ಮತ್ತು ಪಾವತಿ ವ್ಯವಹಾರಗಳನ್ನು ಸುಲಭಗೊಳಿಸಲು ಮಾರ್ಚ್ 31, 2019 (ಭಾನುವಾರ) ರಂದು ಎಲ್ಲಾ ಪಾವತಿ ಮತ್ತು ಅಕೌಂಟ್ ಕಛೇರಿಗಳು ತೆರೆದಿರುತ್ತವೆ.

RELATED ARTICLES  ಬಹುಭಾಷಾ ನಟಿ ರಂಭಾ ಕಾರು ಅಪಘಾತ

ಸರ್ಕಾರಿ ವಹಿವಾಟು ನಡೆಸುವ ಎಲ್ಲ ಬ್ಯಾಂಕುಗಳು ಮಾರ್ಚ್ 30, ರಂದು ರಾತ್ರಿ 8 ಗಂಟೆಯವರೆಗೆ ಹಾಗೂ ಮಾರ್ಚ್ 31 ರಂದು ಸಂಜೆ ಆರು ಗಂಟೆಯವರೆಗೆ ಕಾರ್ಯನಿರ್ವಹಿಸಲಿವೆ. ಏಪ್ರಿಲ್ 1 ರಂದು ಹಣಕಾಸು ವರ್ಷ ಬದಲಾಗಲಿದೆ.ಆರ್ಟಿಜಿಎಸ್ ಮತ್ತು ಎನ್ಇಎಫ್ಟಿ (RTGS and NEFT) ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ವಹಿವಾಟುಗಳು ಮಾರ್ಚ್ 30 ಮತ್ತು ಮಾರ್ಚ್ 31, 2019 ರಂದು ವಿಸ್ತೃತ ಸಮಯದವರೆಗೆ ನಡೆಯಲಿವೆ.

RELATED ARTICLES  ಉತ್ತರಕನ್ನಡದಲ್ಲಿ ಇಂದು 43 ಜನರಲ್ಲಿ ಕೊರೋನಾ ಪಾಸಿಟೀವ್