ಮೇಷ:- ಎಂತಹ ತುರ್ತು ಕೆಲಸಗಳನ್ನೂ ಅವಸರ ಮಾಡದೆ ಸಂಯಮದಿಂದ ನಿರ್ವಹಿಸಿ. ಸಂಸಾರದಲ್ಲಿ ಮೂಡಿದ್ದ ಅನುಮಾನಗಳು ದೂರವಾಗಿ ಸಂತಸ ಮೂಡುವುದು. ಬಂಧು ಮಿತ್ರರೊಂದಿಗೆ ಆಡುವ ನಿಷ್ಠುರದ ಮಾತುಗಳು ಮುಂದೆ ನಿಮಗೇ ಕೆಟ್ಟ ಹೆಸರನ್ನು ತರುತ್ತವೆ. ಈ ವಿಷಯದಲ್ಲಿ ಜಾಗರೂಕತೆಯಿಂದ ವರ್ತಿಸಿ. ಉತ್ತಮ ಆದಾಯ ನೆಮ್ಮದಿ ತರಲಿದೆ.

ವೃಷಭ:- ಮಗನ ಉನ್ನತ ವಿದ್ಯಾಭ್ಯಾಸದಲ್ಲಿ ಸಾಕಷ್ಟು ಪ್ರಗತಿ ಕಂಡುಬರುವುದು. ನಿಮ್ಮ ಉದಾಸೀನ ಸ್ವಭಾವದಿಂದಾಗಿ ವ್ಯವಹಾರ ಮಂದಗತಿಯಲ್ಲಿ ಸಾಗಲಿದೆ. ಇದರ ಕಡೆ ವಿಶೇಷ ಗಮನ ಕೊಡುವುದು ಉತ್ತಮ. ನಿರುದ್ಯೋಗಿಗಳಿಗೆ ಖಾಸಗಿ ಕಂಪನಿಯಲ್ಲಿ ನೌಕರಿ ದೊರೆಯಲಿದ್ದು ವೇತನ ಸಾಧಾರಣವಾಗಿದ್ದರೂ ಸದ್ಯಕ್ಕೆ ಅಲ್ಲಿ ಹೊಂದಿಕೊಂಡು ಹೋಗುವುದು ಉತ್ತಮ.
ಮಿಥುನ:- ಈ ಹಿಂದೆ ಯಾರಿಗೋ ಹಣಕಾಸಿನ ವಿಚಾರದಲ್ಲಿ ಜಾಮೀನುದಾರರಾಗಿದ್ದ ನೀವು ಅದನ್ನು ಅಲಕ್ಷ್ಯೆ ಮಾಡಿದ್ದರ ಫಲವಾಗಿ ನೀವೇ ಆ ಹಣ ಕಟ್ಟಬೇಕಾದ ಪ್ರಸಂಗ ಬರುವುದು. ನಿಮ್ಮ ಸೋದರಿ ತನ್ನ ಮಗಳನ್ನು ನಿಮ್ಮ ಮಗನಿಗೆ ಮದುವೆ ಮಾಡಿಕೊಡುವ ಪ್ರಸ್ತಾಪ ತರುವ ಸಾಧ್ಯತೆ ಇದೆ. ವಧು ವರರು ಇಚ್ಛೆಪಟ್ಟರೆ ಮಾತುಕತೆ ಮಾಡಿ.

ಕಟಕ:- ಸಂಸಾರದಲ್ಲಿ ಪ್ರತಿಯೊಬ್ಬರ ವಿಷಯಕ್ಕೂ ವಿಶೇಷ ಕಾಳಜಿ ತೋರುವ ನೀವು ನಿಮ್ಮ ಆರೋಗ್ಯದ ಕಡೆ ನಿರ್ಲಕ್ಷ್ಯ ತೋರುವಿರಿ. ಶಿಕ್ಷ ಕರು ವೇತನದ ಏರಿಕೆಗಾಗಿ ಸಂಬಂಧಪಟ್ಟ ಮೇಲಧಿಕಾರಿಗಳನ್ನು ಭೇಟಿಯಾದರೆ ಮಾತ್ರ ಯಶಸ್ಸು ಸಿಗುವುದು. ಸರ್ಕಾರದ ಅನುದಾನ ಶೀಘ್ರದಲ್ಲಿಯೇ ನಿಮ್ಮ ಕೈ ಸೇರಲಿದೆ. ಅದು ದುರುಪಯೋಗ ಆಗದಂತೆ ನೋಡಿಕೊಳ್ಳಿ. ನ್ಯಾಯವಾದಿಗಳಿಗೆ ಕಕ್ಷಿದಾರರಿಂದ ಒತ್ತಡ ಬರುವುದು.

RELATED ARTICLES  ಡಿ.ಕೆ.ಶಿವಕುಮಾರ್ ಗೆ ಯಾವ ಸ್ಥಾನ ಸಿಗಲಿದೆ? ಹೆಚ್ಚುತ್ತಿದೆ ಕುತೂಹಲ

ಸಿಂಹ:- ಈ ಹಿಂದೆ ನೀವು ಮನೆ ಸದಸ್ಯರೊಡನೆ ನಡೆದುಕೊಂಡ ರೀತಿಯಿಂದ ಕಳೆದುಹೋಗಿದ್ದ ವಿಶ್ವಾಸವನ್ನು ಮರಳಿ ಪಡೆಯಲು ಪ್ರಯತ್ನಿಸಿ. ಮನೆಯಲ್ಲಿ ಹಿರಿಯರ ಆಶೀರ್ವಾದ ಪಡೆಯಿರಿ. ನಿಮ್ಮ ಸಹೋದ್ಯೋಗಿಗಳೊಬ್ಬರು ಆರ್ಥಿಕ ನೆರವು ಕೋರಿ ನಿಮ್ಮಲ್ಲಿಗೆ ಬರುವರು. ಸಾಧ್ಯವಿದ್ದರೆ ಸಹಕರಿಸಿ. ಭೂ ವ್ಯವಹಾರ ಮಾಡುವವರ ವ್ಯವಹಾರದಲ್ಲಿ ಮತ್ತೆ ಚಟುವಟಿಕೆ ಗರಿಗೆದರಲಿದೆ. ಸಮಾಜಮುಖಿ ಕೆಲಸಗಳಿಂದ ನಿಮ್ಮ ಗೌರವ ಪ್ರತಿಷ್ಠೆ ಹೆಚ್ಚಾಗಲಿವೆ.

ಕನ್ಯಾ:- ನೀವು ಒಂದು ಕಡೆ ಉಳಿತಾಯಕ್ಕೆ ಪ್ರಯತ್ನಿಸುತ್ತಿದ್ದರೆ ಮತ್ತೊಂದೆಡೆ ಖರ್ಚು ಹೆಚ್ಚುತ್ತಾ ಹೋಗಲಿದೆ. ಮಕ್ಕಳ ಆದಾಯ ನಿಮಗೆ ಸ್ವಲ್ಪ ಆಧಾರವಾಗಲಿದೆ. ಮಗನಿಗೆ ಮದುವೆ ಪ್ರಸ್ತಾಪ ಬರಲಿದ್ದು ಸಂಬಂಧ ಸೂಕ್ತವಾಗಿದ್ದರೆ ಮುಂದುವರೆಯಬಹುದು. ಪ್ರಮುಖರು ನಿಮ್ಮನ್ನು ಭೇಟಿಯಾಗಲು ತಾವಾಗಿಯೇ ಹುಡುಕಿಕೊಂಡು ಬರಲಿದ್ದಾರೆ. ಮತ್ತೊಬ್ಬರ ಬಗ್ಗೆ ವ್ಯಕ್ತಿಗತವಾಗಿ ಮಾತನಾಡಬೇಡಿ.

ತುಲಾ:- ಕೆಲಸದಲ್ಲಿ ಅತ್ಯಂತ ಅವಸರ ತೋರುವ ನಿಮ್ಮ ಸ್ವಭಾವದಿಂದ ಜನರಿಗೆ ಆಗುವ ತೊಂದರೆಗಳ ಬಗ್ಗೆ ತುಸು ಎಚ್ಚರದಿಂದ ಇರುವುದು ಉತ್ತಮ. ಇಲ್ಲವಾದರೆ ನಿಮ್ಮವರೇ ನಿಮಗೆ ತಿರುಗಿ ಬೀಳುವರು. ಬಹುದೊಡ್ಡ ಮೊತ್ತದ ವ್ಯವಹಾರ ನಿಮ್ಮದಾಗಿದ್ದರೆ ಪಾಲುದಾರರು ನಿಮ್ಮ ನಡೆಯನ್ನು ಸೂಕ್ಷ ್ಮವಾಗಿ ಗಮನಿಸುತ್ತಿರುವರು.

ವೃಶ್ಚಿಕ:- ನಿಮ್ಮ ಛಲ, ಶ್ರದ್ಧೆ ಮತ್ತು ಕಠಿಣ ಪರಿಶ್ರಮ ಮುಂದಿನ ವ್ಯವಹಾರದಲ್ಲಿ ಯಶಸ್ಸು ತಂದುಕೊಡಲಿವೆ. ಡೋಲಾಯಮಾನವಾಗುತ್ತಿರುವ ನಿಮ್ಮ ಮಾನಸಿಕ ಸ್ಥಿತಿಯನ್ನು ತಹಬಂದಿಗೆ ತರಲು ಪ್ರಯತ್ನಿಸಿ. ಕಷ್ಟಪಟ್ಟು ಆರಂಭಿಸಿದ ವ್ಯವಹಾರ ಮುಂದೆ ಶಾಶ್ವತವಾಗಿ ನಡೆದುಕೊಂಡು ಹೋಗಲು ಒಂದು ವ್ಯವಸ್ಥೆ ಮಾಡುವುದು ಉತ್ತಮ. ಶೀಘ್ರದಲ್ಲಿಯೇ ಶುಭ ಸಮಾಚಾರ ಕೇಳುವಿರಿ.

ಧನುಸ್ಸು:- ಪ್ರತಿಯೊಂದರಲ್ಲೂ ಯಶಸ್ಸಿಗಾಗಿ ಪರಿತಪಿಸುವ ನೀವು ಅದಕ್ಕಾಗಿ ಪಡುವ ಶ್ರಮ ಸಾಕಷ್ಟಿದೆ. ಆದರೆ ನೀವು ಅದಕ್ಕಾಗಿ ಅನುಸರಿಸುವ ರೀತಿಗಳು ಸರಿಯಾಗಿಲ್ಲಿವೆಯೆ ಎಂಬುದನ್ನು ಮೊದಲು ಪರಿಶೀಲಿಸಿ. ಏಕೆಂದರೆ ನೀವು ಎಷ್ಟೇ ಕಷ್ಟಪಟ್ಟರೂ ನಿಮಗೆ ಸಿಗುವ ಅಥವಾ ಸಿಗಲಿರುವ ಫಲ ಶೇಕಡಾ 50 ರಿಂದ 60 ಮಾತ್ರ. ಹಲವು ಬಾರಿ ಯೋಚಿಸಿ ಹೊಸ ಯೋಜನೆಗಳನ್ನು ಆರಂಭಿಸಿ.

RELATED ARTICLES  ಸ್ಯಾಂಡಲ್ ವುಡ್ ಗೆ ಇನ್ನೊಂದು ಆಘಾತ : ಹಿರಿಯ ನಟ ರಾಜೇಶ್ ಇನ್ನಿಲ್ಲ.

ಮಕರ:- ನೀವು ನಿಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಲೇಬೇಕು. ಬದುಕಿನಲ್ಲಿ ಕಾಲಕ್ಕೆ ತಕ್ಕಂತೆ ಹೊಂದಾಣಿಕೆ ಅನಿವಾರ್ಯ. ಇಲ್ಲವಾದರೆ ಪರಿಹಾಸ್ಯಕ್ಕೆ ಗುರಿಯಾಗಬೇಕಾಗುವುದು. ಹಣಕಾಸಿಗೆ ಪರದಾಡಬೇಕಾಗುತ್ತದೆ. ಖರ್ಚು ವೆಚ್ಚಗಳ ಮೇಲೆ ಹತೋಟಿ ಸಾಧಿಸುವುದು ಅನಿವಾರ್ಯ. ಬಂಧು ಮಿತ್ರರೊಂದಿಗೆ ವಿನಾಕಾರಣ ವಾದ ವಿವಾದ ಬೇಡ. ವಿದ್ಯಾರ್ಥಿಗಳಿಗೆ ಉತ್ತಮ ದಿನಗಳು.

ಕುಂಭ:- ಹೊಸ ಯೋಜನೆಗಳ ಕುರಿತು ಚಿಂತಿಸುವ ನೀವು ಅದಕ್ಕೆ ತಗಲುವ ಹಣದ ವಿಷಯದಲ್ಲಿ ಹಿಂದೆ ಬೀಳುವಿರಿ. ನಿಮ್ಮ ಬುದ್ಧಿವಂತಿಕೆ ಮತ್ತು ಶ್ರಮ ಗಮನಿಸಿ ಕೆಲವರು ನಿಮಗೆ ಧನಸಹಾಯ ಮಾಡಲು ಬರುವರು. ಇದರಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳಲು ರಹದಾರಿ ಸಿಗುವುದು. ತರುಣ ಉದ್ಯಮಿಗಳು ತಮ್ಮ ಚುರುಕಾದ ಚಟುವಟಿಕೆಗಳಿಂದ ಎಲ್ಲರನ್ನು ಹುರಿದುಂಬಿಸುವರು.

ಮೀನ:- ಮನೆಯ ಖರ್ಚು ವೆಚ್ಚಗಳನ್ನು ನೀವು ಎಷ್ಟೇ ನಿಯಂತ್ರಿಸಲು ಪ್ರಯತ್ನಿಸಿದರೂ ಅದು ಇನ್ನೊಂದು ರೀತಿಯಲ್ಲಿ ಕೈ ಮೀರಿ ಹೋಗುವುದು. ಇದರಿಂದ ಕೂಡಿಟ್ಟ ಹಣ ಖರ್ಚಾಗುವುದು. ಆಸ್ತಿ ಖರೀದಿಗೆ ಸಕಾಲವಾಗಿದ್ದು, ಅನವಶ್ಯಕ ಗೊಂದಲಗಳನ್ನು ಮಾಡಿಕೊಳ್ಳದೆ ಗಟ್ಟಿ ನಿರ್ಧಾರದೊಂದಿಗೆ ಮುನ್ನುಗ್ಗಿ. ಅದಕ್ಕೆ ಬೇಕಾದ ಆರ್ಥಿಕ ಬೆಂಬಲ ಬಂಧುಗಳಿಂದ ತಾನಾಗಿಯೇ ಬರುವುದು.