ಶಿರಸಿ: ದೇಶದಲ್ಲೇ ಪ್ರಥಮ ಬಾರಿಗೆ ಯಕ್ಷಗಾನದಲ್ಲಿನ ವಿಶ್ವಶಾಂತಿ ಸಂದೇಶಗಳು ಎಂಬ ಯಕ್ಷ ನೃತ್ಯ ರೂಪಕ ಪ್ರಸ್ತುತಗೊಳಿಸುತ್ತಿರುವ ಶಿರಸಿಯ ಬಾಲೆ ತುಳಸಿ ಹೆಗಡೆ ಅವಳಿಗೆ ಶ್ರೀ ಅಖಿಲ ಹವ್ಯಕ ಮಹಾಸಭಾ ಬೆಂಗಳೂರು ಇವರು ಹವ್ಯಕ ವಿಶೇಷ ಪ್ರಶಸ್ತಿ ಅಡಿಯಲ್ಲಿ ನೀಡಲ್ಪಡುವ ಹವ್ಯಕ ಪಲ್ಲವ ಪ್ರಶಸ್ತಿ ಲಭಿಸಿದೆ.

ಮಾರ್ಚ್ 31 ರಂದು ಹವ್ಯಕ ಮಹಾಸಭಾದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ತುಳಸಿ ಪ್ರಶಸ್ತಿ ಸ್ವೀಕರಿಸಲಿದ್ದಾಳೆ.

ಕು.ತುಳಸಿ ಹೆಗಡೆ ಕುರಿತು:

c5e565f6 7eb1 4dbf 8bc9 4acc8f8f4acf


ತುಳಸಿ ಹೆಗಡೆ  ಅವಳು ಪತ್ರಕರ್ತ ರಾಘವೇಂದ್ರ ಬೆಟ್ಟಕೊಪ್ಪ ಹಾಗೂ ಕವಯತ್ರಿ ಗಾಯತ್ರಿ ರಾಘವೇಂದ್ರ ಅವಳ ಪುತ್ರಿ.  2009ರಲ್ಲಿ ಜನಿಸಿದ ಈಕೆ ತನ್ನ ಮೂರನೇ ವರ್ಷಕ್ಕೇ ಯಕ್ಷಗಾನದ ಗೆಜ್ಜೆ ಕಟ್ಟಿ, ಐದನೇ ವರ್ಷಕ್ಕೇ ಯಕ್ಷಗಾನದಲ್ಲಿ ವಿಶ್ವಶಾಂತಿ ಸಂದೇಶ ರೂಪಕ ಪ್ರದರ್ಶಿಸಿದ ಬಾಲಕಿ. ಈಗಾಗಲೇ ರಾಜ್ಯ ಹೊರ ರಾಜ್ಯಗಳಲ್ಲಿ ಯಕ್ಷಗಾನದಲ್ಲಿನ ವಿಶ್ವಶಾಂತಿ ಸಂದೇಶ ಯಕ್ಷ ನೃತ್ಯ ರೂಪಕವನ್ನು ಯಶಸ್ವಿಯಾಗಿ ಪ್ರದರ್ಶಿಸಿದ್ದಾಳೆ.

RELATED ARTICLES  ಶ್ರೀನಿಧಿ ತೆಗ್ಸೆ ಅಬಾಕಸ್ ಸ್ಪರ್ಧೆಯಲ್ಲಿ ರಾಜ್ಯಕ್ಕೆ ಪ್ರಥಮ


ಈಕಗೆ ಜನನಿಯೇ ಮೊದಲ ಗುರು. ಮುಂದಿನ ಔಪಚಾರಿಕ ಶಿಕ್ಷಣವನ್ನು ಗುರು ಜಿ.ಎಸ್.ಭಟ್ಟ ಪಂಚಲಿಂಗ ಅವರಿಂದ ಪಡೆದುಕೊಳ್ಳುತ್ತಿದ್ದಾಳೆ. ತುಳಸಿ ಪ್ರಸ್ತುತ ಶಿರಸಿಯ ಪ್ರತಿಷ್ಠಿತ ಲಯನ್ಸ ಶಿಕ್ಷಣ ಸಂಸ್ಥೆಯಲ್ಲಿ ಎರಡನೇ ವರ್ಗದ ವಿದ್ಯಾರ್ಥಿನಿ. ರಾಜ್ಯ ಹೊರರಾಜ್ಯಗಳಲ್ಲಿ ಗಮನ ಸೆಳೆದ ವಿಶ್ವಶಾಂತಿ ರೂಪಕಕ್ಕೆ ಯಕ್ಷನಿಧಿ, ಮಂಜುನಾಥ ಭಾಗವತ್ ಸಂಸ್ಮರಣ ಬಾಲ ಪುರಸ್ಕಾರ, ಬಾಲ ಪುರಸ್ಕಾರ, ಬಾಲ ಚೈತನ್ಯ, ಶ್ರೀದುರ್ಗಾ ಯಕ್ಷ ನೃತ್ಯ ಮಯೂರಿ ಪ್ರಶಸ್ತಿಗಳು ಸಂದಿವೆ. ತುಳಸಿ ಅನೇಕ ಹಿರಿಯ ಕಲಾವಿದರ ಜೊತೆಗೂ ಪಾತ್ರ ಮಾಡಿದ್ದಾಳೆ. ತನ್ನ ಎರಡನೇ ವರ್ಷಕ್ಕೆ ಸಂಗೀತ ವಾದ್ಯಗಳೊಂದಿಗೆ ಹಾಡಿ ಗಮನ ಸೆಳೆದಿದ್ದಳು ಎಂಬುದು ಉಲ್ಲೇಖನೀಯ.

RELATED ARTICLES  ರಾಮಕೃಷ್ಣ ಹೆಗಡೆ ಜನ್ಮದಿನೋತ್ಸವ ಅಗಸ್ಟ 29ಕ್ಕೆ

•M S. Shobith Mudkani