ಮೇಷ:- ಮತ್ತೊಬ್ಬರ ಆಶ್ವಾಸನೆಯನ್ನು ಪೂರ್ತಿಯಾಗಿ ನಂಬಬೇಡಿ. ಅದರಿಂದ ತೊಂದರೆಯೇ ಹೆಚ್ಚಾಗುವ ಸಾಧ್ಯತೆ ಇದೆ. ಪರಾಕ್ರಮ ಕೆಲಸಗಳಲ್ಲಿ ಜಯವುಂಟಾಗುವುದು. ಆರ್ಥಿಕ ಸ್ಥಿತಿಯನ್ನು ಸಮತೋಲನಗೊಳಿಸಲು ಸಾಲ ಮಾಡುವುದು ಅನಿವಾರ್ಯವಾಗುವುದು.

ವೃಷಭ:- ಕೈಯಲ್ಲಿ ಬೆಣ್ಣೆ ಇಟ್ಟುಕೊಂಡು ತುಪ್ಪಕ್ಕಾಗಿ ಅಲೆದಾಡಿದರು ಎನ್ನುವಂತಾಗಿದೆ ನಿಮ್ಮ ಪರಿಸ್ಥಿತಿ. ಆದಷ್ಟು ನಿಜಸ್ಥಿತಿ ಬಗ್ಗೆ ನೈಜವಾಗಿ ತಿಳಿದುಕೊಂಡು ಕಾರ್ಯ ನಿರ್ವಹಿಸಿದಲ್ಲಿ ಹೆಚ್ಚಿನ ಅನುಕೂಲ ಕಂಡು ಬರುವುದು. ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು.
ಮಿಥುನ:- ಕಲೆ ಮತ್ತು ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಸಾಧಕರಿಗೆ ಬಹಳ ವಿಶೇಷ ಎನಿಸುವುದು. ಜನ್ಮಸ್ಥ ರಾಹುವಿನ ಪ್ರವೇಶವು ಮಾನಸಿಕ ಕಿರಿಕಿರಿಯನ್ನು ಉಂಟು ಮಾಡುವುದು. ದುರ್ಗಾ ಸ್ತೋತ್ರವನ್ನು ಪಠಿಸಿ. ಒಳಿತಾಗುವುದು.

ಕಟಕ:- ಪೊರೆ ಕಳಚಿದ ಹಾವಿನಂತೆ ನೀವು ಹೊಸ ಹುರುಪಿನಿಂದ ಕಾರ್ಯ ನಿರ್ವಹಿಸುವಿರಿ. ಜನ್ಮಸ್ಥ ರಾಹುವಿನ ಬಿಡುಗಡೆಯಿಂದ ನಿಮ್ಮ ಮುಂದಿನ ದಿನಗಳು ಉತ್ತಮವಾಗಿರುತ್ತವೆ. ಮನಸ್ಸಿನ ಬಿಕ್ಕಟ್ಟುಗಳು ದೂರಾಗಿ ಮನೋಕಾಮನೆಗಳು ಪೂರ್ಣಗೊಳ್ಳುವವು.

RELATED ARTICLES  ಕಂಬಳ ವಿಚಾರಣೆ ಮುಂದೂಡಿಕೆ.

ಸಿಂಹ:- ವಿಶೇಷವಾಗಿ ಕುಲದೇವರನ್ನು ಧ್ಯಾನಿಸಿ. ಮನೆ ಮತ್ತು ಮನದಲ್ಲಿ ತುಂಬಿಕೊಂಡಿರುವ ಕಾರ್ಮೋಡಗಳು ಕರಗಿ ನೀರಾಗುವವು. ಹಣಕಾಸಿನ ಪರಿಸ್ಥಿತಿ ಉತ್ತಮವಾಗುವುದು. ವಿದೇಶದಿಂದ ಬಂಧುಗಳು ಸಹಾಯ ಹಸ್ತ ನೀಡುವರು.

ಕನ್ಯಾ:- ನಿಮ್ಮ ಚೈತನ್ಯದ ಮೂಲಕ ಸವಾಲುಗಳನ್ನೆಲ್ಲ ಬೇಗ ಗೆಲ್ಲಬಲ್ಲಿರಿ. ಬಹುದಿನದ ಕನಸು ನನಸಾಗುವ ಕಾಲವಿದು. ಗುರುವಿನ ಆಶೀರ್ವಾದ ಪಡೆದು ಮುನ್ನುಗ್ಗಿ. ಖಂಡಿತವಾಗಿಯೂ ಯಶಸ್ಸನ್ನು ಹೊಂದುವಿರಿ.

ತುಲಾ:- ಮಾನಸಿಕ ತಳಹದಿಯಲ್ಲಿ ಏನೋ ಒಂದು ರೀತಿಯ ಬಿರುಗಾಳಿಯ ಸುಳಿ ಇರುವಂತೆ ಭಾಸವಾದೀತು. ದ್ವಿತೀಯ ಧನಸ್ಥಾನದ ಗುರು ನಿಮಗೆ ವಿವಿಧ ಮೂಲಗಳಿಂದ ಹಣಕಾಸಿನ ನೆರವನ್ನು ದಯಪಾಲಿಸುವನು.

ವೃಶ್ಚಿಕ:- ಜಾಣತನ, ತಾರ್ಕಿಕ ನಡೆ ಎಲ್ಲವೂ ನಿಮ್ಮ ಶಕ್ತಿಯೇ ಹೌದು. ಆದರೆ ಮುಂಗೋಪವನ್ನು ಮಾತ್ರ ದೂರ ಮಾಡಿಕೊಳ್ಳುವುದು ಒಳ್ಳೆಯದು. ನಿಮ್ಮ ಮನೋಕಾಮನೆಗಳು ಬೇಗನೆ ಈಡೇರುವವು. ನೂತನ ಕಾರ್ಯಾರಂಭ ಮಾಡಲು ಇದು ನೆರವಾಗುವುದು.

RELATED ARTICLES  2019 ಹಾಗೂ 2020 ನೇ ಸಾಲಿನ ಹವ್ಯಕ ವಿಶೇಷ ಪ್ರಶಸ್ತಿಗಳ ಪಟ್ಟಿ ಪ್ರಕಟ

ಧನುಸ್ಸು:- ಇರದಿರುವುದನ್ನು ನೆನೆಸಿಕೊಂಡು ಕೊರಗುತ್ತ ಕೂರುವುದನ್ನು ಬಿಡಿ. ಸಾಧನೆಯ ದಾರಿ ನಿರಾಳ ಆಗಲಿದೆ. ಆಂಜನೇಯ ಸ್ವಾಮಿ ಸ್ತೋತ್ರವನ್ನು ಪಠಿಸಿ. ಸಂಜೆ ಶಿವಾಲಯದಲ್ಲಿ ಶಿವನ ದರ್ಶನ ಮಾಡಿಕೊಂಡು ಬನ್ನಿ.

ಮಕರ:- ಕೈಯಲ್ಲಿರುವ ಕೆಲಸವನ್ನು ಬಿಟ್ಟು ಅನ್ಯವಾದ ಇನ್ನೊಂದನ್ನು ತಡಕಾಡಲು ಹೋಗಬೇಡಿ. ಗುರುವಿನ ಶುಭ ಸಂಚಾರವಿದ್ದರೂ ಸಾಡೇಸಾತ್‌ ಶನಿ ಕಿರಿಕಿರಿಯನ್ನುಂಟು ಮಾಡುವುದು. ಆಂಜನೇಯ ಸ್ವಾಮಿ ಸ್ತೋತ್ರವನ್ನು ಪಠಿಸುವುದು ಒಳ್ಳೆಯದು.

ಕುಂಭ:- ಅಸಲು ಹಣ ಸಂವರ್ಧನೆ, ಮೂಲಧನ ಕಡಿತ ಇತ್ಯಾದಿಗಳಿಂದ ತೊಡಕುಗಳು ಎದುರಾಗುವವು. ನೀವು ನಿಮ್ಮ ಕಾರ್ಯವನ್ನು ನಿಷ್ಠೆಯಿಂದ ಮಾಡಿ. ಭಗವಂತನು ನಿಮ್ಮ ಸಹಾಯಕ್ಕೆ ನಿಲ್ಲುವನು. ಇದರಿಂದ ಒಳಿತಾಗುವುದು.

ಮೀನ:- ಅವಸರ ಮಾಡಿ ಎಡವಟ್ಟುಗಳನ್ನು ಮಾಡಿಕೊಳ್ಳುವಂತಹ ಸಾಧ್ಯತೆಗಳು ಅಧಿಕವಾಗಿದೆ. ಸ್ವಲ್ಪ ತಾಳ್ಮೆ ಇದ್ದಲ್ಲಿ ಒಳಿತಾಗುವುದು. ತಾಯಿ ವರ್ಗದವರೊಂದಿಗೆ ವಾದ ವಿವಾದ ಬೇಡ. ಆಸ್ತಿಯ ವಿಚಾರದಲ್ಲಿ ನಿಧಾನವಾಗಿ ಪ್ರಗತಿ ಉಂಟಾಗುವುದು.