ಡಾ.ಪ್ರಸನ್ನ ಹೊನ್ನಾವರ, ಇವರು 2016 ರಲ್ಲಿ ಭಾರತದ ಚಂಡಿಘಡದಲ್ಲಿರುವ ಅತ್ಯುನ್ನತ ಪ್ರಧಾನ ವೈದ್ಯಕೀಯ ಸಂಸ್ಥೆಯಲ್ಲಿ ತಮ್ಮ ಡಾಕ್ಟರೇಟ್ ಪದವಿ ಸಂಶೋಧನಾ ಕಾರ್ಯ ನಿರ್ವಹಿಸುತ್ತಿರುವಾಗ ಪ್ರೊ|| ಆರ್.ನಾಥ ಚಿನ್ನದ ಪದಕವನ್ನು ಕೇಂದ್ರ ಸಚಿವರಾದ ಸನ್ಮಾನ್ಯ ಜೆ.ಪಿ.ನಡ್ಡಾರವರು 2019 ನೇ ಫೆಬ್ರವರಿ 9ರಂದು ಇವರಿಗೆ ಪ್ರಧಾನ ಮಾಡಿದರು.

RELATED ARTICLES  ಸಂಬಂಧಿಕರ ಮನೆಯಲ್ಲಿ ಉಳಿಯಲು ಬಂದ ಮಹಿಳೆ ನಾಪತ್ತೆ..!


ಈ ಮೊದಲು ಇವರು ಡಾಕ್ಟರೇಟ್ ಪದವಿ ಸಂಶೋಧನಾ ಕಾರ್ಯ ನಿರ್ವಹಿಸುತ್ತಿರುವಾಗ 2 ಅಂತರಾಷ್ಟ್ರೀಯ ಪ್ರಶಸ್ತಿ ಹಾಗೂ 4 ರಾಷ್ಟ್ರೀಯ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಪ್ರಸ್ತುತ ಇವರು ನೆದರ್‍ಲ್ಯಾಂಡಿನ ಆರುಬಾದ ಝೇವಿಯರ್ ಯುನಿವರ್ಸಿಟಿಯಲ್ಲಿ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.


ಇವರು ಹೊನ್ನಾವರ ಶ್ರೀಮತಿ ಗೀತಾ ಹಾಗೂ ಗಜಾನನ ಹೊನ್ನಾವರ ಇವರ ಸುಪುತ್ರರಾಗಿದ್ದು, ಶ್ರೀಮತಿ ಕಮಲಾ ಹಾಗೂ ಶಿವಾ ನಾರಾಯಣ ನಾಯ್ಕ ಇವರ ಮೊಮ್ಮಗನಾಗಿದ್ದಾರೆ. ಇವರ ಯಶಸ್ಸಿಗೆ ಇವರ ಪತ್ನಿ ಡಾ||ಶೀತಲ್ ಹಾಗೂ ಸಹೋದರ ಕಿರಣ ಮತ್ತು ಕುಟುಂಬದ ಎಲ್ಲರೂ ಶುಭಕೋರಿ ಅಭಿನಂದಿಸಿದ್ದಾರೆ.

RELATED ARTICLES  ಕರೆದು ನೀಡಿದಾಗ ಆತ್ಮತೃಪ್ತಿ :ಬಾಲಕೃಷ್ಣ ಕೊರಗಾಂಕರ