ಮೇಷ:-ಮನಸ್ಸಿನ ಕಾಮನೆಗಳು ಪೂರ್ಣಗೊಳ್ಳುವವು. ಅಂದುಕೊಂಡಿದ್ದನ್ನು ಸಾಧಿಸುವಿರಿ. ಕುಟುಂಬ ಸದಸ್ಯರೊಂದಿಗೆ ದೇವರ ದರ್ಶನ ಪಡೆಯುವಿರಿ. ಮನಸ್ಸಿಗೆ ಮುದ ನೀಡುವ ದಿನವಿದು. ಆರ್ಥಿಕ ಸ್ಥಿತಿಗತಿಗಳು ಉತ್ತಮವಾಗಿವೆ.

ವೃಷಭ:- ಸ್ನೇಹಿತರ ಮನೆಯ ಸಡಗರದಲ್ಲಿ ಪಾಲ್ಗೊಳ್ಳುವಿರಿ. ನಿಮ್ಮ ಇಷ್ಟದಂತೆ ಕೆಲಸಗಳು ನಡೆಯುವವು. ನೂತನ ಕೆಲಸಗಳನ್ನು ಕೈಗೆತ್ತಿಕೊಳ್ಳಲು ಸಕಾಲವಿದು.

ಮಿಥುನ:- ಕೆಲಸದಲ್ಲಿ ಬಂಧುಗಳ ಹಾಗೂ ಸ್ನೇಹಿತರ ಸಹಕಾರ ದೊರೆಯುವುದು. ಮನೆಯ ಅಲಂಕಾರಿಕ ವಸ್ತುಗಳ ಖರೀದಿಗೆ ಹಣ ಖರ್ಚು ಮಾಡುವಿರಿ. ಸಾವಧಾನದಿಂದ ನಿರ್ಧಾರ ತೆಗೆದುಕೊಳ್ಳುವಿರಿ.

ಕಟಕ:- ವಿವಾಹ ಯೋಗ್ಯರಿಗೆ ಕಂಕಣಬಲ ಕೂಡಿಬರುವುದು. ಮದುವೆ ಮಾತುಕತೆ ಫಲಪ್ರದವಾಗುವುದು. ಮನೆಯಲ್ಲಿ ಸಂತಸ ಮೂಡುವುದು. ಸಂಗಾತಿಯ ತಮಾಷೆಯ ಮಾತಿಗೆ ಕೋಪಗೊಳ್ಳಬೇಡಿ. ಮಕ್ಕಳ ಪ್ರಗತಿ ಸಂತಸ ನೀಡುವುದು.

ಸಿಂಹ:- ವ್ಯಾಪಾರ ವ್ಯವಹಾರದಲ್ಲಿ ನಿಗದಿತ ಲಾಭ ಬರುವುದು. ಹಣಕಾಸಿನ ನೆರವು ಕೇಳಿಕೊಂಡು ನಿಮ್ಮ ಸ್ನೇಹಿತರು ನಿಮ್ಮಲ್ಲಿ ಬರುವ ಸಾಧ್ಯತೆ ಇದೆ. ನಿಮ್ಮ ಹಣಕಾಸಿನ ಸ್ಥಿತಿ ಉತ್ತಮವಾಗಿರುವುದು. ಹಿರಿಯರ ಆರೋಗ್ಯದ ಕಡೆ ಗಮನ ನೀಡಿ.

RELATED ARTICLES  ಸ್ಕೌಟ್ ಗೈಡ್ ದಶಮಾನೋತ್ಸವ ಸರಳ ಸಮಾರಂಭ

ಕನ್ಯಾ:- ವಾಹನ, ನಿವೇಶನ ಖರೀದಿಸುವವರಿಗೆ ಸಕಾಲವಿದು. ಮಹತ್ತರ ಕೆಲಸದ ಒಪ್ಪಂದಕ್ಕೆ ಸಹಿ ಹಾಕುವಿರಿ. ಕೆಲಸಗಳು ದೈವಕೃಪೆಯಿಂದಾಗಿ ಪೂರ್ಣಗೊಳ್ಳುವವು. ಸಣ್ಣ ವಿಷಯಗಳಿಗೆ ತಲೆ ಕೆಡಿಸಿಕೊಳ್ಳಬೇಡಿ.

ತುಲಾ:-ಶ್ರಮಕ್ಕೆ ತಕ್ಕ ಪ್ರತಿಫಲವಿದೆ. ಸದಾ ಹೊರ ಜಗತ್ತಿನ ಚಿಂತೆ ಮಾಡುವ ನೀವು ಕುಟುಂಬ ಸದಸ್ಯರ ಬೇಕು ಬೇಡಗಳಿಗೆ ಸ್ಪಂದಿಸುವುದು ಉತ್ತಮ. ನಿಮ್ಮ ಒಳ್ಳೆಯ ಕೆಲಸಗಳಿಗೆ ಕುಟುಂಬ ಸದಸ್ಯರ ಬೆಂಬಲ ದೊರೆಯುವುದು.

ವೃಶ್ಚಿಕ:- ಒಳ್ಳೆಯ ಕೆಲಸಗಳಿಗೆ ಅನೇಕ ವಿಘ್ನಗಳು ತಲೆದೋರುವವು. ಹಿರಿಯರ ಮಾರ್ಗದರ್ಶನದಂತೆ ನಡೆದರೆ ಒಳಿತಾಗುವುದು. ಆಂಜನೇಯ ಜಪ ಮಾಡಿ. ಆರೋಗ್ಯದ ಕಡೆ ಗಮನ ನೀಡಿ.

RELATED ARTICLES  ಜನತೆಯ ಕಷ್ಟಕ್ಕೆ ರಾಜ್ಯ ಸರ್ಕಾರ ಸ್ಪಂದಿಸದೇ ದುಷ್ಟ ರಾಜಕಾರಣ ಮಾಡುತ್ತಿದೆ: ಜಿ.ಪಂ‌ ಸದಸ್ಯೆ ಶ್ರೀಕಲಾ ಶಾಸ್ತ್ರಿ

ಧನುಸ್ಸು:- ಲೇವಾದೇವಿ ವ್ಯವಹಾರದಲ್ಲಿ ಧನಾಗಮನವಿದೆ. ವಿದ್ಯಾರ್ಥಿಗಳಿಗೆ ಕನಸು ನನಸಾಗುವ ಕಾಲ. ಬಾಕಿ ಬರಬೇಕಾಗಿದ್ದ ಹಣ ನಿಮ್ಮ ಕೈ ಸೇರುವುದು. ಇದರಿಂದಾಗಿ ನಿಮ್ಮ ಆರ್ಥಿಕ ಸಮಸ್ಯೆಗೆ ಪರಿಹಾರ ದೊರೆಯುವುದು.

ಮಕರ:-ಕೆಲಸಗಳಲ್ಲಿ ಹೆಚ್ಚಿನ ಲಾಭ ಕಂಡು ಬರುವುದು. ಕೆಲಸಗಳು ಸುಗಮವಾಗಲು ಹಿರಿಯರ ಮಾರ್ಗದರ್ಶನ ಪಡೆಯಿರಿ. ಆರ್ಥಿಕ ಸ್ಥಿತಿ ಉತ್ತಮವಾಗಿರುವುದು. ಹಿರಿಯರ ಆರೋಗ್ಯದ ಕಡೆ ಗಮನ ನೀಡಿ.

ಕುಂಭ:- ಮುಂದಾಲೋಚನೆಯಿಂದ ಹಮ್ಮಿಕೊಂಡ ಕಾರ್ಯಗಳಲ್ಲಿ ಯಶಸ್ಸು ದೊರೆಯುವುದು. ನಿಮ್ಮ ಮೇಲಧಿಕಾರಿಗಳು ನಿಮ್ಮ ಕಾರ್ಯ ವೈಖರಿಯನ್ನು ಮೆಚ್ಚುವರು. ಸಂಶೋಧನಾತ್ಮಕ ಲೇಖನಗಳಿಗೆ ಮನ್ನಣೆ ದೊರೆಯುವುದು.

ಮೀನ:- ವೃತ್ತಿಯಲ್ಲಿ ಸ್ವಲ್ಪ ಪರಿಶ್ರಮ ಅಗತ್ಯ. ಸಹೋದ್ಯೋಗಿಗಳೊಂದಿಗೆ ತಾಳ್ಮೆಯಿಂದ ವ್ಯವಹರಿಸಿ. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ಪ್ರಯಾಣ ವೇಳೆ ನರಸಿಂಹ ದೇವರ ಪ್ರಾರ್ಥನೆ ಮಾಡಿ.