ಕುಮಟಾ: ಮಾ. 31 ರಂದು ಸಂಜೆ 4 ಗಂಟೆಗೆ ಕುಮಟಾ ಮಣಕಿ ಮೈದಾನದಲ್ಲಿ ನಾನು ಚೌಕಿದಾರ ಎಂಬ ಕಾರ್ಯಕ್ರಮ ನಡೆಯಲಿದೆ. ಅಂದು ಮೋದಿ ಅವರ ನೇರ ಪ್ರಸಾರ ಕಾರ್ಯಕ್ರಮವಿದ್ದು, ಸಾರ್ವಜನಿಕರು ಕೇಳುವ ಪ್ರಶ್ನೆಗಳಿಗೆ ವಿಡಿಯೋ ಕಾನ್ಪರೆನ್ಸ ಮೂಲಕ ಮೋದಿ ಉತ್ತರಿಸಲಿದ್ದಾರೆ.

RELATED ARTICLES  ಉತ್ತರಕನ್ನಡದ ಇಂದಿನ ಕೊರೋನಾ ಅಪ್ಡೇಟ್

ಇದು ಜಿಲ್ಲಾ ಮಟ್ಟದ ಕಾರ್ಯಕ್ರಮವಾಗಿದ್ದು, ಸಾವಿರಾರು ಜನರು ಆಗಮಿಸುವ ನಿರೀಕ್ಷೆಯಿದೆ.

ಕಾನ್ಫರೆನ್ಸ ನಂತರ ಫಲಾನುಭವಿಗಳ ಸಮಾವೇಶ ನಡೆಯಲಿದ್ದು, ಭಾರತ ತಂಡದ ಥ್ರೋ ಬಾಲ್ ನಾಯಕಿ ಹಾಗೂ 10 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಚಿನ್ನದ ಪದಕ ಗೆದ್ದ ಕನ್ನಡತಿ ಕೃಪಾ ಪ್ರಸಾದ ಆಗಮಿಸಲಿದ್ದಾರೆ. ಸುಮುಖ ಬೆಟ್ಟಗೇರಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಕೊನೆಯಲ್ಲಿ ಸೈನಿಕರ ಸಾಹಸ ತೋರಿಸುವ ಉರಿ ಸಿನಿಮಾ ಪ್ರದರ್ಶನ ನಡೆಯಲಿದೆ ಎಂದರು.

RELATED ARTICLES  ಬಿಜೆಪಿಯಿಂದ ಕುಮಟಾ ಪುರಸಭೆಯ ಪ್ರತಿಯೊಂದು ವಾರ್ಡ್ ಗಳ ರಸ್ತೆ ಸುಧಾರಣೆ ಆಗಿದೆ : ದಿನಕರ ಶೆಟ್ಟಿ.