ಯಲ್ಲಾಪುರ: ಮಂಡ್ಯದಲ್ಲಿ ಬಸ್ಸು ನೀರಿನಲ್ಲಿ ಬಿದ್ದಾಗ ಮೃತಪಟ್ಟವರಿಗೆ ಒಮ್ಮೆಲೇ 10 ಲಕ್ಷ ನೀಡುವ ಮುಖ್ಯಮಂತ್ರಿ ಉತ್ತರಕನ್ನಡ ಜಿಲ್ಲೆಯ ಕಾರವಾರದ ಕೂರ್ಮಗಡ ಜಾತ್ರೆಯಲ್ಲಿ ದೋಣಿ ಮುಗುಚಿ ದುರ್ದೈವಿಗಳು ಮರಣ ಹೊಂದಿ ಕೆಲವು ತಿಂಗಳಾದರೂ ಅವರಿಗೆ ಬರಬೇಕಾದ ರಾಜ್ಯ ಸರಕಾರದ ಪರಿಹಾರ ಇನ್ನೂ ಬಂದಿಲ್ಲ ಎಂದು ವಿಶಾದ ವ್ಯಕ್ತಪಡಿಸಿದ ಬಿಜೆಪಿ ರಾಜ್ಯ ವಕ್ತಾರ ಪ್ರಮೋದ ಹೆಗಡೆ ಕರ್ನಾಟಕ ರಾಜ್ಯದ ಅಪವಿತ್ರ ಮೈತ್ರಿಯ ಆಕಸ್ಮಿಕ ಸಾಂದರ್ಭಿಕ ಶಿಶುವಿನಿಂದ ಉತ್ತರ ಕನ್ನಡ ಜಿಲ್ಲೆಗೆ ಸತತವಾಗಿ ಅನ್ಯಾಯವಾಗುತ್ತಿದೆ ಎಂದು ಟೀಕಿಸಿದ್ದಾರೆ.

RELATED ARTICLES  ಅಪವಿತ್ರ ಮೈತ್ರಿ ವಿರೋಧಿಸಿ 'ಕರಾಳ ದಿವಸ್': ಕಾರವಾರದಲ್ಲಿ ರೂಪಾಲಿ ನಾಯ್ಕ ನೇತ್ರತ್ವದಲ್ಲಿ ಪ್ರತಿಭಟನೆ.

ಅವರು ಈ ಕುರಿತು ಹೇಳಿಕೆ ನೀಡಿ, ಕನ್ನಡ ಸಂಸ್ಕೃತಿ ಇಲಾಖೆ ಜಾತಿ ಬ್ರಷ್ಟಾಚಾರದಿಂದ ಮುಳುಗಿದೆ. ನೂರಾರು ಸಂಸ್ಥೆಗಳ ಸಾಂಸ್ಕೃತಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆದರೂ ಲಕ್ಷಾಂತರ ರೂಪಾಯಿ ಬರಬೇಕಾದ ಅನುದಾನ ಇನ್ನೂ ಬರಲೇ ಇಲ್ಲ. ಈಗಾಗಲೇ ಕರ್ನಾಟಕ ರಾಜ್ಯ ಬಜೆಟ್‍ನಲ್ಲಿ ಉತ್ತರಕನ್ನಡ ಜಿಲ್ಲೆಗೆ ಯಾವುದೇ ಹೊಸ ಕಾಮಗಾರಿ ನೀಡದೇ ಪರಮ ಅನ್ಯಾಯ ಮಾಡಿದೆ.

RELATED ARTICLES  ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಜಿಲ್ಲಾಧ್ಯಕ್ಷರಾಗಿ ಸದಾನಂದ ದೇಶಭಂಡಾರಿ ನೇಮಕ

ಇಂತಹ ಮೈತ್ರಿ ಸರಕಾರದ ನಿಷ್ಕ್ರಿಯತೆಯನ್ನು ಬಿಜೆಪಿ ಖಂಡಿಸುತ್ತದೆ ಹಾಗೂ ಈ ಅನ್ಯಾಯ ಸರಿಪಡಿಸ ಬೇಕೆಂದು ಅವರು ಒತ್ತಾಯಿಸಿದ್ದಾರೆ.