ಕಾರವಾರ: ಜಿಲ್ಲೆಯಲ್ಲಿ ಜ್ವಲಂತ ಸಮಸ್ಯೆಗಳಿವೆ. ಸೀಬರ್ಡ್, ಕೈಗಾ ಅಣುಸ್ಥಾವರದಂಥ ಬೃಹತ್ ಯೋಜನೆಗಳಿವೆ. ಇಂಥ ಸೂಕ್ಷ್ಮ ಜಿಲ್ಲೆಗೆ ಈವರೆಗೆ ಹಾಲಿ ಸಂಸದರು ಸ್ಪಂದಿಸಿಲ್ಲ ಎಂದು ಜೆಡಿಎಸ್- ಕಾಂಗ್ರೆಸ್ ಮೈತ್ರಿ ಪಕ್ಷದ ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಹೇಳಿದರು.

ತಮ್ಮ ಸ್ವಗೃಗದಲ್ಲಿ ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿದ ಅವರು, ಇಂಥವರಿಗೆ ಈ ಬಾರಿ ಇಲ್ಲಿನ ಮತದಾರರು ತಕ್ಕ ಪಾಠ ಕಲಿಸಲಿದ್ದಾರೆ. ಐದು ಬಾರಿಯೂ ಬೇರೆ ಅಲೆಯಲ್ಲಿ ಅವರು ಗೆಲುವು ಸಾಧಿಸಿದ್ದರು. ಈ ಬಾರಿ ಅವರು ಎಲ್ಲಿ ಪ್ರಚಾರಕ್ಕೆ ಹೋದರೂ ಯುವಕರು ಅವರನ್ನು ಪ್ರಶ್ನಿಸುತ್ತಿದ್ದಾರೆ. ಅಂಬೇಡ್ಕರ್ ಸಂವಿಧಾನ ಬದಲು ಮಾಡುತ್ತೇವೆ ಎಂದು ಹೇಳಿ ಅವರು ಬಿಜೆಪಿಗೂ ಮುಜುಗರ ಉಂಟು ಮಾಡಿದ್ದರು‌. ಲೋಕಸಭೆಯಲ್ಲಿ ನಂತರ ಅವರು ಕ್ಷಮೆ ಯಾಚನೆ ಮಾಡಿದ್ದರು. ಪತ್ರಕರ್ತರು, ಸಾಹಿತಿ ಸೇರಿದಂತೆ ಸಮಾಜದಲ್ಲಿನ ಒಳ್ಳೆಯ ಸ್ಥಾನದಲ್ಲಿರುವವರಿಗೆ ಅವರು ಬಹಳ ಹಗುರವಾಗಿ ಮಾತನಾಡಿದ್ದಾರೆ. ಧರ್ಮದ ಆಧಾರದ ಮೇಲೆ ಷಡ್ಯಂತರ ಮಾಡಿ ರಾಜಕಾರಣ ಮಾಡುವವರು. ಇರಾನ್ ನಿಂದ ಬಿಟುಮಿನ್ ತಂದು ತನ್ನ ಸಂಸ್ಥೆಯ ಹೆಸರಿನಲ್ಲಿ ಉದ್ಯಮ ನಡೆಸುತ್ತಾರೆ. ಅಪರಾಧ ಪ್ರಕರಣಗಳನ್ನು ಹೊಂದಿರುವವರೊಂದಿಗೆ ಪ್ರಚಾರಕ್ಕೆ ತೆರಳುತ್ತಾರೆ. ಅಂಥವರಿಗೆ ಈ ಬಾರಿ ಮತದಾರರು ತಕ್ಕ ಪಾಠ ಕಲಿಸಬೇಕು ಎಂದರು.

RELATED ARTICLES  ರಾಜ್ಯ ಸರ್ಕಾರ ಕುಂಭಕರ್ಣನಂತೆ ನಿದ್ರಿಸುತ್ತಿದೆ: ಅನಂತಕುಮಾರ ಹೆಗಡೆ