ಕುಮಟಾದ ಕಮಲಾ ಬಾಳಿಗಾ ಪ್ರಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಪ್ರೀತಿ ಭಂಡಾರಕರ್ ರವರು ಹೆಗಡೆಯ “ಆಯಿ ಪುಸ್ತಕಮನೆ” ಗೆ 70 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದರು. ಆಯಿ ಪುಸ್ತಕ ಮನೆಯ ರವೀಂದ್ರ ಭಟ್ಟ ಸೂರಿ ಪುಸ್ತಕಗಳನ್ನು ಸ್ವೀಕರಿಸಿ ಡಾ. ಪ್ರೀತಿ ಭಂಡಾರಕರ್ ರವರ ಪುಸ್ತಕ ಪ್ರೀತಿ ಹಾಗೂ ಕೊಡುಗೆಗಾಗಿ ಕೃತಜ್ಞತೆ ಸಲ್ಲಿಸಿದರು.

RELATED ARTICLES  ರಾಜ್ಯ ಮಟ್ಟದ ಭಗವದ್ಗೀತಾ ಸ್ಪರ್ಧೆಯಲ್ಲಿ ವಿಜೇತರಾದ ಕೊಂಕಣ ವಿದ್ಯಾರ್ಥಿಗಳು

ಈ ಸಂದರ್ಭದಲ್ಲಿ ” ಯಶಸ್ವಿ” ಸಂಘಟನೆಯ ಗಣೇಶ ಜೋಷಿ, ಜಯದೇವ ಬಳಗಂಡಿ ಉಪಸ್ಥಿತರಿದ್ದರು. ಇತ್ತೀಚೆಗೆ ಹೆಗಡೆಯಲ್ಲಿ ತಮ್ಮ ತಾಯಿಯ ನೆನಪಿನಲ್ಲಿ ರವೀಂದ್ರ ಭಟ್ಟ ಸೂರಿಯವರು ” ಆಯಿ ಪುಸ್ತಕ ಮನೆ” ಎಂಬ ವಾಚನಾಲಯವನ್ನು ಪ್ರಾರಂಭಿಸಿದ್ದು ಮಾದ್ಯಮಗಳ ಮೂಲಕ ಜನರನ್ನು ತಲ್ಪಿದ್ದು ಈ ಉತ್ತಮ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿತ್ತು.

RELATED ARTICLES  ಗೋಕರ್ಣದಲ್ಲಿ ಉಚಿತವಾಗಿ ನೀರು ವಿತರಿಸುವ ನಾಲ್ಕನೇ ವರ್ಷದ ಕಾರ್ಯಕ್ರಮಕ್ಕೆ ಚಾಲನೆ

ಪತ್ರಿಕೆಯೊಂದರಲ್ಲಿ ಈ ಕುರಿತಾದ ವರದಿ ಓದಿದ್ದ ಡಾ.ಪ್ರೀತಿ ಭಂಡಾರಕರ ಅಂದು ಮೆಚ್ಚುಗೆ ವ್ಯಕ್ತಪಡಿಸಿ ಇಂದು ಅಮೂಲ್ಯ ಕೊಡುಗೆ ನೀಡಿದ್ದಾರೆ.