ಕುಮಟಾ: ನಾಡಿನ ಖ್ಯಾತ ಕವಿ ಡಾ.ಬಿ.ಎ.ಸನದಿ ಇಂದು ಬೆಳಿಗ್ಗೆ ನಾಲ್ಕು ಗಂಟೆಗೆ ವಿಧಿವಶರಾದರು. ಕುಮಟಾ ಹೆರವಟ್ಟಾದ ನಿವಾಸದಲ್ಲಿ ಅವರು ಕೊನೆಯುಸಿರೆಳೆದರು. ಅವರ ಮೃತ ದೇಹವನ್ನು ಅವರ ಹುಟ್ಟೂರಾದ ಬೆಳಗಾವಿ ಸಿಂದೊಳ್ಳಿಗೆ ಕೊಂಡೊಯ್ಯಲು ಸಿದ್ಧತೆ ನಡೆದಿದೆ.
ಹಿರಿಯ ಮಾನವ್ಯ ಕವಿ ಎಂದೇ ಬಿಂಬಿತರಾದ ಸನದಿಯವರ ಅಗಲುವಿಕೆಯಿಂದ ಸಾಹಿತ್ಯ ಕ್ಷೇತ್ರ ಬಡವಾಗಿದೆ ಎಂದೇ ಅಭಿಪ್ರಾಯ ಪಡಲಾಗುತ್ತಿದೆ.
ಸನದಿಯವರ ಕುರಿತು.
ಮನೆಯಲ್ಲಿ ‘ಬಾಬಾ ಸಾಹೇಬ ಅಹಮದ್ ಸಾಹೇಬ ಸನದಿ’ ಎಂಬ ತೊಟ್ಟಿಲ ಹೆಸರಿನ ಖ್ಯಾತ ಕವಿ, ಸಾಹಿತಿ ‘ಬಿ.ಎ ಸನದಿ’ ಒಳ್ಳೆಯ ವಾಗ್ಮಿ,, ಅನುವಾದಕಾರ, ಮಕ್ಕಳ ಸಾಹಿತ್ಯದಲ್ಲಿ ನಿಷ್ಣಾತರು. ನಾಟಕ ರಚನಾಕಾರ, ಹಾಗೂ ನಿರ್ದೇಶಕರು. ಅವರು ಮುಂಬಯಿ ಆಕಾಶವಾಣಿಯ ಹಿರಿಯ ಅಧಿಕಾರಿಯಾಗಿ ಪಾದಾರ್ಪಣೆ ಮಾಡಿದ ಕಾಲದಲ್ಲಿ ಕನ್ನಡ ರೇಡಿಯೋ ನಾಟಕಗಳು ಉಪನ್ಯಾಸಗಳು ಸರಸ ಸಂಭಾಷಣೆಗಳು ಯಕ್ಷಗಾನ ಆಟಗಳು,ಕರ್ನಾಟಕದಿಂದ ಮುಂಬಯಿಗೆ ಆಗಮಿಸುತ್ತಿದ್ದ ಸುಪ್ರಸಿದ್ಧ ಕವಿಗಳ ಜೊತೆ ಸಂವಾದ ಸಂದರ್ಶನಗಳು ‘ಮುಂಬಯಿ ಆಕಾಶವಾಣಿ’ಯಲ್ಲಿ ತಪ್ಪದೆ ಆಯೋಜಿಸಲ್ಪಡುತ್ತಿದ್ದವು.
ಬಿ.ಎ.ಸನದಿ ಯವರು ೧೯೩೩ ಅಗಸ್ಟ್, ೧೮ ರಂದು ಬೆಳಗಾವಿ ಜಿಲ್ಲೆಯ ಶಿಂದೊಳ್ಳಿ ಗ್ರಾಮದಲ್ಲಿ ಜನಿಸಿದರು. ಪ್ರಾಥಮಿಕ ಶಿಕ್ಷಣ ಹುಟ್ಟೂರು ಶಿಂದೊಳ್ಳಿಯಲ್ಲಿ.
ಮಾಧ್ಯಮಿಕ ಶಿಕ್ಷಣವನ್ನು ಬೆಳಗಾವಿಯ ಜಿ.ಎ.ಹೈಸ್ಕೂಲ್, ಎಸ್.ಎಸ್.ಎಲ್.ಸಿ-೧೯೫೦ ಹಾಗು ಬಿ.ಏ. ವ್ಯಾಸಂಗವನ್ನು ಲಿಂಗರಾಜ ಕಾಲೇಜ್ ಕರ್ನಾಟಕ ವಿಶ್ವ ವಿದ್ಯಾಲಯ-೧೯೫೪ ಗಳಲ್ಲಿ ಪೂರೈಸಿದ ಸನದಿಯವರುಸನ್. ೧೯೫೪ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ದ ಅರ್ಥಶಾಸ್ತ್ರ ಪದವಿ ಪಡೆದು, ಬೆಡಕೀಹಾಳ್-ಶಮನೇವಾಡಿ ಹೊಸ ಹೈಸ್ಕೂಲಿನಲ್ಲಿ ಶಿಕ್ಷಕ ವೃತ್ತಿಯನ್ನು ಆರಂಭಿಸಿದರು. ೧೯೫೬ರಲ್ಲಿ ಬೆಳಗಾವಿಯ ಶಿಕ್ಷಣ ಮಹಾವಿದ್ಯಾಲಯದಲ್ಲಿತರಬೇತಿ ಪಡೆದರು. ೧೯೫೭ ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯ ದ ಬಿ.ಎಡ್. ಪದವಿ ಪಡೆದರು. ಅದೇ ವರ್ಷ ಕರ್ನಾಟಕ ಸರಕಾರ ದ ಸಮಾಜ ವಿಕಾಸ ಇಲಾಖೆಯಲ್ಲಿ ಸಮಾಜ ಶಿಕ್ಷಣಾಧಿಕಾರಿ ಎಂದು ಆಯ್ಕೆಯಾಗಿ ಅಥಣಿತಾಲೂಕಿನಲ್ಲಿ ಸರಕಾರಿ ಸೇವೆಯನ್ನು ಆರಂಭಿಸಿದರು.ಸನ್. ೧೯೬೨ ರಲ್ಲಿ ರಾಜ್ಯ ಸರಕಾರದ ವಾರ್ತಾ ಇಲಾಖೆಯಲ್ಲಿ ಹೊಸದಾಗಿ ಆರಂಭಿಸಿದ ಪಂಚಾಯತಿ ರಾಜ್ಯ ಪತ್ರಿಕೆಯ ಸಹಾಯಕ ಸಂಪಾದಕರೆಂದು ನಿಯುಕ್ತಿಗೊಂಡು ರಾಜ್ಯದ ರಾಜಧಾನಿ ಬೆಂಗಳೂರಿನ ವಿಧಾನ ಸೌಧದಲ್ಲಿ ಸೇವೆ ಸಲ್ಲಿಸಿದರು.ಸನ್. ೧೯೬೪ ರಲ್ಲಿ ರಾಜ್ಯ ಸರಕಾರದಿಂದ ಭಾರತ ಸರಕಾರ ದ ವಾರ್ತಾ ಇಲಾಖೆ ಗೆ ಬಡತಿಯ ಮೇಲೆ ವರ್ಗಾವಣೆ ಹೊಂದಿ ಕಲಬುರ್ಗಿ ವಿಭಾಗದ ಕ್ಷೇತ್ರ ಪ್ರಚಾರಾಧಿಕಾರಿಯಾದರು.
೧೯೬೯ ರಲ್ಲಿ ಪಶ್ಚಿಮ ವಲಯದ ಪ್ರದರ್ಶನಾಧಿಕಾರಿಯಾಗಿ ಬಡತಿ ಪಡೆದು ಅಹಮದಾಬಾದ್ ಗೆ ತೆರಳಿದರು. ೧೯೭೨ ರಲ್ಲಿ ಶಿವಾಜಿವಿಶ್ವವಿದ್ಯಾಲಯ ದಿಂದ ಕನ್ನಡ ಹಾಗು ಸಂಸ್ಕೃತ ದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಭಾರತ ಸರಕಾರದ ಪ್ರದರ್ಶನ ವಿಭಾಗದಿಂದ ಮುಂಬಯಿ ಆಕಾಶವಾಣಿಗೆ ಕುಟುಂಬ ಕಲ್ಯಾಣ ಕಾರ್ಯಕ್ರಮಾಧಿಕಾರಿ ಯಾಗಿ ವರ್ಗಾವಣೆಯಾಗಿ ಬಂದರು. ಜೊತೆಗೆ ಕನ್ನಡ ಕಾರ್ಯಕ್ರಮಗಳ ಪ್ರಸಾರದ ನಿರ್ವಹಣೆ ಮಾಡುತ್ತಿದ್ದರು
ಹಾಗು ಮಹಾರಾಷ್ಟ್ರ ರಾಜ್ಯದ ಅಂತರ್ ಮಾಧ್ಯಮ ಸಂಯೋಜನಾ ಸಮಿತಿಯ ಸದಸ್ಯರಾಗಿದ್ದರು. ೧೯೯೧ ರಲ್ಲಿ ಆಕಾಶವಾಣಿ ಸೇವೆಯಿಂದ ನಿವೃತ್ತರಾದರು.
ಇವರ ಸಾಹಿತ್ಯ ಸೇವೆ.
೧೯೪೯ರಲ್ಲಿ, ಸನದಿಯವರ ಪ್ರಥಮ ಕವನಜಯ ಕರ್ನಾಟಕ ವು ನವಯುಗ ಪತ್ರಿಕೆಯಲ್ಲಿ ಪ್ರಕಟವಾಯಿತು. ಸನದಿಯವರು, ೧೬ ವರ್ಷದವರಿದ್ದಾಗ ಅವರು ರಚಿಸಿದ, ಪತಿವ್ರತಾ ಪ್ರಭಾವ ನಾಟಕ ವನ್ನು ಅವರ ಹುಟ್ಟಿದೂರು, ಸಿಂದೊಳ್ಳಿ ಯಲ್ಲಿ ಆಡಲಾಯಿತು. ೧೯೫೨ರಲ್ಲಿ ಸನದಿಯವರು ಲಿಂಗರಾಜ ಕಾಲೇಜಿನಲ್ಲಿ ಕಲಿಯುತ್ತಿದ್ದಾಗ, ಬರಹಗಾರರ ಬಳಗ’ದ ಕಾರ್ಯದರ್ಶಿ, ಹಾಗೂ ಬೆಳಗಾವಿಯಯುವಕ ಕಲಾ ಕಲಾವೃಂದ ದ ಕಾರ್ಯದರ್ಶಿ ಮತ್ತುಶೋಭಾ ಗ್ರಂಥಮಾಲೆ ಯ ಸಂಚಾಲಕರಾಗಿದ್ದರು.೧೯೫೫ ರಲ್ಲಿ ಶಮನೇವಾಡಿಯಲ್ಲಿ ಸ್ಥಳೀಯ ಐವರು ಕವಿಗಳನ್ನು ಸೇರಿಸಿಕೊಂಡು ಸ್ನೇಹ ಪ್ರಕಾಶನವನ್ನು ಪ್ರಾರಂಭಿಸಿ ಐದಳ ಮಲ್ಲಿಗೆ ಯನ್ನು ಪ್ರಕಟಿಸಿದರು. ಮುಂದೆ ಅದೇ ಪ್ರಕಾಶನದಿಂದ ಅನೇಕ ಪುಸ್ತಕಗಳನ್ನು ಪ್ರಕಟಿಸಿದ್ದಲ್ಲದೇ ಆ ಗಡಿಭಾಗದಲ್ಲಿ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಯ ಪ್ರಸಾರ ಕಾರ್ಯಮಾಡಿದರು. ೧೯೫೬ ರಲ್ಲಿ ದಿ.ಎಸ್.ಡಿ.ಇಂಚಲರ ಜೊತೆಗೂಡಿಚೇತನ ಪ್ರಕಾಶನ ವನ್ನು ಆರಂಭಿಸಿದರು. ಕರ್ನಾಟಕ ಏಕೀಕರಣ ದಿನೋತ್ಸವದ ಅಂಗವಾಗಿ ವಿಜಯ ದುಂದುಭಿ ಎಂಬ ಪ್ರಾತಿನಿಧಿನಿಕ ಕವನ ಸಂಕಲನವನ್ನು ಪ್ರಕಟಿಸಿದರು. ೧೯೬೨ ರಲ್ಲಿ ಬೆಳಗಾವಿಯ ವಿಕಾಸ ಪತ್ರಿಕೆಯ ಸಹಾಯಕ ಸಂಪಾದಕತ್ವ ನಿರ್ವಹಿಸಿದರು. ೧೯೬೫ ರಲ್ಲಿ ಕಲಬುರ್ಗಿ ಯಲ್ಲಿ ನೃಪತುಂಗ ಪ್ರಕಾಶನಆರಂಭಿಸಿದರು.ಸನ್. ೧೯೮೧ ರಲ್ಲಿ ಮಹಾರಾಷ್ಟ್ರ ಸರಕಾರದ ಕನ್ನಡ ಪಠ್ಯಪುಸ್ತಕ ಸಮಿತಿ ಯ ಸದಸ್ಯರಾಗಿ ೬ ವರ್ಷ ಸೇವೆ ಸಲ್ಲಿಸಿದರು.ಸನ್. ೧೯೮೫ ರಲ್ಲಿ ಮಲೇಶಿಯಾದ ರಾಜಧಾನಿ ಕೌಲಾಲಂಪುರ ದಲ್ಲಿ ನಡೆದ ಏಶಿಯಾ ಪೆಸಿಫಿಕ್ ಪ್ರದೇಶದ ಪ್ರಾತಿನಿಧಿಕ ಪ್ರಸಾರ ಕಮ್ಮಟ ದಲ್ಲಿ ಅಖಿಲ ಭಾರತ ಆಕಾಶವಾಣಿ ಯ ಪ್ರತಿನಿಧಿಯಾಗಿ ಪಾಲ್ಗೊಂಡರು. ೧೯೮೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಯ ಸದಸ್ಯರೆಂದು ನೇಮಕಗೊಂಡರು.ಸನ್. ೧೯೯೪ ರಲ್ಲಿ ಮುಂಬಯಿ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಪ್ರಗತಿ ಪರಿಶೀಲನಾ ಸಮಿತಿಯ ಸದಸ್ಯರಾದರು.ಸನ್. ಮುಂಬಯಿ ಕರ್ನಾಟಕ ಸಂಘದ ಕಾರ್ಯಾಧ್ಯಕ್ಷ, ಹಾಗೂ ಟ್ರಸ್ಟಿಯಾಗಿ ೨೦೦೩ ರ ವರೆಗೆ ಮುಂಬಯಿನಲ್ಲಿ ಕನ್ನಡದ ಕೈಂಕರ್ಯದಲ್ಲಿ ತೊಡಗಿದ್ದು, ತಮ್ಮ ಇಳಿವಯಸ್ಸಿನ ದಿನಗಳನ್ನು ಕಳೆಯಲು, ಕರಾವಳಿಯ ಕುಮಟಾ ಪಟ್ಟಣಕ್ಕೆ ಬಂದು ನೆಲೆಯೂರಿದ್ದಾರೆ.ಜಿಲ್ಲಾ ಮತ್ತು ಅಖಿ;ಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಟಿಗಳ ಉದ್ಘಾಟಕರಾಗಿ, ಅಧ್ಯಕ್ಷರಾಗಿ ಭಾಗವಹಿಸಿದ್ದಾರೆ.ಕೆನಡಾದ ಟೊರಾಂಟೋನಗರದ ಕನ್ನಡ ಸಂಘದ ಕವಿಸಮ್ಮೆಳನದ ಅಧ್ಯಕ್ಷತೆಯನ್ನೂ ವಹಿಸಿದ್ದರು.೨೦೧೧ ರ ಏಪ್ರಿಲ್ ಒಂದೇ ತಿಂಗಳಿನಲ್ಲಿ ಉತ್ತರ ಕನ್ನಡ ಜಿಲ್ಲೆ ಮತ್ತು ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರಾಗಿದ್ದರು.ಯು.ಎ.ಇ ; ಸಿಂಗಾಪುರ ; ಮಲೇಶಿಯಾ, ಅಮೆರಿಕಾ ಮತ್ತು ಕೆನಡಾ ದೇಶಗಳಲ್ಲಿ ಸಂಚರಿಸಿಬಂದಿದ್ದಾರೆ.
ಪುರಸ್ಕಾರಗಳು
೧೯೬೨ ರಲ್ಲಿ, ತಾಜ್ ಮಹಲ್ (ಕವನಸಂಗ್ರಹ) ಕ್ಕೆ, ರಾಜ್ಯ ಸರಕಾರದ ಪ್ರಶಸ್ತಿ, ೧೯೬೭ ರಲ್ಲಿ, ಪ್ರತಿಬಿಂಬ (ಕವನ ಸಂಗ್ರಹ) ಕ್ಕೆ, ರಾಜ್ಯ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ೧೯೬೯ ರಲ್ಲಿ, ಧ್ರುವಬಿಂದು (ಕವನ ಸಂಗ್ರಹ) ಕ್ಕೆ, ಭಾರತ ಸರಕಾರದ ಪ್ರಶಸ್ತಿ.೧೯೮೪ ರಲ್ಲಿ, ಇಲ್ಲಿ ಸಲ್ಲುವರು (ವಚನ ವಿಮರ್ಶೆ) ಗೆ, ಕಾವ್ಯಾನಂದ ಪುರಸ್ಕಾರ ಹಾಗು ಇಳಕಲ್ಲದ ಚಿತ್ತರಗಿ ಸಂಸ್ಥಾನ ಮಠ ದ ವೀರಶೈವ ಸಾಹಿತ್ಯ ಪ್ರಶಸ್ತಿ. ೧೯೯೫ರಲ್ಲಿ ೧೯೯೨ ರಲ್ಲಿ, ಸಮಗ್ರ ಸಾಹಿತ್ಯ ಕ್ಕೆ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಸಮಗ್ರ ಸಾಹಿತ್ಯ ; ಕನ್ನಡ ಸಾಹಿತ್ಯ ಪರಿಷತ್ತಿನ ಸನ್ಮಾನ ಹಾಗು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ. ೧೯೯೧ ರಲ್ಲಿ ದೆಹಲಿ ಕನ್ನಡಿಗ ಪರವಾಗಿ ಶ್ರೇಷ್ಠ ಹೊರನಾಡ ಕನ್ನಡಿಗ ಪ್ರಶಸ್ತಿ.ಡಾ . ಗೌರೀಶ ಕಾಯ್ಕಿಣಿ ಯವರಿಂದ ‘ಮಾನವ್ಯ ಕವಿ’ ಎಂದು ಬಿರುದಾಂಕಿತರಾದರು.ಮುಂಬಯಿ ನ ಶ್ರೀ ನಾರಾಯಣ ಗುರು ಪ್ರಶಸ್ತಿ,ಗೋರುರು ಪ್ರತಿಷ್ಠಾನ ಸಾಹಿತ್ಯ ಪ್ರಶಸ್ತಿ.ಭೂಸನೂರ ಮಠ ಪ್ರತಿಷ್ಠಾನ ಪ್ರಶಸ್ತಿ .ಕರ್ನಾಟಕ ವಿಶ್ವ ವಿದ್ಯಾಲಯದ ಗೌರವ ಡಾಕ್ಟರೇಟ್.ಸಿರಿಗನ್ನಡ ಗೌರವ ಪ್ರಶಸ್ತಿ.ಸಾಧನ ಶಿಖರ ಪ್ರಶಸ್ತಿ.(೨೦೧೪),2015ನೇ ಸಾಲಿನ ‘ಪಂಪ ಪ್ರಶಸ್ತಿ’