ಗೋಕರ್ಣ: ತಂದೆಯೇ ವೋಟ್ ಹಾಕದ ಮಗನಿಗೆ ಜಿಲ್ಲೆಯ ಜನ ವೋಟ್ ಹಾಕಬೇಕೆ? ವಾಕ್ ಚಾತುರ್ಯ ಬಿಟ್ಟರೆ ಬೇರೆ ಯಾವುದೇ ಅರ್ಹತೆಯಿಲ್ಲದ ಅನಂತಕುಮಾರರಿಗೆ ಜಿಲ್ಲೆಯ ಜನ ಈ ಬಾರಿ ಸರಿಯಾಗಿ ಬುದ್ಧಿ ಕಲಿಸಲಿದ್ದಾರೆ ಎಂದು ಜೆಡಿಎಸ್-– ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಆನಂದ್ ಅಸ್ನೋಟಿಕರ್ ಹೇಳಿದರು.

RELATED ARTICLES  ಗೋಕರ್ಣಕ್ಕೆ ಭೇಟಿನೀಡಿ ಪೂಜೆ ಸಲ್ಲಿಸಿದ ಸಚಿವ ಡಾಕ್ಟರ್. ಕೆ. ಸುಧಾಕರ್

ಅವರು ಶನಿವಾರ ದೇವರಬಾವಿಯಲ್ಲಿ ಜೆ.ಡಿ.ಎಸ್. ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ 22 ವರ್ಷ ಸಂಸದರಾಗಿ ಆಳಿದ ಕೌಶಲ್ಯಾಭಿವೃದ್ಧಿ ಮಂತ್ರಿಯ ಸಾಧನೆ ಮಾತ್ರ ಶೂನ್ಯ. ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಯಾವುದೇ ಕೆಲಸ ಮಾಡದ ಸಂಸದ, ಧರ್ಮದ ಆಧಾರದ ಮೇಲೆ ಓಟು ಕೇಳುವ ಒಬ್ಬ ಹೇಡಿ. ಇಂತಹ ಸಂಸದರ ಅವಶ್ಯಕತೆ ಪ್ರಜ್ನಾವಂತರ ಜಿಲ್ಲೆಗೆ ಇದೆಯೇ? ಎಂದು ಪ್ರಶ್ನಿಸಿದರು.

RELATED ARTICLES  10 Лучших Трендовых Индикаторов

ಜೆ.ಡಿ.ಎಸ್.ನ ಪ್ರದೀಪ ನಾಯಕ ದೇವರಬಾವಿ, ಗಜು ನಾಯ್ಕ ಅಳ್ವೆಕೊಡಿ, ಭಾಸ್ಕರ ಪಟಗಾರ, ಈಶ್ವರ ನಾಯ್ಕ, ನೀಲಪ್ಪ ಗೌಡ, ಲಲಿತಾ ಪಟಗಾರ, ರಾಜೇಶ ನಾಯಕ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.