ಕುಮಟಾ :ರಾಷ್ಟ್ರ ಮಟ್ಟದ ಐ.ಎಸ್.ಓ.ಮಾನ್ಯತೆ ಪಡೆದಿರುವ ಪ್ರಖ್ಯಾತ ಕಂಪನಿ “ಮಿತ್ರಾ ಬಿಸಿನೆಸ್ ವೆಂಚರ್ಸ್” ನ ಆಧುನಿಕ ಸಿದ್ಧ ಉಡುಪುಗಳ ಮಾರಾಟ ಮಳಿಗೆ “ಫ್ಯಾಬಿನೇಶನ್” ಇಂದು ರಾಜ್ಯದ ತನ್ನ ಏಳನೇಯ ಶಾಖೆಯಾಗಿ ಕುಮಟಾದಲ್ಲಿ ಶುಭಾರಂಭಗೊಂಡಿತು.

IMG 20190331 WA0005

ನಗರದ ಕೋರ್ಟ ರಸ್ತೆಯಲ್ಲಿರುವ ಪ್ರಮೀಳಾ ಕಾಂಪ್ಲೆಕ್ಸ್ ನಲ್ಲಿ ಧಾರ್ಮಿಕ ಕಾರ್ಯಗಳೊಂದಿಗೆ ಶುಭಾರಂಭಗೊಂಡ ಈ ಶುಭ ಸಂದರ್ಭದಲ್ಲಿ ಉಪಸ್ಥಿತರಿದ್ದ ಕಂಪನಿಯ ಮೆನೇಜಿಂಗ್ ಡೈರೆಕ್ಟರ್ ಅಜಯಕುಮಾರ್ ಪ್ರಭಾಕರ ರವರು ಸರ್ವರನ್ನೂ ಪ್ರೀತಿಯಿಂದ ಸ್ವಾಗತಿಸುತ್ತ ,
ನಮ್ಮ ಈ “ಫ್ಯಾಬಿನೇಶನ್” ಮಳಿಗೆಯಲ್ಲಿ ಪುರುಷರ,ಮಹಿಳೆಯರ,ಮಕ್ಕಳ ಆಧುನಿಕ ರೀತಿಯ ಉತ್ಕೃಷ್ಟ ಗುಣಮಟ್ಟದ ನವ ನವೀನ ಮಾದರಿಯ ಎಲ್ಲ ಸಿದ್ಧ ಉಡುಪುಗಳು ಯೋಗ್ಯ ದರದಲ್ಲಿ ಸದಾ ಲಭ್ಯವಿದ್ದು,ಗ್ರಾಹಕರ ಮನಮೆಚ್ಚುವ ಆಯ್ಕೆಗೆ ಇಲ್ಲಿ ವಿಫುಲ ಅವಕಾಶಗಳಿವೆ,
ಪ್ರಾರಂಭಿಕ ಹಾಗೂ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ರಿಯಾಯತಿ ದರದ ಮಾರಾಟ ವ್ಯವಸ್ಥೆಯೊಂದಿಗೆ ಶಾಖೆ ತನ್ನ ಕಾರ್ಯ ಆರಂಭಿಸಿದ್ದು ಕುಮಟಾ ಮತ್ತು ಸುತ್ತಮುತ್ತಲಿನ ಜನತೆ ಭೇಟಿ ನೀಡಿ ಇದರ ಸದುಪಯೋಗ ಪಡೆದು ಸಹಕರಿಸುವಂತೆ ವಿನಂತಿಸಿಕೊಂಡರು.

RELATED ARTICLES  ಪದವಿ, ಇಂಜಿನಿಯರಿಂಗ್ ಕಾಲೇಜು ಆರಂಭಕ್ಕೆ ಗ್ನೀನ್ ಸಿಗ್ನಲ್ !

ನೂತನ ಮಳಿಗೆಗೆ ಭೇಟಿ ನೀಡಿದ ಕುಮಟಾ ಹೊನ್ನಾವರ ವಿಧಾನ ಸಭಾ ಕ್ಷೇತ್ರದ ಶಾಸಕ ದಿನಕರ ಶೆಟ್ಟಿಯವರು ಮಾತನಾಡಿ, ಇಂದಿನ ಯುವಕರು,
ಮಹಿಳೆಯರು,ಮಕ್ಕಳು ಅತಿಯಾಗಿ ಇಷ್ಟ ಪಡುವ ಬ್ರ್ಯಾಂಡೆಡ್ ಸಿದ್ಧ ಉಡುಪುಗಳು, ಬೆಳೆಯುತ್ತಿರುವ ನಮ್ಮ ಕುಮಟಾ ನಗರದಲ್ಲೂ ಸುಲಭವಾಗಿ ಲಭ್ಯವಾದಂತಾಗಿದ್ದು ನಿಜಕ್ಕೂ ಹೆಮ್ಮೆಯೆನಿಸಿ ಸಂತಸ ತಂದಿದೆ ಎಂದರು.ಈ ಶೋರೂಮ್ ಆರಂಭಿಸುವಲ್ಲಿ ಆಸಕ್ತಿ ತೋರಿದ ನಗರದ ಉತ್ಸಾಹೀ ತರುಣರ ಪ್ರಯತ್ನವನ್ನು ಶ್ಲಾಘಿಸಿ ಅಭಿನಂದಿಸಿದರು.
ಜನತೆ ಈ ಅನುಕೂಲದ ಸೌಲಭ್ಯ ಪಡೆದು ಸಹಕರಿಸುವರೆಂದು ವಿಶ್ವಾಸ ವ್ಯಕ್ತಪಡಿಸಿ ಶುಭ ಕೋರಿದರು.

RELATED ARTICLES  ಹೊಸ್ಕೇರಿ ಕಡಿಮೆ ಶಾಲೆಯಲ್ಲಿ ಪ್ರತಿಭಾ ಕಾರಂಜಿ ಕಾರ್ಯಕ್ರಮ

ಡೈರೆಕ್ಟರ್ ಮಂಜುನಾಥ ಶ್ರೀನಿವಾಸ,ವಿಜಯ್ ಬಿ.ಆರ್.,
ಕಂಪನಿಯ ಪಾಲುದಾರರುಗಳಾಗಿರುವ ಡಾ.ನಿವೇದಿತಾ ಕಾಮತ್, ಸುಚಿತ್ರಾ ಆಚಾರ್ಯ ಹಾಗೂ ಅರವಿಂದ ಭಟ್ ಉಪಸ್ಥಿತರಿದ್ದರು.

ಗುರುಪ್ರಸಾದ ಹಾಗೂ ಮೆನೇಜರ್ ಪ್ರಮೋದ ಪ್ರಭು ಮತ್ತು ಕುಟುಂಬದವರು ಈ ಸಮಾರಂಭಕ್ಕೆ ಆಗಮಿಸಿ ಶುಭಕೋರಿದ ಎಲ್ಲ ಬಂಧು ಮಿತ್ರರು ಹಾಗೂ ಕುಮಟಾ ನಾಗರಿಕರನ್ನು ಸ್ವಾಗತಿಸಿ,ಅಲ್ಪೋಪಹಾರ ನೀಡಿ ,ಎಲ್ಲರ ಸಹಕಾರ ಕೋರುತ್ತ ವಂದಿಸಿದರು.

ವರದಿ : ಜಯದೇವ ಬಳಗಂಡಿ
9448303509.