ಶಿರಸಿ ಅರಣ್ಯ ಮಹಾವಿದ್ಯಾಲಯದಲ್ಲಿ ದೈಹಿಕ ಶಿಕ್ಷಣ ವಿಷಯದ ಸಹಾಯಕ ಪ್ರಾದ್ಯಾಪಕ 1 ಹುದ್ದೆ ಮತ್ತು ಅಗ್ರೀಕಲ್ಚರ್ ಇನ್ಫೊರಮ್ಯಾಟಿಕ್ ವಿಷಯದ ಅರೆಕಾಲಿ ಉಪನ್ಯಾಸಕ 1 ಹುದ್ದೆಗಾಗಿ ಆಗಸ್ಟ 8 ರಂದು ಬೆಳಗ್ಗೆ 11 ಗಂಟೆಗೆ ನೇರ ಸಂದರ್ಶನ ಏರ್ಪಡಿಸಲಾಗಿದೆ.
ಸಹಾಯಕ ಪ್ರಾದ್ಯಾಪಕ ಹುದ್ದೆಗೆ ದೈಹಿಕ ಶಿಕ್ಷಣ ವಿಷಯದಲ್ಲಿ ಸ್ನಾತಕೋತ್ತರ ಪದವಿಯೊಂದಿಗೆ 5 ವರ್ಷಗಳ ಅನುಭವ ಮತ್ತು ಅರೆಕಾಲಿ ಉಪನ್ಯಾಸಕ ಹುದ್ದೆಗೆ ಕಂಪ್ಯೂಟರ್ ಸೈನ್ಸ ಅಥವಾ ಸಂಖ್ಯಾಶಾಸ್ರ್ತ ವಿಷಯದಲ್ಲಿ ಅಂಗಿಕೃತ ವಿಶ್ವವಿದ್ಯಾಲಯದಿಂದ ಪಡೆದ ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ನಿಗದಿ ಪಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ತಮ್ಮ ಎಲ್ಲ ಮೂಲ ದಾಖಲೆಗಳು ಹಾಗೂ ದಾಖಲೆಗಳ ಎರಡು ಝೆರಾಕ್ಸ ಪ್ರತಿಗಳೊಂದಿಗೆ ಅರಣ್ಯ ಮಹಾವಿದ್ಯಾಲಯ ಶಿರಸಿಯವರ ಕಾರ್ಯಾಲಯದಲ್ಲಿ ಸಂದರ್ಶನಕ್ಕೆ ಹಾಜರಾಗಲು ವಿದ್ಯಾಲಯದ ಡಿನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಇಂಡಿಯನ್ ಬ್ಯಾಂಕ್’ನಲ್ಲಿ ಸ್ಪೆಷಲಿಸ್ಟ್ ಆಫೀಸರ್ಸ್ ಹುದ್ದೆಗಳಿಗೆ ನೇಮಕಾತಿ.