ಯಲ್ಲಾಪುರ:ತಾಲೂಕಿನ ಕಿರವತ್ತಿಯ ಚೆಕ್ ಪೋಸ್ಟ್‌ನಲ್ಲಿ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ನಗದನ್ನು ಅಧಿಕಾರಿಗಳು ವಶಕ್ಕೆ ಪಡೆದಿದ್ದು ಒಬ್ಬ ಅಪ್ರಾಪ್ತ ಬಾಲಕ ಸೇರಿ ಒಟ್ಟೂ ಐವರು ಪೊಲೀಸರು ಬಂಧಿಸಿದ್ದಾರೆ.

ಕಾರವಾರ ಕಡೆಯಿಂದ ಹುಬ್ಬಳ್ಳಿ ಕಡೆಗೆ ವಾಹನದಲ್ಲಿ ತೆರಳುತ್ತಿದ್ದ ವೇಳೆ ಕಿರವತ್ತಿ ಚೆಕ್‌ಪೋಸ್ಟ್‌ನಲ್ಲಿ ಸ್ಟಾಟಿಕ್ ಸರ್ವೆಲೆನ್ಸ್ ಟೀಮ್ ತಪಾಸಣೆ ನಡೆಸಿದಾಗ ಕಾರಿನಲ್ಲಿ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 2.44 ಕೆಜಿ ಬಂಗಾರದ ಹಾಗೂ 3 ಕೆಜಿ ಬೆಳ್ಳಿಯ ಆಭರಣಗಳು ಮತ್ತು 2.68 ಲಕ್ಷ ರೂ. ನಗದು ಪತ್ತೆಯಾಗಿದೆ. ಲೋಕಸಭೆ ಚುನಾವಣೆ ಪ್ರಯುಕ್ತ ಜಿಲ್ಲೆಯ ಎಲ್ಲ ಚೆಕ್ ಪೋಸ್ಟ್‌ಗಳಲ್ಲಿ ಭದ್ರತೆಯನ್ನು ಬಿಗಿಗೊಳಿಸಲಾಗಿದೆ.

RELATED ARTICLES  ಜಿಲ್ಲೆಯಾದ್ಯಂತ ಸಂಭ್ರಮದ ಗಣೇಶೋತ್ಸವ ಆಚರಣೆ

ನೇಪಾಳ ಮೂಲದ ಹಾಲಿ ಮುಂಬಯಿಯಲ್ಲಿ ನೆಲೆಸಿರುವ ಸೀತಾರಾಮ ಭೀಮಮಹದ್ದೂರ ಸಾವುದ್, ಏಕಮಥ ಮಾನಬಹದ್ದೂರ ಷಾ, ಡುಮ್ಮರ ದಿಲ್‌ಬಹದ್ದೂರ ಸಾವುದ್, ನೇಪಾಳ ಮೂಲದ ಹುಬ್ಬಳ್ಳಿಯಲ್ಲಿ ಪಾನಿಪುರಿ ವ್ಯಾಪಾರ ಮಾಡಿಕೊಂಡಿರುವ ಬಾಲಸಿಂಗ್ ಯಾನೆ ರಮೆಲಾ ಬೀರು ಬಹದ್ದೂರ, ಹಾಗೂ ರಾಮ್ ನರಸಿಂಗ್ , ಬಂಧಿತರು.

RELATED ARTICLES  ನಿಯಂತ್ರಣ ತಪ್ಪಿದ ಕಾರು ಪಲ್ಟಿ : ನಾಲ್ವರಿಗೆ ಪೆಟ್ಟು.