ಕುಮಟಾ: ಕನ್ನಡ ಸಾಹಿತ್ಯ ಪರಿಷತ್ ಉತ್ತರಕನ್ನಡ, ತಾಲೂಕಾ ಸಾಹಿತ್ಯ ಪರಿಷತ್ ಕುಮಟಾ ಹಾಗೂ ರೋಟರಿ ಕ್ಲಬ್ ಕುಮಟಾ ಇವರ ಸಹಯೋಗದೊಂದಿಗೆ ಸೋಮವಾರ ಪಟ್ಟಣದ ನಾದಶ್ರೀ ಕಲಾಕೇಂದ್ರದಲ್ಲಿ ಬಿ.ಎ ಸನದಿಯವರ ಶ್ರದ್ಧಾಂಜಲಿ ಸಭೆ ಹಮ್ಮಿಕೊಳ್ಳಲಾಗಿತ್ತು.
ಈ ಸಂದರ್ಭದಲ್ಲಿ ಬಿ. ಎ. ಸನದಿ ಎಂಬುದು ನಿರಂತರವಾಗಿ ಹರಿಯುವಂತಹ ನಿಷ್ಕಲ್ಮಶ ಮನೋಭಾವದ ಒಂದು ನದಿ. ಅಂತಹ ಶಾಂತ ಸ್ವಭಾವದ ಮುಗ್ಧ ವ್ಯಕ್ತಿ ಅಗಲಿರುವುದು ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವುಂಟುಮಾಡಿದೆ ಎಂದು ಕನ್ನಡ ಸಾಹಿತ್ಯ ಪರಿಷತ್‍ನ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಬೇಸರ ವ್ಯಕ್ತಪಡಿಸಿ ಸನದಿಯವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಸಂತಾಪ ನುಡಿಗಳನ್ನಾಡಿದರು.
ರೋಟರಿ ಕ್ಲಬ್‍ನ ತಾಲೂಕಾಧ್ಯಕ್ಷ ಕಿರಣ ಕುವಾಳೇಕರ ಮಾತನಾಡಿ, ಸನದಿಯಂತಹ ಶುದ್ಧ ಮನಸಿನ, ನಿಸ್ವಾರ್ಥ ಮನೋಭಾವನೆಯ ವ್ಯಕ್ತಿಯನ್ನು ಕಳೆದುಕೊಂಡಿರುವುದು ಬೇಸರ ಉಂಟುಮಾಡಿದೆ ಎಂದರು.
ಮಾನವ್ಯ ಕವಿಯಾದಂತಹ ಸನದಿಯವರು ಧರ್ಮಾತೀತವಾದಿಯಾಗಿದ್ದರು. ಸಾಹಿತ್ಯ ಲೋಕಕ್ಕೆ ಅವರ ಕೊಡುಗೆ ಅಪಾರವಾಗಿದೆ. ಅವರು ಅಗಲಿರುವುದು ಸಾಹಿತ್ಯ ಜಗತ್ತಿಗೆ ನಷ್ಟ ಉಂಟುಮಾಡಿದೆ. ಅವರು ಹಾಕಿಕೊಟ್ಟ ಮಾರ್ಗವನ್ನು ನಾವೆಲ್ಲರೂ ಅನುಸರಿಸೋಣ ಎಂದು ಕ.ಸಾ.ಪ ತಾಲೂಕಾಧ್ಯಕ್ಷ ಶ್ರೀಧರ ಗೌಡ ಉಪ್ಪಿನಗಣಪತಿ ಹೇಳಿದರು.