ಕುಮಟಾದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಹಿರಿಯ ಯಕ್ಷಗಾನ ಕಲಾವಿದ ವಾಸುದೇವ ಸಾಮಗ ಅವರ ನೇತ್ರತ್ವದಲ್ಲಿ ಯಕ್ಷಗಾನ ತಾಳಮದ್ದಳೆ ಹಾಗೂ ನಿವೃತ್ತ ಶಿಕ್ಷಕರಾದ ಸುಖದ್ ನಾಯಕ ಅವರ ಸನ್ಮಾನ ಕಾರ್ಯಕ್ರಮ ಜರುಗಿತು.

ನಿವೃತ್ತ ಡಿ.ಎಫ್.ಒ. ಹಾಗೂ ಬೆಳಕು ಗ್ರಾಮೀಣಾಭಿವೃದ್ದಿ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ನಿವೃತ್ತ ಶಿಕ್ಷಕರಾದ ಸುಖದ್ ನಾಯಕ ಹೀರೆಗುತ್ತಿ ಅವರನ್ನು ಅವರ ಶಿಕ್ಷಕ ವರ್ಗ, ಅಭಿಮಾನಿ ಬಳಗ, ಹಾಗೂ ಊರ ನಾಗರಿಕರ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಿದರು.
ಈ ಸಂದರ್ಭದಲ್ಲಿ ನಿವೃತ್ತ ಡಿ. ಎಫ್. ಓ. ಹಾಗೂ ಬೆಳಕು ಗ್ರಾಮೀಣಾಬಿವೃದ್ಧಿ ಟ್ರಸ್ಟ್ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆ ಅವರು ಮಾತನಾಡಿ ಸುಖದ್ ಎಚ್. ನಾಯಕ ಅವರು ನನ್ನ ಬಾಲ್ಯ ಸ್ನೇಹಿತರಾಗಿದ್ದು ಅವರು ಒಬ್ಬ ಪ್ರತಿಭಾವಂತ ಮತ್ತು ಆದರ್ಶಪ್ರಾಯರಾಗಿದ್ದರು. ಶಿಕ್ಷಕ ವೃತ್ತಿಯನ್ನು ಆರಂಭಿಸಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೂ ಭಾಜನರಾಗಿದ್ದರು ಅವರು ವಿಶೇಷವಾಗಿ ಬರ್ಗಿ ಭಾಗದಲ್ಲಿ ಹದಿಮೂರು ವರ್ಷಗಳ ಕಾಲ ಶಿಕ್ಷಕರಾಗಿ ಸೇವೆ ಸಲ್ಲಿಸಿ ಶಿಕ್ಷಣದೊಂದಿಗೆ ವಿದ್ಯಾರ್ಥಿಗಳಿಗೆ ಯಕ್ಷಗಾನದಂಥ ಧೀಮಂತ ಕಲೆಯನ್ನು ಕಲಿಸಿ ಅನೇಕ ಪ್ರಸಂಗಗಳನ್ನು ಮಾಡಿಸಿ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದರು. ಸೇವೆ ಸಲ್ಲಿಸಿ ಹತ್ತು ವರ್ಷ ಕಳೆದರೂ ಕೂಡಾ ಪುನಃ ಅವರನ್ನು ನೆನಪಿಸಿ ಸನ್ಮಾನಿಸಿರುವುದು ಈ ಊರ ನಾಗರಿಕರು ಅವರ ಮೇಲಿಟ್ಟಿರುವ ವಿಶ್ವಾಸಕ್ಕೆ ಸಾಕ್ಷಿಯಾಗಿದೆ ಎಂದರು.
ಮುಖ್ಯ ಅರ್ಚಕರಾದ ಭಾಸ್ಕರ ದೇಸಾಯಿ ಅವರು ಮಾತನಾಡಿ ಸುಖದ್ ನಾಯಕ ಅವರು ಈ ಊರಿನ ಭವಿಷ್ಯವನ್ನೇ ಬದಲಾಯಿಸಬಲ್ಲ ವ್ಯಕ್ತಿತ್ವವುಳ್ಳ ಶಿಕ್ಷಕರಾಗಿದ್ದಾರೆ ಎಂದು ಶ್ಲಾಘಿಸಿದರು.
ನಂತರ ಸನ್ಮಾನ ಸ್ವೀಕರಿಸಿದ ಸುಖದ್ ನಾಯಕ ಅವರು ಮಾತನಾಡಿ ಈ ಊರಿನ ನಾಗರಿಕರು ನನಗೆ ಅತಿಯಾದ ಪ್ರೀತಿವಿಶ್ವಾಸ ನೀಡಿದ್ದು ಅದನ್ನು ಇಂದಿಗೂ ಮುಂದುವರಿಸಿದ್ದಾರೆ. ಇದೇ ಭಾಗದ ಕನ್ನಡ ಶಾಲೆಯಲ್ಲಿ ಓದಿದ ಮಗ ಇಂಜೀನಿಯರ್ ಹಾಗೂ ಮಗಳು ಪಿ.ಎಹ್.ಡಿ. ಪಡೆದು ಉನ್ನತ ಹುದ್ದೆಯಲ್ಲಿದ್ದಾರೆ. ಬರ್ಗಿ ಊರು ಕೂಡಾ ತನ್ನ ಹುಟ್ಟೂರಿನಷ್ಟೇ ಪ್ರಿಯವಾದದ್ದು ಎಂದರು.
ನಂತರ ‘ವೀರಮಣಿ ಕಾಳಗ’ ಎಂಬ ಯಕ್ಷಗಾನ ತಾಳಮದ್ದಳೆ ಪ್ರಸಂಗ ಜರುಗಿತು.
ಈ ಸಂದರ್ಭದಲ್ಲಿ ಈಶ್ವರ ನಾಯ್ಕ ಬರ್ಗಿ, ಹನುಮಂತ ನಾಯ್ಕ ಕಿಮ್ಮಾನಿ, ವಸಂತ ನಾಯ್ಕ ಬರ್ಗಿ, ಆನಂದು ನಾಯಕ ಬರ್ಗಿ, ಪಾಂಡು ಪಟಗಾರ, ರಮೇಶ ಶೆಟ್ಟಿ, ವೆಂಕಪ್ಪ ನಾಯ್ಕ, ಮೋಹನ ಗಾಂವಕರ, ಬೀರಣ್ಣ ಮಾಸ್ತರ, ಮಾದೇವ ನಾಯ್ಕ ಸೇರಿದಂತೆ ಊರ ನಾಗರಿಕರು ಉಪಸ್ಥಿತರಿದ್ದರು.

RELATED ARTICLES  ಶಿಷ್ಯವೇತನಕ್ಕಾಗಿ ಕೊಂಕಣ ಎಜ್ಯುಕೇಶನ್ ಗೆ ಆರ್ಥಿಕ ನೆರವು ನೀಡಿದ ಶ್ರೀ ಎಂ.ಎಂ.ಹೆಗಡೆ