ಕಾರವಾರ: ನಗರದ ಬಾಡ ಮಹಾದೇವಸ್ಥಾನದಲ್ಲಿ ಕುಟುಂಬ ಹಾಗೂ ಪಕ್ಷದ ಪ್ರಮುಖರು, ಕಾರ್ಯಕರ್ತರೊಂದಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಉತ್ತರದ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆಯವರು ಜಿಲ್ಲಾ ಚುನಾವಣಾ ಅಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಕಾರ್ಯಕರ್ತರೊಂದಿಗೆ ಕಾಲ್ನಡಿಗೆಯಲ್ಲೇ ಚುನಾವಣಾ ಅಧಿಕಾರಿ ಬಳಿಗೆ ತೆರಳಿದ ಅನಂತ ಕುಮಾರ್ ಗೆ ಪತ್ನಿ ಶ್ರೀರೂಪಾ ಹೆಗಡೆ, ಹುಬ್ಬಳ್ಳಿ- ಧಾರವಾಡ ಕೇಂದ್ರದ ಶಾಸಕ ಜಗದೀಶ್ ಶೆಟ್ಟರ್, ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಜಿ.ನಾಯ್ಕ, ವಕೀಲ ಬಿ.ಎಸ್.ಪೈ ಸಾಥ್ ನೀಡಿದರು.
ಅನಂತಕುಮಾರ ನಾಮಪತ್ರ ಸಲ್ಲಿಸಿ ಹೊರ ಬರುವವರೆಗೂ ಕಾರ್ಯಕರ್ತರು ಮೋದಿ… ಮೋದಿ ಎಂದು ಘೋಷಣೆ ಕೂಗುತ್ತಿದ್ದರು.
ಕಾರವಾರ ಶಾಸಕಿ ರೂಪಾಲಿ ನಾಯ್ಕ, ಭಟ್ಕಳ ಶಾಸಕ ಸುನೀಲ್ ನಾಯ್ಕ, ಕುಮಟಾ ಶಾಸಕ ದಿನಕರ ಶೆಟ್ಟಿ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ವೆಂಕಟ್ರಮಣ ಹೆಗಡೆ ಸೇರಿದಂತೆ ಸಾವಿರಾರು ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ನೆರೆದಿದ್ದರು.