ಕುಮಟಾ: ಹೆಗಡೆಯ ಕಲ್ಕೋಡ ರಸ್ತೆಯಲ್ಲಿ ಶ್ರೀಧರ ನಾಯ್ಕ ಎಂಬವರ ಮನೆ ನಿರ್ಮಾಣದ ಸಂದರ್ಭದಲ್ಲಿ ಸೆಂಟ್ರಿಂಗ್ ಕಳಚುತ್ತಿದ್ದಾಗ ಕಾಮಗಾರಿ ಪರಿಕರ ಹಾಗೂ ಮೇಲ್ಭಾಗ ಮೈಮೇಲೆ ಕುಸಿದುಬಿದ್ದು ಓರ್ವ ಮೃತಪಟ್ಟು ಇನ್ನೋರ್ವ ತೀವ್ರ ಗಾಯಗೊಂಡು ಘಟನೆ ತಾಲೂಕಿನ ಹೆಗಡೆಯಲ್ಲಿ ನಡೆದಿದೆ.
RELATED ARTICLES ಕಾರವಾರ ರಸ್ತೆಬದಿಗೆ ಬಿದ್ದರುವ ಅನಾಥ ವಾಹನಗಳಿಗೆ ಮುಕ್ತಿ ಎಂದು? ಅಧಿಕಾರಿಗಳೇ ಸ್ವಲ್ಪ ಇತ್ತ ನೋಡಿ.
ಮೃತನನ್ನು ಹೆಗಡೆಯ ಮೋಜಿನಕೇರಿ ನಿವಾಸಿ ಚಂದ್ರಕಾಂತ ವಿನೋದ ನಾಯ್ಕ ಎಂದು ಗುರುತಿಸಲಾಗಿದೆ. ತೀವ್ರ ಗಾಯಗೊಂಡಿರುವ ಮಂಜುನಾಥ ಪಟಗಾರ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಮಣಿಪಾಲಕ್ಕೆ ಸಾಗಿಸಲಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.