ಕಾರವಾರ:  ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ವಿವಿಧ ವೀಕ್ಷಕರಾಗಿರುವ ಭಾರತೀಯ ಆಡಳಿತ ಸೇವೆ, ಭಾರತೀಯ ಕಂದಾಯ ಸೇವೆ ಹಾಗೂ ಭಾರತೀಯ ಪೊಲೀಸ್ ಸೇವೆ ಹಿರಿಯ ಅಧಿಕಾರಿಗಳು ಜಿಲ್ಲಾ ಕೇಂದ್ರದಲ್ಲಿ ವಾಸ್ತವ್ಯ ಮಾಡಿದ್ದಾರೆ.

ಚುನಾವಣಾ ಪ್ರಧಾನ ವೀಕ್ಷಕರಾದ ಹಿರಿಯ ಭಾರತೀಯ ಆಡಳಿತ ಸೇವೆ ಅಧಿಕಾರಿ ನವೀನ್ ಎಸ್.ಎಲ್. ಅವರು ಕಾರವಾರದ ಸಕ್ರ್ಯೂಟ್ ಹೌಸ್‍ನ ಕೊಠಡಿ ಸಂಖ್ಯೆ 1ರಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಚುನಾವಣೆ ಸಂಬಂಧಿಸಿದ ಯಾವುದೇ ದೂರುಗಳಿದ್ದಲ್ಲಿ ಸಾರ್ವಜನಿಕರು ದೂರವಾಣಿ ಸಂಖ್ಯೆ 8660582421 ಅಥವಾ ಇಮೇಲ್ [email protected] ಇಲ್ಲಿ ದೂರು ದಾಖಲಿಸಬಹುದು ಹಾಗೂ ಸಕ್ರ್ಯೂಟ್‍ಹೌಸ್ ಕೊಠಡಿಯಲ್ಲಿ ಭೇಟಿಯಾಗಿ ದೂರು ನೀಡಬಹುದಾಗಿದೆ.

ಚುನಾವಣಾ ವೆಚ್ಚ ವೀಕ್ಷಕರಾಗಿ ಇಬ್ಬರು ಐಆರ್‍ಎಸ್ ಅಧಿಕಾರಿಗಳು ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ನಿಯೋಜಿತರಾಗಿದ್ದು ದೀನ್‍ದಯಾಳ್ ಮಂಗಲ ಅವರು ಕಿತ್ತೂರು, ಖಾನಾಪುರ, ಹಳಿಯಾಳ ಹಾಗೂ ಕಾರವಾರ ವಿಧಾನಸಭಾ ಕ್ಷೇತ್ರ ವಯಾಪ್ತಿಯಲ್ಲಿ ಚುನಾವಣಾ ವೆಚ್ಚ ವೀಕ್ಷಕರಾಗಿ ಕರ್ತವ್ಯದಲ್ಲಿದ್ದಾರೆ. ಇವರು ಲೋಕೋಪಯೋಗಿ ಇಲಾಖೆ ಪರಿವೀಕ್ಷಣಾ ಮಂದಿರ ಕೊಠಡಿ ಸಂಖ್ಯೆ 5ರಲ್ಲಿ ವಾಸ್ತವ್ಯ ಇದ್ದು ದೂರವಾಣಿ ಸಂಖ್ಯೆ 8800714999, ಇಮೇಲ್ [email protected] ಆಗಿದ್ದು ಈ ವಿಧಾನಸಭಾ ಕ್ಷೇತ್ರದಲ್ಲಿನ ಚುನಾವಣಾ ವೆಚ್ಚ ಸಂಬಂಧಿಸಿದ ದೂರುಗಳಿದ್ದಲ್ಲಿ ಇವರನ್ನು ನೇರವಾಗಿ ಅಥವಾ ದೂರವಾಣಿ ಮೂಲಕ ಸಂಪರ್ಕಿಸಬಹುದಾಗಿದೆ.

ಮತ್ತೊಬ್ಬ ಚುನಾವಣಾ ವೆಚ್ಚ ವೀಕ್ಷಕರಾಗಿರುವ ಐಆರ್‍ಎಸ್ ಅಧಿಕಾರಿ ಆರ್.ವಿ.ಅರುಣ್ ಪ್ರಸಾದ್ ಅವರು ಕುಮಟಾ, ಭಟ್ಕಳ, ಶಿರಸಿ ಹಾಗೂ ಯಲ್ಲಾಪುರ ವಿಧಾನಸಭಾ ಕ್ಷೇತ್ರಗಳ ಚುನಾವಣಾ ವೆಚ್ಚ ಸಂಬಂಧಿಸಿದಂತೆ ವೀಕ್ಷಣೆ ಮಾಡಲಿದ್ದು ಇವರೂ ಸಹ ಕಾರವಾರದ ಲೋಕೋಪಯೋಗಿ ಇಲಾಖೆ ಪರಿವೀಕ್ಷಣಾ ಮಂದಿರ ಕೊಠಡಿ ಸಂಖ್ಯೆ 6ರಲ್ಲಿ ವಾಸ್ತವ್ಯ ಹೂಡಿದ್ದಾರೆ. ಇವರ ದೂರವಾಣಿ ಸಂಖ್ಯೆ 9444194442 ಆಗಿದ್ದು ಇಮೇಲ್ [email protected] ಆಗಿರುತ್ತದೆ. ಈ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚುನಾವಣಾ ವೆಚ್ಚ ಸಂಬಂಧಿಸಿದ ದೂರುಗಳಿದ್ದರೆ ಖುದ್ದು ಅಥವಾ ದೂರವಾಣಿ ಮೂಲಕ ನೀಡಬಹುದಾಗಿದೆ.

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಪೊಲೀಸ್ ವೀಕ್ಷಕರಾಗಿ ಪಂಚಾಬ್ ಐಪಿಎಸ್ ಅಧಿಕಾರಿ ಹರ್‍ಪ್ರೀತ್ ಸಿಂಗ್ ಸಿಧು ನಿಯೋಜನೆಗೊಂಡಿದ್ದು ಇವರೂ ಕೂಡ ಕಾರವಾರ ಸಕ್ರ್ಯೂಟ್ ಹೌಸ್ ಕೊಠಡಿ ಸಂಖ್ಯೆ 2ರಲ್ಲಿ  ವಾಸ್ತವ್ಯ ಹೂಡಲಿದ್ದಾರೆ. ಇವರ ದೂರವಾಣಿ 9915809999 ಆಗಿದ್ದು ಇಮೇಲ್ ವಿಳಾಸ [email protected] ಆಗಿರುತ್ತದೆ. ಚುನಾವಣೆ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಸಂಬಂಧಿಸಿದ ಸಾರ್ವಜನಿಕ ದೂರುಗಳಿದ್ದಲ್ಲಿ ಇವರನ್ನು ಸಂಪರ್ಕಿಸಬಹುದಾಗಿರುತ್ತದೆ ಎಂದು ಜಿಲ್ಲಾಡಳಿತ ಪ್ರಕಟಣೆ ತಿಳಿಸಿದೆ.

RELATED ARTICLES  ಮಾಜಿ ಶಾಸಕ ವಿ. ಎಸ್. ಪಾಟೀಲ ಅವರಿಗೆ ಕೊರೊನಾ ಪಾಸಿಟಿವ್