ಶಿರಸಿ: ಉತ್ತರ ಕನ್ನಡ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನ ಆಯ್ಕೆ ಮಾಡಿಸುತ್ತೇನೆ ಎಂದು ಕಾರ್ಯಕರ್ತರಿಗೆ ಮಾತು‌ ನೀಡಿದ್ದೆ. ಮಾತು ಉಳಿಸಿಕೊಳ್ಳಲಾಗಲಿಲ್ಲ, ಅದಕ್ಕಾಗಿ‌ ಕಾರ್ಯಕರ್ತರಲ್ಲಿ ಕ್ಷಮೆ ಕೇಳ್ತೀನಿ ಎಂದು ಪರೋಕ್ಷವಾಗಿ ಜಿಲ್ಲೆಯ ಅಭ್ಯರ್ಥಿಯಾಗಿ ಜೆಡಿಎಸ್​ನ ಆನಂದ್ ಅಸ್ನೋಟಿಕರ್ ಆಯ್ಕೆಗೆ ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

RELATED ARTICLES  ವಿಧಾತ್ರಿ ಅಕಾಡೆಮಿ ಸಹಯೋಗದ ಸರಸ್ವತಿ ಪಿಯು ಕಾಲೇಜಿನ ವಿದ್ಯಾರ್ಥಿಗಳಿಂದ IMU CET ಪರೀಕ್ಷೆಯಲ್ಲಿ ಉತ್ತಮ ಸಾಧನೆ

    ಶಿರಸಿಯಲ್ಲಿ  ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ‌ ಮಾತನಾಡಿದ  ಆರ್.ವಿ.ದೇಶಪಾಂಡೆ, ನಾನು ಸಾಕಷ್ಟು ರಾಜಕೀಯ ಮಾಡಿದ್ದೇನೆ. ಎಲ್ಲಾ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗೆ ನೋವಾಗಿದೆ, ನನಗೂ ನೋವಾಗಿದೆ. ನಾಲ್ಕು ತಿಂಗಳಲ್ಲಿ ಯಾರು ಏನು‌ ಮಾತಾಡಿದ್ರೋ ಅದಕ್ಕೆ ತಲೆ ಕೆಡಿಸಿಕೊಳ್ಳಲ್ಲ. ಬೇರೆ ಹೆಚ್ಚು ಹೇಳೋ‌ ಮನಸ್ಸಿಲ್ಲ, ಮನಸ್ಥಿತಿನೂ ಇಲ್ಲ ಎಂದು ಹೇಳಿದರು.

RELATED ARTICLES  ಸಂಬಂಧಿಕರೇ ಯುವತಿಯನ್ನು ಅಪಹರಿಸಿದರೇ? ಮತ್ತೆ ದಾಖಲಾಯ್ತು ಪ್ರಕರಣ.