ಕಾರವಾರ: ಪತ್ನಿ ಶ್ರೀರೂಪಾ ಹೆಗಡೆ, ಶಾಸಕಿ ರೂಪಾಲಿ ನಾಯ್ಕ ಹಾಗೂ ವಕೀಲ ಬಿ.ಎಸ್.ಪೈ ಅವರೊಂದಿಗೆ ಇಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅನಂತಕುಮಾರ ಹೆಗಡೆ ಮೂರು ನಾಮಪತ್ರ ಸಲ್ಲಿಸಿದರು.

    ಮಂಗಳವಾರ ನಾಮಪತ್ರ ಸಲ್ಲಿಸಿದ್ದ ಹೆಗಡೆ, ಬುಧವಾರ ಮತ್ತೆ ಮೂರು ನಾಮಪತ್ರ ಸಲ್ಲಿಕೆ ಮಾಡಿದರು.

ಒಬ್ಬ ಅಭ್ಯರ್ಥಿಗೆ ನಾಲ್ಕು ನಾಮಪತ್ರ ಸಲ್ಲಿಸಲು ಅವಕಾಶ ಇರುವುದರಿಂದ ಅವರು ಬುಧವಾರ ಮತ್ತೆ ಮೂರು ನಾಮಪತ್ರ ಸಲ್ಲಿಕೆ ಮಾಡಿದರು ಎನ್ನಲಾಗಿದೆ.

RELATED ARTICLES  ಶ್ರೀ ಶಂಭುಲಿಂಗೇಶ್ವರ ದೇವಾಲಯ, ಕಳಿಮಠ ಹೆರಂಗಡಿ ಗ್ರಾಮ, ತಾ|| ಹೊನ್ನಾವರ ಇದರ ಪುನರ್ ಪ್ರತಿಷ್ಠಾಪನಾ ಮಹೋತ್ಸವ

    ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾಮಪತ್ರದಲ್ಲಿ ಯಾವುದೇ ದೋಷ ಇದ್ದಿರಲಿಲ್ಲ. ‘ನಾಟ್ ಅಪ್ಲಿಕೇಬಲ್’ ಇದ್ದಲ್ಲಿ ‘ಎನ್ಎ’ ಅಂತಷ್ಟೇ ಬರೆದಿದ್ದೆವು‌. ಅದನ್ನ ವಿಸ್ತರಿಸಿ ನಿನ್ನೆಯೇ ಬರೆದುಕೊಟ್ಟಿದ್ದೆ ಎಂದು ತಿಳಿಸಿದರು.

ಕುಮಾರಸ್ವಾಮಿ ಸಿಎಂ ಆಗಿ ಜಿಲ್ಲೆಗೆ ಬರಬಹುದು. ಆದರೆ, ಅವರಿಗೆ ಇಲ್ಲಿಗೆ ಬರಲು ನೈತಿಕ ಅಧಿಕಾರವಿಲ್ಲ. ಕಳೆದ ಬಾರಿ ತಾವು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಜಿಲ್ಲೆಗೆ ಬಂದು ಅತಿಕ್ರಮಣದಾರರ ಸಮಸ್ಯೆಯನ್ನು ಬಗೆಹರಿಸಿಕೊಡುವುದಾಗಿ ಭರವಸೆ ನೀಡಿದ್ದರು. ಆದರೆ, ಈವರೆಗೂ ಅವರಿಗೆ ಬರಲಾಗಿಲ್ಲ. ರೈತರ ಸಾಲ ಮನ್ನಾ ಮಾಡುತ್ತೇವೆ ಎಂದರು. ಆದರೆ ಈವರೆಗೆ ಯಾರದ್ದೂ ಆಗಿಲ್ಲ‌ ಎಂದರು.

RELATED ARTICLES  ಇತಿಹಾಸ ಸಮ್ಮೇಳನದಲ್ಲಿ ಪ್ರೊ.ಶುಭಚಂದ್ರ ಅವರಿಗೆ ಸೋದೆ ಸದಾಶಿವರಾಯ ಪ್ರಶಸ್ತಿ ಪ್ರದಾನ