ಚೀನಾದ ವಾಣಿಜ್ಯ ನಗರಿ ಶಾಂಘೈ ನೂತನ ವಿಶ್ವದಾಖಲೆಗೆ ಪಾತ್ರವಾಗಿದೆ. 5ಜಿ ವ್ಯಾಪ್ತಿಯ ಮತ್ತು ಡೌನ್‍ಲೋಡ್ ಗೀಗಾ ಬೈಟ್ ನೆಟ್‍ವರ್ಕ್‍ನ ಜಗತ್ತಿನ ಪ್ರಪ್ರಥಮ ಜಿಲ್ಲೆ ಎಂಬ ಹೆಸರು ಗಳಿಸಿದೆ.
ಪ್ರಥಮ ಪ್ರದೇಶದ ಹೆಗ್ಗಳಿಕೆ ಪಡೆಯಲು ಅಮೆರಿಕ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದ ತೀವ್ರ ಪೈಫೋಟಿ ನಡುವೆ ಶಾಂಘೈ ಈ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದು ಚೀನಾ ಹೆಮ್ಮೆಯಿಂದ ಹೇಳಿಕೊಂಡಿದೆ. 5ಜಿ- ಹೊಸ ಜನಾಂಗದ ಅತ್ಯಾಧುನಿಕ ನೆಟ್‍ವರ್ಕ್ ಆಗಿದ್ದು, 4ಜಿಗಿಂತಲೂ 10 ರಿಂದ 100ಪಟ್ಟು ಡೌನ್‍ಲೋಡ್ ವೇಗದ ಸಾಮಥ್ರ್ಯ ಹೊಂದಿದೆ.