ಯಲ್ಲಾಪುರ : ಕೇಂದ್ರದ ನರೇಂದ್ರ ಮೋದಿ ಸರಕಾರ
ಆದಾಯ ತೆರಿಗೆ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಕಾಂಗ್ರೆಸ್ ವಿರುದ್ಧ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಖಂಡಿಸಿ ಯಲ್ಲಾಪುರದಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗೂ ಯುಥ್ ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನೆ ನಡೆಸಿ, ತಹಶೀಲ್ದಾರ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಶನಿವಾರ ಬೆಳಗ್ಗೆ ಕಾಂಗ್ರೆಸ್ ಕಚೇರಿಯಿಂದ ಮೆರವಣಿಗೆ ನಡೆಸಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗಲಾಯಿತು. ನಂತರ ತಹಶೀಲ್ದಾರ್ ಕಚೇರಿಗೆ ತೆರಳಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಶಿವರಾಮ ಹೆಬ್ಬಾರ್ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಮತ್ತು ಪ್ರಧಾನಮಂತ್ರಿ ನರೇಂದ್ರ ಮೋದಿ ದ್ವೇಷದ ರಾಜಕಾರಣ ಮಾಡುತ್ತಿದ್ದಾರೆ. ಗುಜರಾತ ಕಾಂಗ್ರೆಸ್ ಶಾಸಕರಿಗೆ ಆಪರೇಷನ ಕಮಲಕ್ಕೆ ಅವಕಾಶ ನೀಡಿಲ್ಲ ಎನ್ನುವ ಕಾರಣಕ್ಕೆ ಇಂಧನ ಸಚಿವ ಡಿ.ಕೆ. ಶಿವಕುಮಾರ ಮನೆ ಹಾಗೂ ಅವರ ಆಸ್ತಿಯ ಮೇಲೆ ಆದಾಯ ತೆರಿಗೆ ಇಲಾಖೆಯಿಂದ ದಾಳಿ ನಡೆಸಲಾಗಿದೆ. ಕೇವಲ ಕಾಂಗ್ರೆಸ್ಸಿಗರಲ್ಲಷ್ಟೇ ಹಣವಿದೆಯೇ ನೂರಾರು ಕೋಟಿ ರೂಪಾಯಿ ವೆಚ್ಚ ಮಾಡಿ ಬಿಜೆಪಿಯ ಸದಸ್ಯರೊಬ್ಬರು ಮಗಳ ಮದುವೆ ಮಾಡುವಾಗ ಈ ಐಟಿ ದಾಳಿ ಯಾಕೆ ಮಾಡಿಲ್ಲ ಎಂದವರು ಪ್ರಶ್ನಿಸಿದರು.
ಇಂತಹ ಸೇಡಿನ ರಾಜಕಾರಣವನ್ನು ಕಾಂಗ್ರೆಸ್ ಎಂದಿಗೂ ಮಾಡಿಲ್ಲ ನಾವು ಆದಾಯ ತೆರಿಗೆ ಕೆಲಸವನ್ನು ಪ್ರಶ್ನಿಸುತ್ತಿಲ್ಲ ಆದರೆ ಯಾವ ಸಂದರ್ಭದಲ್ಲಿ ದಾಳಿ ಮಾಡಲಾಯಿತು ಹಾಗೂ ಐಟಿ ಅಧಿಕಾರಿಗಳು ಯಾರ ಕೈಗೊಂಬೆಯಾಗಿ ಕೆಲಸ ಮಾಡಿದರು ಎಂಬುದನ್ನು ಪ್ರಶ್ನಿಸಿ ಸಾಂಕೇತಿಕವಾಗಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು ಹೇಳಿದರು.
ಬಿಜೆಪಿಯವರು ವಿರೋಧ ಪಕ್ಷ ಅಸ್ತಿತ್ವದಲ್ಲಿ ಇರಬಾರದು ಎಂದು ಆದಾಯ ತೆರಿಗೆ ಇಲಾಖೆ ಮುಂತಾದ ಇಲಾಖೆಗಳ ಮೂಲಕ ದಾಳಿ ನಡೆಸುತ್ತಿದ್ದಾರೆ. ಒಂದು ವೇಳೆ ಈ ದೇಶದಲ್ಲಿ ವಿರೋಧ ಪಕ್ಷವೇ ಇಲ್ಲದಿದ್ದರೆ ಸ್ವತಃ ಬಿಜೆಪಿಯಲ್ಲಿಯೇ ಇಬ್ಭಾಗವಾಗಿ ವಿರೋಧ ಪಕ್ಷ ಹುಟ್ಟಿಕೊಳ್ಳುತ್ತದೆ ಎಂದು ಅವರು ಎಚ್ಚರಿಸಿದರು.
ನಾನು ಕೂಡ ಐಟಿ ದಾಳಿಯನ್ನು ಎದುರಿಸಿದ್ದೇನೆ ನಮ್ಮಲ್ಲಿ ಅಷ್ಟು ಹಣ ಸಿಕ್ಕಿತ್ತು ಇಷ್ಟು ಹಣ ಸಿಕ್ಕಿತು ಎಂದು ಸುದ್ದಿ ಮಾಡಲಾಯಿತು ನಂತರ ಸತ್ಯ ಎಲ್ಲರಿಗೂ ತಿಳಿದಿದೆ ಹಾಗೆಯೇ ಡಿಕೆ ಶಿವಕುಮಾರ್ ಅವರು ಆರೋಪ ಮುಕ್ತರಾಗಿ ಹೊರಬರಲಿದ್ದಾರೆ ಎನ್ನುವ ವಿಶ್ವಾಸ ನಮಗಿದೆ ಎಂದರು
ತಹಶೀಲ್ದಾರ್ ಡಿ ಜಿ ಹೆಗಡೆ ಮನವಿ ಸ್ವೀಕರಿಸಿ. ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ರವಾನಿಸುವುದಾಗಿ ಹೇಳಿದರು
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಿ ಎನ್ ಗಾಂವ್ಕರ. ಖಾದಿ ಮಂಡಳಿ ನಿರ್ದೇಶಕ ವಿಜಯ ಮಿರಾಶಿ ಪಟ್ಟಣ ಪಂಚಾಯತ ಅಧ್ಯಕ್ಷ ಶಿರೀಶ್ ಪ್ರಭು ಕಾಂಗ್ರೆಸ್ ಮುಖಂಡರಾದ ಟಿಸಿ ಗಾಂವ್ಕರ್ ಆರ್ ಎಸ್ ಭಟ್ ಶಕೀಲ್ ಅಹಮ್ಮದ್ ವಿಟ್ಟು ಶೇಳ್ಕೆ ರವಿ ಭಟ್ಟ ಬರಗದ್ದೆ . ತಾ.ಪಂ ಅಧ್ಯಕ್ಷೆ ಸುಜಾತಾ ಸಿದ್ದಿ ಸದಸ್ಯೆ ರಾಧಾ ಹೆಗಡೆ. ಮಹಿಳಾ ಪ್ರಮುಖರಾದ ಪೂಜಾ ನೇತ್ರಕರ ಇದ್ದರು.