ಕಾರವಾರ: ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಜೆಡಿಎಸ್ ಮುಖಂಡ ಹಾಗೂ ಮಾಜಿ ಸಚಿವ ಆನಂದ ಅಸ್ನೋಟಿಕರ ನಾಳೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಉಪಸ್ಥಿತಿಯಲ್ಲಿ ನಾಮಪತ್ರ ಸಲ್ಲಿಸಲಿದ್ದಾರೆ.

     ಗುರುವಾರ ಬೆಳಿಗ್ಗೆ 10 ಗಂಟೆಗೆ ಗೋಕರ್ಣದಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಆಯೋಜಿಸಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲಿರುವ ಮುಖ್ಯಮಂತ್ರಿ ಬಳಿಕ ನೇರ ಕಾರವಾರಕ್ಕೆ ಆಗಮಿಸಿ ಆನಂದ ಅಸ್ನೋಟಿಕರ ನಾಮಪತ್ರಿಕೆ ಸಲ್ಲಿಕೆಯ ವೇಳೆ ಉಪಸ್ಥಿತರಿರಲಿದ್ದಾರೆ.

RELATED ARTICLES  ಪ್ರಾಥಮಿಕ ಹಂತದಲ್ಲಿ ಕೊಂಕಣಿ ಭಾಷೆನ್ನು ಬೋಧಿಸಲು ಅನುವು ಮಾಡುವಂತೆ ಸರಕಾರವನ್ನು ಒತ್ತಾಯಪಡಿಸುತ್ತೇನೆ : ಶಾಂತಾರಾಮ ಸಿದ್ದಿ

    ಇನ್ನು ಆನಂದ ಅಸ್ನೋಟಿಕರ ಮಾ.30ಕ್ಕೆ ನಾಮಪತ್ರ ಸಲ್ಲಿಸುವುದಾಗಿ ನಿರ್ಧರಿಸಿದ್ದರಾದರು ಸಿಎಂ ಕುಮಾರ ಸ್ವಾಮಿ ಅವರು ಏ.4 ರಂದು ಆಗಮಿಸುವ ಕಾರಣ ನಾಮಪತ್ರ ಸಲ್ಲಿಕೆ ಕಾರ್ಯಕ್ರಮ ಮುಂದೂಡಿದ್ದರು. ಆದರೆ ಪುರೋಹಿತರ ಸಲಹೆಯಂತೆ ಮಾ.30 ರಂದು ತಮ್ಮ ಗೃಹದಲ್ಲೇ ನಾಮಪತ್ರಕ್ಕೆ ಸಹಿ ಮಾಡಿ ಇಟ್ಟುಕೊಂಡಿದ್ದರು.

RELATED ARTICLES  ಕೆಲಸ ಮುಗಿಸಿ ಬರುವಾಗ ಕಾಲುಜಾರಿ ಬಾವಿಗೆ ಬಿದ್ದು ಯುವತಿ ಸಾವು

   ಗುರುವಾರ ನಗರದ ಮಾಲಾದೇವಿ ಮೈದಾನದಲ್ಲಿ ಮುಖಂಡರೆಲ್ಲರು ಸೇರಿ ಬಳಿಕ ನಗರದಲ್ಲಿ ಮೆರವಣಿಗೆಯ ಮೂಲಕ ಆಗಮಿಸಿ ಜಿಲ್ಲಾ ಚುನಾವಣಾಧಿಕಾರಿಗಳಿಗೆ ನಾಮಪತ್ರ ಸಲ್ಲಿಸಲಿದ್ದಾರೆ.