ನಕಲಿ ಅಶ್ಲೀಲ ಸಿಡಿ ತಯಾರಿಸಿ; ಪೂಜ್ಯ ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀಮಹಾಸ್ವಾಮಿಗಳ ತೇಜೋವಧೆಯ ಹುನ್ನಾರ ನಡೆಸಿದ್ದಪ್ರಕರಣಕ್ಕೆ ಸಂಬಂಧಿಸಿ, ಕುಮಟಾದ ನ್ಯಾಯಾಲಯದಲ್ಲಿಸಲ್ಲಿಕೆಯಾಗಿರುವ ಚಾರ್ಜ್’ಶೀಟ್ ರದ್ಧತಿಗೆಆರೋಪಿಗಳು ಮಾಡಿದ್ದ ಮೇಲ್ಮನವಿಯನ್ನುಕಾರವಾರದ ಜಿಲ್ಲಾ ಸತ್ರ ನ್ಯಾಯಾಲಯವಜಾಗೊಳಿಸಿದ್ದು, ಪ್ರಕರಣದ ವಿಚಾರಣೆಯನ್ನುಮುಂದುವರಿಸುವಂತೆ ಆದೇಶ ಹೊರಡಿಸಿದೆ.

2010 ರಲ್ಲಿ ಪೂಜ್ಯ ಶ್ರೀಗಳನ್ನು ಹೋಲುವ ವ್ಯಕ್ತಿಗೆಶ್ರೀಗಳಂತೆ ಉಡುಗೆತೊಡುಗೆಯನ್ನು ತೊಡೆಸಿ, ಶ್ರೀಗಳಂತೆ ಹಾವ-ಭಾವಗಳ ಅಭ್ಯಾಸ ಮಾಡಿಸಿ  ಚಿತ್ರೀಕರಣ ಮಾಡಲಾಗಿತ್ತು. ವೈದಿಕ ವೃತ್ತಿಯಲ್ಲಿರುವಆರೋಪಿಗಳು, ತಮ್ಮ ಮಧ್ಯೆ ನಡೆಸಿದ ಸಂಭಾಷಣೆಗಳು, ಹಂಚಿಕೊಂಡ ವಿಡಿಯೋಗಳು ಶ್ರೇಷ್ಠವಾದ ಆ ವೃತ್ತಿಯಗೌರವಕ್ಕೆ ಚ್ಯುತಿತರುವಂತೆ ಇದ್ದವು ಹಾಗೂ ಕೋಟ್ಯಂತರರೂಪಾಯಿಗಳ ಸಾಫ್ಟವೇರ್ ಹಾಗೂ ಹಾಲಿವುಡ್ತಂತ್ರಜ್ಞಾನ ಬಳಸಿ ಶ್ರೀಗಳ ಚಿತ್ರಗಳನ್ನು ಅಶ್ಲೀಲಚಿತ್ರಗಳ ಜೊತೆ ಜೋಡಿಸಿ, ತೋಜೋವಧೆ ಮಾಡುವಯತ್ನಗಳು ನಡೆದಿದ್ದವು. ಮಾರ್ಫಿಂಗ್ ಮಾಡಿದಚಿತ್ರಗಳನ್ನು ಬಳಸಿಕೊಂಡು ಅಶೀಲ ಸಿಡಿ ತಯಾರಿಸಿ, ಲೋಕಮುಖದಲ್ಲಿ ಶ್ರೀಗಳ ಮಾನಾಪಹರಣಮಾಡುವಹೀನಕೆಲಸ ಹಾಗೂ ಅದನ್ನು ರಾಷ್ಟ್ರಮಟ್ಟದಸುದ್ಧಿವಾಹಿನಿಯೊಂದರಲ್ಲಿ ಪ್ರಸಾರ ಮಾಡಿಸಲುಮಾತುಕತೆಗಳೂ ನಡೆದಿದ್ದವು.

ದಕ್ಷ ಪೋಲಿಸ್ ಅಧಿಕಾರಿ ಐಜಿಪಿ ಗೋಪಾಲ್ಹೊಸೂರ್ ನೇತೃತ್ವದ ಪೋಲಿಸ್ ತಂಡ ಈ ಹೀನಹುನ್ನಾರವನ್ನು ಭೇದಿಸಿ, ಆರೋಪಿಗಳನ್ನು ಸಾಕ್ಷಾಧಾರಸಮೇತವಾಗಿ ಗೋಕರ್ಣದಲ್ಲಿ ಬಂಧಿಸಿದ್ದರು. ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ಪ್ರಯೋಗಾಲಯವೂಈ ಕುಕೃತ್ಯವನ್ನು ದೃಢೀಕರಿಸಿತ್ತು. ಆನಂತರ ತನಿಖೆನಡೆದು ಆರೋಪಿಗಳ ವಿರುದ್ಧ ದೋಷಾರೋಪಪಟ್ಟಿಯೂಸಲ್ಲಿಕೆಯಾಗಿತ್ತು. ಈ ಮಧ್ಯೆ ವಿಚಾರಣೆಯನ್ನು ನಿಲ್ಲಿಸುವ, ಪ್ರಕರಣವನ್ನು ಮುಚ್ಚಿಹಾಕುವ ಹಲವಾರುವಿಫಲಯತ್ನಗಳು ನಡೆದವು.

ಸೋಲುಗಳ ಸರಮಾಲೆ :     

ಪ್ರಕರಣ ತನಿಖಾ ಹಂತದಲ್ಲಿ ಇರುವಾಗಉಚ್ಚನ್ಯಾಯಾಲಯದಲ್ಲಿ ದೂರನ್ನು ರದ್ಧುಗೊಳಿಸಲುಪ್ರಯತ್ನಿಸಿ ಸೋತರು, ಕುಮಟಾ ಜೆ.ಎಮ್.ಎಫ್.ಸಿನ್ಯಾಯಾಲಯದಲ್ಲಿ ದೋಷಾರೋಪಣಾ ಪಟ್ಟಿಯನ್ನುವಜಾಗೊಳಿಸಲು ಎರಡು ಬಾರಿ ವಿಫಲ ಯತ್ನ ನಡೆಸಿದರು, 2015 ರಲ್ಲಿ ಸ್ವಯಂ ರಾಜ್ಯಸರ್ಕಾರವೇ ಷಡ್ಯಂತ್ರಿಗಳಪರವಾಗಿ ನಿಂತು; ಅಭಿಯೋಜನೆಯ ಮೂಲಕಪ್ರಕರಣವನ್ನೇ ಮುಚ್ಚಿಹಾಕಲು ಯತ್ನಿಸಿತಾದರೂ, ನ್ಯಾಯಾಲಯ ಅದಕ್ಕೆ ತಡೆಯೊಡ್ಡಿತು. ಇದೀಗ ಜಿಲ್ಲಾ ಸತ್ರನ್ಯಾಯಾಲಯವೂ ಆರೋಪಿಗಳ ಮೇಲ್ಮನವಿಯನ್ನುತಿರಸ್ಕರಿಸಿದ್ದು, ದೋಷಾರೋಪಣೆಯ ವಿಚಾರಣೆನಡೆಸುವಂತೆ ಆದೇಶ ಮಾಡಿದೆ. ಪ್ರಕರಣದಲ್ಲಿಆರೋಪಿಗಳಿಗಾದ ಪ್ರತಿಯೊಂದೂ ಸೋಲೂ ಕೂಡಶ್ರೀಮಠದ ಮೇಲೆ ನಡೆಯುತ್ತಿರುವುದು ಹೀನಷಡ್ಯಂತ್ರವೆಂಬ ನಿಲುವನ್ನು ಮತ್ತಷ್ಟುಪುಷ್ಟೀಕರಿಸುತ್ತದೆ.

RELATED ARTICLES  ತಮ್ಮತನ ಕಾಯ್ದುಕೊಂಡು ಸಮಗ್ರ ಹಿಂದೂ ಸಮಾಜಕ್ಕೆ ಕೊಡುಗೆ ನೀಡಿ: ರಾಘವೇಶ್ವರ ಶ್ರೀ

ನಕಲಿ ಅಶ್ಲೀಲ ಸಿಡಿ ಪ್ರಯತ್ನ ವಿಫಲವಾದ ನಂತರ, ನಕಲಿಪಿ.ಐ.ಲ್ –
10 ಕೋಟಿ ಬ್ಲಾಕ್’ಮೇಲ್,  ಮೊದಲಮಿಥ್ಯಾರೋಪ, ಆನಂತರ ಎರಡನೇ ಮಿಥ್ಯಾರೋಪ… ಮುಂತಾದವುಗಳ ಮೂಲಕ ಶ್ರೀಮಠ ಹಾಗೂ ಶ್ರೀಗಳಮೇಲೆ ನಿರಂತರವಾಗಿ ಕೇಸುಗಳನ್ನು ಹಾಕಿ, ಕಿರುಕುಳನೀಡುವ, ತೋಜೋವಧೆ ಮಾಡುವಪ್ರಯತ್ನಗಳಾಗುತ್ತಿವೆಯಾದರೂ, ಸತ್ಯ ಹಾಗೂಧರ್ಮದ ತಳಹದಿಯಲ್ಲಿರುವುದರಿಂದ ಶ್ರೀಮಠದಯಾ ಶ್ರೀಗಳ ಧವಳಕೀರ್ತಿಗೆ ಮಸಿಬಳಿಯುವ ಯಾವಪ್ರಯತ್ನವೂ ಗೆಲ್ಲಲಾರದು. 

ಶ್ರೀಮಠವು ನ್ಯಾಯಾಂಗ ವ್ಯವಸ್ಥೆಯ ಮೇಲೆಅಚಲವಾದ ವಿಶ್ವಾಸವನ್ನು ಹೊಂದಿದ್ದು, ದಕ್ಷಪೋಲಿಸ್ ಅಧಿಕಾರಿಗಳು ಸಾಕ್ಷಾಧಾರ ಸಹಿತವಾಗಿಭೇದಿಸಿದ ಹಾಗೂ ಷಡ್ಯಂತ್ರಗಳಿಗೆ ಮೂಲವಾದ ಈನಕಲಿ ಅಶ್ಲೀಲ ಸಿಡಿ ಪ್ರಕರಣದ ಸಮಗ್ರ ತನಿಖೆ ನಡೆದು, ಆರೋಪಿಗಳ ಹಾಗೂ ಆರೋಪಿಗಳಹಿನ್ನೆಲೆಯಲ್ಲಿರುವವರಿಗೆ ನ್ಯಾಯಾಂಗ ವ್ಯವಸ್ಥೆಯಮೂಲಕ ಸೂಕ್ತ ಶಿಕ್ಷೆಯಾಗಲಿ, ಒಳಿತನ್ನು ಕೆಡುಕಿನಂತೆಬಿಂಬಿಸುವ ಹೀನ ಕಾರ್ಯಮಾಡುವವರು ಸರಿಯಾದಪಾಠಕಲಿಯುವಂತಾಗಲಿ ಎಂದು ಶ್ರೀಮಠ ಆಶಿಸುತ್ತದೆ.