ಭಟ್ಕಳ: ತಾಲೂಕಿನ ಹನುಮಾನನಗರದ ಹಿಂದೂ ಜನಜಾಗರಣ ವೇದಿಕೆಯ ಘಟಕಕ್ಕೆ ಇಂದಿಗೆ 4 ವರ್ಷ ಸಂದ ಸವಿನೆನಪಿಗಾಗಿ ಊರಿನವರೆಲ್ಲ ಸೇರಿ ಶನಿವಾರ ಸಂಭ್ರಮಾಚರಿಸಿದರು.

ಹಿಂದೂ ವರ್ಷದ ಆರಂಭದ ದಿನವಾದ ಯುಗಾದಿಯಂದು ಘಟಕ ಆರಂಭಗೊಂಡಿತ್ತು. ಈ ಹಿನ್ನೆಲೆಯಲ್ಲಿ ನಿನ್ನೆ ಮಧ್ಯರಾತ್ರಿ ಕೇಕ್ ಕತ್ತರಿಸಿ, ಸಿಹಿ ಹಂಚಲಾಯಿತು.

RELATED ARTICLES  ಕುಮಟಾದಲ್ಲಿ ಕಮಲ ಕಲರವ: ದಿನಕರ ಶೆಟ್ಟಿಯವರಿಗೆ 'ಯೋಗಿ' ಬಲ

ಇಂದು ಕೂಡ ಊರಿನವರೆಲ್ಲ ಸೇರಿ, ಪರಸ್ಪರ ಎಳ್ಳು- ಬೆಲ್ಲ ವಿನಿಯಮ ಮಾಡಿಕೊಂಡರು‌. ಪಾನಕ ಸವಿದು ಹಿಂದೂ ವರ್ಷವನ್ನು ಅದ್ಧೂರಿಯಿಂದ ಸ್ವಾಗತಿಸಿದರು.

RELATED ARTICLES  ಚಳಿಯ ಕಾರಣ ಒಲೆಯಲ್ಲಿ ಬೆಂಕಿ ಕಾವು ಪಡೆಯುವಾಗ ಅವಘಡ

ಈ ವೇಳೆ ಹಿಂದೂಪರ ಸಂಘಟನೆಗಳ ಮುಖಂಡ ಗೋವಿಂದ ನಾಯ್ಕ, ಊರಿನ ಮುಖಂಡ ಲಚ್ಮಯ್ಯ ನಾಯ್ಕ, ಸೋಮೇಶ್ವರ್ ನಾಯ್ಕ ಸೇರಿದಂತೆ ಊರಿನವ ಪ್ರಮುಖರು ಹಾಗೂ ಯುವಕರು ಹಾಜರಿದ್ದರು.