ಮೇಷ ರಾಶಿ    

 ಎಲ್ಲಾ ರೀತಿ ಸವಾಲುಗಳನ್ನು ಎದುರಿಸುತ್ತಲೇ ಬಂದಿರುವ ನಿಮಗೆ ಶುಭ ದಿನ. ನಿಮಗೆ ಮುದ ನೀಡುವ ಒಂದು ವಾರ್ತೆ ನಿಮ್ಮನ್ನು ಉತ್ಸಾಹಿತರನ್ನಾಗಿ ಮಾಡುವುದು. ವಿವಿಧ ಮೂಲಗಳಿಂದ ಹಣ ಹರಿದು ಬರುವುದು. 

ವೃಷಭ ರಾಶಿ

ನಿಮ್ಮದೇ ಆದ ವಿಧಾನವನ್ನು ಗುರುತಿಸಿಕೊಳ್ಳಿ. ಈಡೇರಬೇಕಾದ ಹಲವಾರು ವಿಚಾರಗಳು ಬಗೆಹರಿಯುವವು. ಆರೋಗ್ಯದ ಕಡೆ ತುಸು ಗಮನ ಕೊಡುವುದು ಒಳ್ಳೆಯದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಅಲ್ಪ ಹಿನ್ನಡೆ ಉಂಟಾಗುವುದು.

ಮಿಥುನ ರಾಶಿ

ಬದಲಾದ ಕಾಲಧರ್ಮಕ್ಕೆ ಹೊಂದಿಕೊಳ್ಳುವ ವಿಚಾರದಲ್ಲಿ ನೀವು ಅನೇಕ ರೀತಿಯ ಪ್ರಗತಿಯನ್ನು ಸಾಧಿಸಲಿದ್ದೀರಿ. ಪೂರ್ವಪುಣ್ಯದ ಬಲದಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವವು. ಹಿರಿಯರ ಆಶೀರ್ವಾದ ಗಳಿಸಿ 

ಕರ್ಕ ರಾಶಿ

ಮನೆ, ಆಫೀಸ್‌, ಮಿತ್ರರು, ವ್ಯಾವಹಾರಿಕ ಪ್ರಪಂಚ ಇತ್ಯಾದಿಗಳಲ್ಲಿ ಚುರುಕುತನ ತೋರುವುದರಿಂದ ಕೆಲಸ ಕಾರ್ಯಗಳು ತ್ವರಿತಗತಿಯಲ್ಲಿ ಮುಗಿಯುವವು. ಇದರಿಂದ ಮನಸ್ಸಿನಲ್ಲಿ ಪ್ರಶಾಂತತೆ ಇರುವುದು.

RELATED ARTICLES  ಪರಸ್ಪರ ಕೆಸರೆರಚಾಟದಲ್ಲಿ ಬಂದ್ ಗೆ ಮಿಶ್ರ ಪ್ರತಿಕ್ರಿಯೆ

ಸಿಂಹ ರಾಶಿ

ಆತ್ಮವಿಶ್ವಾಸ ಬಹಳ ಉತ್ತಮವಾದುದು. ನಿಮ್ಮ ಧೈರ್ಯ ಸ್ಥೈರ್ಯಗಳು ಅಸಾಧ್ಯ ಎನಿಸಿದ್ದನ್ನು ಸಾಧಿಸಿಕೊಡಲಿವೆ. ಮಕ್ಕಳ ವಿವಾಹದ ವಿಚಾರದಲ್ಲಿ ಒಂದು ದೃಢ ನಿರ್ಧಾರ ತಳೆಯುವುದು ಒಳ್ಳೆಯದು.

ಕನ್ಯಾ ರಾಶಿ

ಎಲ್ಲಾ ವಿಚಾರಗಳಿಗೂ ಗೆಳೆಯರನ್ನು ಆಶ್ರಯಿಸುವುದು ಸೂಕ್ತವಲ್ಲ. ಕೆಲವು ವಿಚಾರಗಳಲ್ಲಿ ಸ್ವತಂತ್ರ ನಿರ್ಧಾರ ತಳೆಯುವುದು ಒಳ್ಳೆಯದು. ಅಂತೆಯೇ ಕುಟುಂಬ ಸದಸ್ಯರ ಸಲಹೆಗಳು ಅಷ್ಟೇ ಮಹತ್ವಪೂರ್ಣವಾಗಿರುತ್ತವೆ.

ತುಲಾ ರಾಶಿ

ಸರಳತನ ಇರಬೇಕು. ಆದರೆ ಬೇರೆಯವರು ನಮ್ಮ ಮೇಲೆ ಸವಾರಿ ಮಾಡುವಷ್ಟು ಇರಬಾರದು. ಕೆಲವು ವಿಷಯಗಳಲ್ಲಿ ನೀವು ಹುಂಬುತನದಿಂದ ವರ್ತಿಸುವುದನ್ನು ಬಿಟ್ಟಲ್ಲಿ ಆರ್ಥಿಕ ಸಂಕಷ್ಟದಿಂದ ಪಾರಾಗುವಿರಿ.

ವೃಶ್ಚಿಕ ರಾಶಿ

ವಾಸಕ್ಕೊಂದು ಮನೆ ಬಯಸುತ್ತಿರುವ ನೀವು ನಿಮ್ಮ ಯೋಜನೆಗೆ ಒಂದು ನಿಶ್ಚಿತವಾದ ರೂಪ ಕೊಡುವುದು ಒಳ್ಳೆಯದು. ಕೆಲಸದಲ್ಲಿ ಗಮನವಿರಲಿ. ಮಾತಿನಲ್ಲಿ ಎಚ್ಚರ. ಹಣಕಾಸಿನಲ್ಲಿ ಉತ್ತಮ. 

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 06-02-2019) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ?

ಧನು ರಾಶಿ

ನಿರಾಯಾಸ ಮಾತುಗಳಿಂದ ಹತ್ತು ಹಲವು ಕೆಲಸಗಳನ್ನು ಸಾಧಿಸುವಿರಿ. ಆದರೆ ಅದೇ ಅಹಂ ಆಗದಿರಲಿ. ಅತಿಯಾದ ಆತ್ಮವಿಶ್ವಾಸ ಮತ್ತು ಅಹಂಕಾರ ಮನುಷ್ಯನ ಅಧಃಪತನಕ್ಕೆ ಕಾರಣವಾಗುವುದು.

ಮಕರ ರಾಶಿ

ತಪ್ಪು ಹೆಜ್ಜೆಗಳನ್ನು ಇಡುತ್ತಿದ್ದೇನೆ ಎಂಬ ಹಿಂಜರಿಕೆಯನ್ನು ನಿಯಂತ್ರಿಸಿ ಬುದ್ಧಿ ಚಾತುರ‍್ಯದಿಂದಲೇ ಸಂಕಷ್ಟದ ಪರಿಸ್ಥಿತಿಯನ್ನು ಎದುರಿಸುವಿರಿ ಮತ್ತು ನಿಮ್ಮ ಹೋರಾಟದಲ್ಲಿ ಜಯ ಸಾಧಿಸುವಿರಿ

ಕುಂಭ ರಾಶಿ

ಊರಿಗೆ ಪ್ರಯಾಣ ಬೆಳೆಸುವಂತಹ ಜರೂರು ಉಂಟಾಗುವುದು. ಆದರೆ ಅದಕ್ಕೆ ಸೂಕ್ತ ತಯಾರಿ ನಡೆಸುವುದು ಮುಖ್ಯ. ಸಹೋದರ ಸಹಾಯ ಅಗತ್ಯವಿದ್ದಲ್ಲಿ ಬಳಸಿಕೊಳ್ಳಿ.

ಮೀನ ರಾಶಿ

ನಿರಂತರವಾದ ವಾದವಿವಾದಗಳು ಪ್ರಯೋಜನ ನೀಡಲಾರವು. ಮೌನದಿಂದ ಕೆಲಸ ಸಾಧಿಸಿ ನಿರಾಳತೆಯಿಂದ ಬದುಕಿ. ಅಗತ್ಯಕ್ಕೆ ತಕ್ಕಷ್ಟು ಹಣ ಖರ್ಚು ಮಾಡುವುದು ಒಳ್ಳೆಯದು. ಕುಲದೇವತಾ ಸ್ಮರಣೆ ಮಾಡಿ.