ಅಂಕೋಲಾ : ಜಿ.ಸಿ. ಕಾಲೇಜಿನ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಕಾಲೇಜಿನಲ್ಲಿಯೇ ಓದುತ್ತಿರುವ ವಿದ್ಯಾರ್ಥಿಯೊಬ್ಬ ಕವನ ಸಂಕಲನ ಬಿಡುಗಡೆ ಮಾಡುತ್ತಿರುವುದು ಪ್ರಥಮವಾಗಿವೆ. ಇಲ್ಲಿ ಕಲಿತವರು ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುವುದರ ಜತೆಗೆ ಸಾಹಿತ್ಯದಲ್ಲೂ ಹೆಸರನ್ನು ಮಾಡಿದ್ದಾರೆ. ಅಂತವರ ಸಾಲಿನಲ್ಲಿ ವಿದ್ಯಾರ್ಥಿ ಎನ್‌.ಯು.ಮಹೇನ್‌ ಕೂಡ ಗುರುತಿಸಿಕೊಳ್ಳುವಂತಾಗಲಿ ಎಂದು ಹಿರಿಯ ಸಾಹಿತಿ ಶಾಂತಾರಾಮ ನಾಯಕ ಹಿಚಕಡ ಹಾರೈಸಿದರು..

ಪಟ್ಟಣದ ಜಿ.ಸಿ. ಕಾಲೇಜಿನ ಯು.ಜಿ.ಸಿ. ಸಭಾಂಗಣದಲ್ಲಿ ಗುರುವಾರ ಅವಿರತ ಪ್ರಕಾಶನ ಉದ್ಘಾಟನೆ ಮತ್ತು ಕವಿ ಎನ್‌.ಯು. ಮಹೇನ್‌ ಅವರ ‘ಆಹ್ವಾನ’ ಕವನ ಸಂಕಲನ ಬಿಡುಗಡೆ ಮಾಡಿ ಅವರು ಮಾತನಾಡಿದರು.

RELATED ARTICLES  ಮಲೆನಾಡು ಗಿಡ್ಡ ಹಬ್ಬದಲ್ಲಿ ಜನಸಾಗರ: ತಳಿಯ ಉಳಿವು, ಬೆಳವಿನ ಬಗ್ಗೆ ಚಿಂತನ ಮಂಥನ.

ಸಾಹಿತಿ ವಿಷ್ಣು ನಾಯ್ಕ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಪ್ರೇಮ ಕವಿತೆ, ಮಕ್ಕಳ ಕವಿತೆ ಕೊರತೆ ಎದ್ದು ಕಾಣುತ್ತಿದ್ದು, ವಿದ್ಯಾರ್ಥಿಗಳು ಬರವಣಿಗೆಯನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದರು.

ಕವಿ ಮೋಹನ ಹಬ್ಬು ಮಾತನಾಡಿ, ಎನ್‌.ಯು. ಮಹೇನ್‌ ಅವರ ಕವನ ಸಂಕಲನದಲ್ಲಿ ಸಾಕಷ್ಟು ಕವಿತೆಗಳು ಸಾಮಾಜಿಕ ಕಳಕಳಿ ಹೊಂದಿವೆ ಎಂದರು.

RELATED ARTICLES  ಮಹಾವಿಷ್ಣುವಿಗೆ ಸಂಗೀತ ದೀಪಾರಾಧನೆ.

ಕತೆಗಾರ ಡಾ.ರಾಮಕೃಷ್ಣ ಗುಂದಿ ಮಾತನಾಡಿ, ದಿನಕರ ದೇಸಾಯಿ ಪ್ರತಿಷ್ಠಾಪಿಸಿದ ಈ ಕಾಲೇಜಿನಲ್ಲಿ ಹಾಲಿ ವಿದ್ಯಾರ್ಥಿ ಎನ್‌.ಯು.ಮಹೇನ್‌ ತನ್ನ ಚೊಚ್ಚಲ ಕವನ ಸಂಕಲನ ತರುವ ಮೂಲಕ ಕಾಲೇಜಿನ ವಿದ್ಯಾರ್ಥಿಯೊಬ್ಬ ಇದೇ ಮೊದಲ ಬಾರಿಗೆ ಈ ಸಾಹಸಕ್ಕೆ ಕೈ ಹಾಕಿದ್ದು, ಮುಂದೆ ಇಂತಹ ಯುವ ಕವಿಗಳಿಗೆ ಅಧ್ಯಾಪಕ ವೃಂದದಿಂದ ಪ್ರೋತ್ಸಾಹ ಸಿಗುವಂತಾಗಲಿ ಎಂದರು.