ಕುಮಟಾ : ಮಾದರಿ ಯುವ ಒಕ್ಕೂಟ ಮತ್ತು ಮಾದರಿ ಮಹಿಳಾ ಒಕ್ಕೂಟ ಇವರ ಆಶ್ರಯದಲ್ಲಿ ದ್ವಿತೀಯ ವರ್ಷದ “ಯುಗಾದಿ ಉತ್ಸವ ಇದು ಮಾದರಿ ಉತ್ಸವ” ಕಾರ್ಯಕ್ರಮವನ್ನು ನಿವೃತ್ತ ಹೈಸ್ಕೂಲ್ ಶಿಕ್ಷಕರಾದ ಮತ್ತು ಯುಗಾದಿ ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಶ್ರೀ ಎಸ್.ಎನ್.ಭಟ್ ರವರು ಉದ್ಘಾಟಿಸಿದರು. ಕನ್ನಡ ಜಿಲ್ಲಾ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಶ್ರೀ ಅರವಿಂದ ಕರ್ಕಿಕೋಡಿ ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ
ಶ್ರೀಮತಿ ಸುಲೋಚನಾ ರಾವ್,
ಶ್ರೀ ರಾಮಾಂಜನೇಯ ದೇವಸ್ಥಾನ ಹೊಲನಗದ್ದೆಯ ಪ್ರಧಾನ ಅರ್ಚಕರಾದ ಶ್ರೀ ಶ್ರೀಪಾದ ಮಹಾದೇವ ನಾಯ್ಕ,
ಅತಿಥಿಗಳಾಗಿ ಶ್ರೀ ರಾಧಾಕೃಷ್ಣ ನಾಯ್ಕ, ಸುಮಿತ್ರಾ ಪಟಗಾರ, ಶಾರದಾ ಪಟಗಾರ, ಶಿವರಾಮ ನಾಯ್ಕ, ಶೇಖರ ನಾಯ್ಕ ಗಂಗಾಧರ ನಾಯ್ಕ ಇವರ ಜೊತೆಯಲ್ಲಿ ಉತ್ಸವ ಸಮಿತಿಯ ಅಧ್ಯಕ್ಷರಾದ ಕು॥ ರಾಘವೇಂದ್ರ ನಾಯ್ಕ ಮತ್ತು ಮಹಿಳಾ ಒಕ್ಕೂಟದ ಅಧ್ಯಕ್ಷೆ ಪುಷ್ಪಾ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಬಗ್ಗೆ ಸಮಿತಿಯ ಗೌರವಾಧ್ಯಕ್ಷರು, ಮುಖ್ಯಅತಿಥಿ ಶ್ರೀಮತಿ ಸುಲೋಚನಾ ರಾವ್ ಮಾತನಾಡಿ ಪ್ರಶಂಸೆ ವ್ವಕ್ತಪಡಿಸಿ ಶುಭಕೋರಿದರು.
ಸಮಿತಿಯ ಅಧ್ಯಕ್ಷರಾದ ಕು॥ ರಾಘವೇಂದ್ರ ನಾಯ್ಕ ಕಾರ್ಯಕ್ರಮದ ಉದ್ದೇಶ & ವಿಶೇಷತೆ ಬಗ್ಗೆ ಮಾತನಾಡಿ ನಂತರ ಮುಂದಿನ ವರ್ಷದ ಸೇವೆಗೆ ಮಹಿಳಾ ತಂಡಕ್ಕೆ ಅಧಿಕಾರ ಹಸ್ತಾಂತರಿಸಿದರು.
ನಂತರ ಸಭಾಧ್ಯಕ್ಷರಾದ ಶ್ರೀ ಅರವಿಂದ ಕರ್ಕಿಕೊಡಿ ಮಾತನಾಡಿ ಇಂತಹ ಕಾರ್ಯಕ್ರಮದ ಪ್ರಾಮುಖ್ಯ & ಮಂದುವರೆಸಿಕೊಂಡು ಹೋಗುವ ಉದ್ದೇಶ ಮತ್ತು ಇದರ ಮಹತ್ವದ ಕುರಿತು ಮಾತನಾಡಿ ಸಂತಸ ವ್ಯಕ್ತಪಡಿಸಿದರು.
ಕಾರ್ಯಕ್ರಮದ ಮುಖ್ಯ ಸಂಯೋಜಕರು, ಉತ್ಸವ ಸಮಿತಿಯ ಅಧ್ಯಕ್ಷರಾದ
ಕು॥ ರಾಘವೇಂದ್ರ ನಾಯ್ಕ ( ಮಾದರಿ) ಸ್ವಾಗತಿಸಿದರೆ.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕ ದಿನೇಶ ನಾಯ್ಕ ನೇರವೆರಿಸಿದರು.
ಉತ್ಸವ ಸಮಿತಿಯ ಸದಸ್ಯರಾದ ಪ್ರವೀಣ ನಾಯ್ಕ, ಗೌರಿ ನಾಯ್ಕ, ಗೋವಿಂದ ಹರಿಕಾಂತ, ಭವಾನಿ ನಾಯ್ಕ , ಪ್ರದೀಪ್ ನಾಯ್ಕ , ಭಾರತಿ ನಾಯ್ಕ , ಶೇಖರ್ ಎಸ್ ನಾಯ್ಕ , ಸಿಂಧು ನಾಯ್ಕ, ಧನರಾಜ್ ನಾಯ್ಕ, ವನಿತಾ ನಾಯ್ಕ, ವೆಂಕಟೇಶ ನಾಯ್ಕ ಇನ್ನುಳಿದ ಎಲ್ಲಾ ಸದಸ್ಯರು, ಹಿತೈಷಿಗಳು ತಮ್ಮ ತಮ್ಮ ಸಹಾಯ ಸಹಕಾರ ನೀಡಿ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.
ಕಾರ್ಯಕ್ರಮ ದಲ್ಲಿ ಗುಡೇಅಂಗಡಿ ಕನ್ನಡ ಶಾಲೆ ಮಕ್ಕಳಿಗೆ ಮತ್ತು ಸ್ಥಳಿಯ ಅಂಗನವಾಡಿಯ ಎಲ್ಲಾ ಮಕ್ಕಳಿಗೂ ಶಿಕ್ಷಕರ ಮೂಲಕ ಪೆನ್ನು ಪಟ್ಟಿ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಸ್ಥಳಿಯರಾದ
ಶ್ರೀ ಆರ್.ವಿ.ಭಟ್-(ಹೊಲನಗದ್ದೆ) ಇವರಿಗೆ ” ಮಾದರಿ ವೈದ್ಯರು”,
ಶ್ರೀಮತಿ ಸೋಮಗೌಡ( ಮಾಸೂರು ಇವರಿಗೆ “ಮಾದರಿ ಸ್ವಾಭಿಮಾನಿ ಮಹಿಳೆ”,
ಶ್ರೀ ಗೋವಿಂದ ನಾಯ್ಕ(ಭಟ್ಕಳಮನೆ) ಇವರಿಗೆ “ಮಾದರಿ ನಾಟಿವೈದ್ಯ”,
ಶ್ರೀ ಪರಮೇಶ್ವರ ಪಟಗಾರ-ಗುಡೇಅಂಗಡಿ ಇವರಿಗೆ “ಮಾದರಿ ಕೃಷಿಕ” ಎಂಬ ಪ್ರಶಸ್ತಿ ಗೌರವಿಸಿದರೆ..
ಖ್ಯಾತ ಯಕ್ಷಗಾನ ಕಲಾವಿದರಾದ ,
ಶ್ರೀ ಕೃಷ್ಣಯಾಜಿ -ಬಳ್ಕೂರ,
ಶ್ರೀ ಈಶ್ವರ ನಾಯ್ಕ-ಮಂಕಿ
ಶ್ರೀ ಶಂಕರ ಹೆಗಡೆ ನೀಲಕೋಡ
ಶ್ರೀ ರಾಮಕೃಷ್ಣ ಹಿಲ್ಲೂರು
ಶ್ರೀ ರಾಮ ಹೆಗಡೆ-ಮೂರೂರು
ಮತ್ತು
ಇವರ ಜೋತೆ ಯಕ್ಷಲೋಕದಲ್ಲೆ ತಮ್ಮದಾದ ಸೇವೆಗೈದು ರಂಗಸ್ಥಳದಲ್ಲೇ ಅಮರರಾಗಿರು
ದಿ॥ ಚಂದ್ರಹಾಸ ಹೂಡಗೊಡ್ ರವರ ಸ್ಮರಣಾರ್ಥ ಅವರ ಕುಟುಂಬದವರಿಗೆ ” ಮಾದರಿ ಕಲಾಧರ” ಎಂಬ ಪ್ರಶಸ್ತಿ ನೀಡಿ ಗೌರವಿಸಿದರೆ,
ಕು॥ ಅಂಕಿತಾ ಹೊಸಕಟ್ಟಾ
ಕು॥ರಮ್ಯಾನಾಯ್ಕ(ಕಾನಸೂರ) ಇವರಿಗೆ ” ಮಾದರಿ ಕಲಾಧರೆ” ಎಂಬ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ವೇದಿಕೆಯ ಪೂರ್ವದಲ್ಲಿ ಚಿಕ್ಕ ಮಕ್ಕಳ ವಿವಿಧ ಹಾಡು ನೃತ್ಯ ಜನರ ಮನ ತಣಿಸಿದರೆ,
ಶ್ರೀ ಮಕರಜ್ಯೋತಿ ಯಕ್ಷಗಾನ ಮಂಡಳಿ ಗುಡೇಅಂಗಡಿ ( ಮಾದರಿರಸ್ತೆ) ಹಾಗೂ ಅತಿಥಿ ಕಲಾವಿದರ ಕೂಡುವಿಕೆಯಲ್ಲಿ “ಭಿಷ್ಮವಿಜಯ”ಯಕ್ಷಗಾನ ಎಲ್ಲಾ ಕಲಾಭಿಮಾನಗಳ ಮನದಾಳದಲ್ಲಿ ಶಾಶ್ವತವಾಗಿ ನೆಲೆಯೂರುವಂತೆ ಮಾಡಿದೆ.
ಭಾಗವತರು- ಶ್ರೀ ರಾಮಕೃಷ್ಣ ಹಿಲ್ಲೂರು
ಚಂಡೆ- ಶ್ರೀ ಗಜಾನನ ಕೊಣಾರೆ
ಮೃದಂಗ- ಮಂಜು ಕೆಂಚಮನೆ- ಗುಂಡಬಾಳ ಇವರ ಸಮ್ಮೇಳನದ ಸಾರತ್ಯದಲ್ಲಿ
ಮುಮ್ಭೆಳದಲ್ಲಿ
ಭಿಷ್ಮ- ಬಳ್ಕೊರ ಕೃಷ್ಣಯಾಜಿ
ಸಾಲ್ವ- ಈಶ್ವರ ನಾಯ್ಕ- ಮಂಕಿ
ಅಂಬೆ- ಶಂಕರ ಹೆಗಡೆ ನೀಲಕೋಡ,
ಪ್ರತಾಪ ಸೇನ- ರವೀಂದ್ರ ನಾಯ್ಕ (ಬಾಡ)
ಪರಷುರಾಮ- ಚಿದಾನಂದ ಭಂಡಾರಿ ಕಾಗಾಲ
ಹಾಸ್ಯ-ಪಾಂಡು ಪಟಗಾರ
ದೃಢಸೇನ- ಕ॥ ರಾಘವೇಂದ್ರ ನಾಯ್ಕ ( ಮಾದರಿ)
ಸುಕೇತು- ಕು॥ ಆತೇಶ ನಾಯ್ಕ ಹೊಲನಗದ್ದೆ ಪಾತ್ರವಹಿಸಿ ಯಕ್ಷಲೋಕವನ್ನೆ ಶೃಷ್ಠಿಸಿದರು.
ಒಟ್ಟಾರೆ ಈ “ಯುಗಾದಿ ಉತ್ಸವ ಇದು ಮಾದರಿ ಉತ್ಸವ” ಕಾರ್ಯಕ್ರಮ” ಅನೇಕಾನೇಕ ವಿಶೇಷತೆಯಿಂದ ಕೂಡಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ.