ದೂರದ ಅಮೇರಿಕಾದಲ್ಲಿದ್ದರೂ  ತಾನು ಹುಟ್ಟಿ ಬೆಳೆದ ನೆಲವನ್ನು ಮರೆಯದೇ ಇಲ್ಲಿನ ಆಗು ಹೋಗುಗಳನ್ನು ಗಮನಿಸುತ್ತಾ ಸ್ಪಂದಿಸುವ ಮನೋಭಾವವನ್ನು ಬೆಳೆಸಿಕೊಂಡಿರುವ ಸುಮಾ ಭಟ್ಟ  ಹೆಗಡೆಯ “ಆಯಿ ಪುಸ್ತಕ ಮನೆ” ಗೆ ಅತ್ಯುಪಯುಕ್ತ 30 ಪುಸ್ತಕಗಳನ್ನು ಕೊಡುಗೆಯಾಗಿ ನೀಡುವ ಮೂಲಕ ಗಮನಸೆಳೆದಿದ್ದಾರೆ.

ಇತ್ತೀಚೆಗೆ ಕುಮಟಾದ ಕಮಲಾ ಬಾಳಿಗಾ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲೆ ಡಾ.ಪ್ರೀತಿ ಭಂಡಾರಕರ ಆಯಿ ಪುಸ್ತಕ ಮನೆಗೆ 70 ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ವರದಿಯನ್ನು “ಸತ್ವಾಧಾರ ನ್ಯೂಸ್” ನಲ್ಲಿ ವೀಕ್ಷಿಸಿದ ಸುಮಾರವರು ತಕ್ಷಣ ರವೀಂದ್ರ ಭಟ್ಟ ಸೂರಿ ಯವರನ್ನು ಸಂಪರ್ಕಿಸಿ  ಪುಸ್ತಕ ಕೊಡುಗೆ ನೀಡುವ ತಮ್ಮ ಇಚ್ಚೆಯನ್ನು ವ್ಯಕ್ತ ಪಡಿಸಿದರು.

RELATED ARTICLES  "ಗೋಕರ್ಣ ಗೌರವ" 387 ನೇ ದಿನದ ಕಾರ್ಯಕ್ರಮದಲ್ಲಿ ಮ ನಿ ಪ್ರ ದೇವಾನಂದಸ್ವಾಮಿಗಳು

ಆವಶ್ಯಕ ಪುಸ್ತಕಗಳ ಮಾಹಿತಿ ಪಡೆದು ಅವನ್ನು ಅಮೇಜಾನ್ ಆನ್ ಲೈನ್ ಶೋಪಿಂಗ್ ನಲ್ಲಿ ಬುಕ್ ಮಾಡಿ 30 ಪುಸ್ತಕಗಳನ್ನು ಆಯಿ ಪುಸ್ತಕ ಮನೆಗೆ ತಲ್ಪಿಸಿರುತ್ತಾರೆ. ಇಷ್ಟೇ ಅಲ್ಲದೇ ತನ್ನ ಸ್ನೇಹಿತರಿಗೂ ಪ್ರೇರಣೆ ನೀಡಿ ಪುಸ್ತಕ ಕಳಿಸುವ ವ್ಯವಸ್ಥೆ ಮಾಡುವ ಭರವಸೆ ನೀಡಿರುತ್ತಾರೆ. ಸುಮಾ ಭಟ್ಟರವರ ಈ ಪುಸ್ತಕ ಪ್ರೀತಿಗೆ ಕೃತಜ್ಞತೆ ಸಲ್ಲಿಸಿರುವ ರವೀಂದ್ರ ಭಟ್ಟ ಸೂರಿಯವರು ಒಳ್ಳೆಯ ಕಾರ್ಯಕ್ಕೆ ಜನ ಬೆಂಬಲ ಸಿಗುತ್ತದೆ ಎಂಬುದಕ್ಕೆ ಇದು ಸಾಕ್ಷಿಯಾಗಿದೆ ಎಂದಿದ್ದಾರೆ.

RELATED ARTICLES  ಇಂದಿನ ಅಡಿಕೆ ಧಾರಣೆ ( ಕುಮಟಾ,ಹೊನ್ನಾವರ,ಸಿದ್ದಾಪುರ)