ಶ್ರೀ ಪದ್ಮರಾಜ ಬಿ.ಎಸ್.ಡಬ್ಲ್ಯೂ ಮತ್ತು ಬಿ.ಕಾಂ ಮಹಿಳಾ ಮಹಾವಿದ್ಯಾಲಯ ಹಾಗೂ ಶ್ರೀ ಪದ್ಮರಾಜ ಮಹಿಳಾ ಸ್ವತಂತ್ರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಸಹಯೋಗದಲ್ಲಿ ಬಾಬು ಜಯಜೀವನರಾಮ್ ಜಯಂತಿಯನ್ನು ಆಚರಿಸಲಾಯಿತು. ಶ್ರೀ ಪದ್ಮರಾಜ ಮಹಿಳಾ ಸ್ವತಂತ್ರ ಕಲಾ, ವಾಣ ಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದ ಪ್ರಾಚಾರ್ಯರಾದ ಶ್ರೀ ಎಮ್. ಎಸ್ ಹೈಯ್ಯಾಳಕರರವರು ಮಾತನಾಡಿ ಸಮಾಜದ ತುಳಿತಕ್ಕೆ ಒಳಗಾದವರ ಹಾಗೂ ಬಡವರ ಪರವಾಗಿ ಕೆಲಸ ಮಾಡಿದ ಡಾ. ಬಾಬು ಜಯಜೀವನರಾಮ್ ರವರು ದೇಶದ ಉಪಪ್ರಧಾನಿಗಳಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದ ಹಲವಾರು ಕಾರ್ಯಕ್ರಮಗಳು ಇಂದಿಗೂ ಜನಪರವಾಗಿದೆ. ದೇಶದಲ್ಲಿ ಆಹಾರದ ಕೊರತೆ ಉಂಟಾದ ಸಮಯದಲ್ಲಿ ಕೃಷಿ ಸಚಿವರಾಗಿದ್ದು ಇವರು ಜಾರಿಗೆ ತಂದ ಯೋಜನೆಗಳು ಹಸಿರು ಕ್ರಾಂತಿಗೆ ಕಾರಣವಾರವು. ಬಸವಣ್ಣ, ಬುದ್ಧರ ಅನುಯಾಯಿಯಾಗಿದ್ದ ಬಾಬುಜಿ ಸತತ 45 ವರ್ಷಗಳ ರಾಜಕೀಯದಲ್ಲಿ ಹಲವು ಇಲಾಖೆಗಳ ಮಂತ್ರಿಯಾಗಿ ಉಪಪ್ರಧಾನಿಯಾಗಿ ಸೇವೆ ಸಲ್ಲಿಸಿದರು. ಅವರು ದೇಶದ ಬೇಸಾಯದಲ್ಲಿ ವೈಜ್ಞಾನಿಕ ಬದಲಾವಣೆಗೆ ಆದ್ಯತೆ ನೀಡಿದ್ದರು ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದ ಉಪನ್ಯಾಸಕರುಗಳಾದ ಮಾಹಾಂತೇಶ ನೂಲಾನವರ, ಪ್ರೀತಿ ಎನ್. ಪಾಟೀಲ, ಶ್ವೇತಾ ಶೆಟ್ಟರ, ಮಹಾದೇವಿ ಕುಂಬಾರ, ಭುವನೇಶ್ವರಿ ಕೋಟಿ, ಲಕ್ಷ್ಮಿ ಮಾರ್ಸನಳ್ಳಿ, ಮಂಗಳಾ ಇಳಗೇರ, ಹೇಮಾ ಕಾಸರ, ಮಮತಾ ಹರನಾಳ, ನಾಗಯ್ಯ ಹಿರೇಮಠ, ಲಕ್ಷ್ಮಿ ಭಜಂತ್ರಿ ಹಾಗೂ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ವಿದ್ಯಾರ್ಥಿಯಾದ ರಿಜ್ವಾನಾ ತಾಬೋಳಿ ಸ್ವಾಗತಿಸಿದರು, ಭಾಗ್ಯಶ್ರೀ ಹಡಪದ ನಿರೂಪಿಸಿದರು ಹಾಗು ಬಶೀರಾ ಸಿಂದಗಿಕರ್ ವಂದಿಸಿದರು.
Home Uttara Kannada ಶ್ರೀ ಪದ್ಮರಾಜ ಬಿ.ಎಸ್.ಡಬ್ಲ್ಯೂ ಮತ್ತು ಬಿ.ಕಾಂ ಮಹಿಳಾ ಮಹಾವಿದ್ಯಾಲಯದಲ್ಲಿ ಬಾಬು ಜಯಜೀವನರಾಮ್ ಜಯಂತಿ ಆಚರಣೆ.