ಕಾರವಾರ: ತಾಲೂಕಿನ ದೇವಳಮಕ್ಕಿ ಗ್ರಾಮದ ಶ್ರೀ ದತ್ತಾತ್ರೇಯ ದೇವರ ವಾರ್ಷಿಕ ರಥೋತ್ಸವ (ತೇರು) ಏಪ್ರಿಲ್ 11 ಮತ್ತು 12 ರಂದು ಜರುಗಲಿದೆ.

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾಗಬೇಕೆಂದು ಗ್ರಾಮಸ್ಥರಾದ ಪ್ರಜ್ವಲ್ ಬಿ ಶೇಟ್ ತಿಳಿಸಿದ್ದಾರೆ.

ಗುರುವಾರದಂದು ರಥೋತ್ಸವ ಪ್ರಯುಕ್ತ ಬೆಳಿಗ್ಗೆ 8 ಗಂಟೆಗೆ ಭಕ್ತಾದಿಗಳಿಂದ ಭಿಕ್ಷಾಟನೆ, 11 ಗಂಟೆಗೆ ಪಂಚಾಮೃತ ಅಭಿಷೇಕ, 12 ಗಂಟೆಗೆ ಶ್ರೀ ದೇವರ ರಥಾರೋಹನ, 12.30 ಗಂಟೆಗೆ ಮಹಾಮಂಗಳಾರತಿ ಹಾಗೂ ಪ್ರಸಾದ ವಿತರಣೆ ನಡೆಯಲಿದೆ ತದನಂತರ ಮಧ್ಯಾಹ್ನ 1.30 ರಿಂದ 3 ರವರೆಗೆ ಶ್ರೀ ದೀಪಕ ಮಾಸೂರಕರ ದೇವಳಮಕ್ಕಿ ಪ್ರಾಯೋಜಕತ್ವದಲ್ಲಿ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ರಾತ್ರಿ 8 ರಿಂದ 10 ಗಂಟೆಯವರೆಗೆ ‘ರಥೋತ್ಸವ’ 10.15 ಕ್ಕೆ ದೇವರ ಮಹಾಪೂಜೆ ಪ್ರಸಾದ ವಿತರಣೆ. ಸಾಕಾರ ನಾಟಕ ಸಂಘ ಹಣಕೋಣಯವರಿಂದ ಸುನೀಲ ನಾಯ್ಕ ಹಣಕೋಣ ವಿರಚಿತ ರಾತ್ರಿ ಸರಿಯಾಗಿ 10.30 ಗಂಟೆಗೆ ‘ಸಕಾ ತುಕಾ ರಾಮ ರಾಮ’ ಎಂಬ ಕೊಂಕಣಿ ಕೌಟುಂಬಿಕ ಸಾಮಾಜಿಕ ನಾಟಕವನ್ನು ಆಡಿತೋರಿಸಲಿದ್ದಾರೆ.

RELATED ARTICLES  ಅಭಿಮಾನಿಗಳೆಂದರೆ ಬಾಯಾರಿಕೆ, ಹಸಿವು ನೀಗಿಸುವ ನೀರು-ಆಹಾರ : ವಿನಾಯಕ ಬ್ರಹ್ಮೂರು

ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ದೇವರ ಕೃಪೆಗೆ ಪಾತ್ರರಾಗಬೇಕೆಂದು ಗ್ರಾಮಸ್ಥರಾದ ಪ್ರಜ್ವಲ್ ಬಿ ಶೇಟ್ ತಿಳಿಸಿದ್ದಾರೆ.