ಕುಮಟಾ: ಇದು ಕೋಡ್ಕಣಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಬಸ್ ನಿಲ್ದಾಣ. ಇದನ್ನು ಸುಮಾರು 5 ವರ್ಷಗಳ ಹಿಂದೆ ಗ್ರಾಮ ಪಂಚಾಯತ ಸೆಕ್ರೆಟರಿಯವರ ಮುಂದಾಳತ್ವದಲ್ಲಿ ಕೆಡವಿ ಅಂಗಡಿ ಮುಂಗಟ್ಟು ನಿರ್ಮಾಣಕ್ಕೆ ಗ್ರಾಮ ಪಂಚಾಯತಿ ಸಭೆಯಲ್ಲಿ ತಿರ್ಮಾನಿಸಲಾಗಿತ್ತು.ಆದರೆ ಈ ವರೆಗೂ ನಿರ್ಮಾಣ ಹಂತದಲ್ಲಿದೆಯೇ ವಿನ: ಕಾಮಗಾರಿ ಪೂರ್ಣಗೊಂಡಿಲ್ಲ.
ಇದು ಸುಮಾರು 5 ವರ್ಷಗಳ ಹಿಂದಿನ ಕಥೆ.ಆದರೆ ಒಂದು ಅಂಗಡಿ ಕಟ್ಟಡ ನಿರ್ಮಾಣ ಕಾಮಗಾರಿಗೆ 5 ವರ್ಷಗಳ ಕಾಲ ಸಮಯ ತೆಗೆದುಕೊಳ್ಳವ ಪ್ರಪಂಚದ ಏಕೈಕ ಪಂಚಾಯತಿ ಕೋಡ್ಕಣಿ ಪಂಚಾಯತಿ ಎಂದರೆ ತಪ್ಪಾಗಲಾರದು. ಈ ನಿಟ್ಟಿನಲ್ಲಿ ಇಲ್ಲಿಯ ಅಧಿಕಾರಿ ವರ್ಗದವರಿಗೆ ವಿಶ್ವ ಮಟ್ಟದಲ್ಲಿ ಸನ್ಮಾನಿಸಬೇಕು.ಇದು ಇಲ್ಲಿನ ಸೆಕ್ರೆಟರಿ ತಿರುಮಲೇಶ ಡಿ. ಇವರ ಅವಧಿಯಲ್ಲಿ ಕಾಮಗಾರಿಗೆ ಚಾಲನೆ ಕೊಟ್ಟು ಇಲ್ಲಿಯವರೆಗೂ ಕಾಮಗಾರಿ ಮುಗಿಯದೆ,ಹಾಗೇಯೇ ನಿಂತಿದೆ.
ನಿಜವಾಗಿ ಇಂತಹ ಒಬ್ಬ ಅಧಿಕಾರಿ ಪ್ರತಿ ಗ್ರಾಮ ಪಂಚಾಯತಿಯಲ್ಲಿದ್ದರೆ ಅಲ್ಲಿ ಅಭಿವೃದ್ಧಿ ಯಾವ ಮಟ್ಟದಲ್ಲಿ ಆಗಬಹುದೆನ್ನುವುದು ಜನರೇ ಊಹಿಸಿಕೊಳ್ಳಬೇಕಿದೆ.
ಇದನ್ನು ಕಂಡಾಗ ಕೋಡ್ಕಣಿ ಜನಸಾಮಾನ್ಯರ ಮನದಲ್ಲಿ ಕೆಲವು ಪ್ರಶ್ನೆಗಳು ಉದ್ಬವಿಸುತ್ತದೆ.
ಅಂತಹ ಪ್ರಶ್ನೆಗಳಿಗೆ ಇಲ್ಲಿಯ ಅಧಿಕಾರಿಗಳೇ ಉತ್ತರಿಸಬೇಕಿದೆ.
ಈ ಕಾಮಗಾರಿ ಪೂರ್ತಿಗೊಳಿಸಲು ಸಾರ್ವಜನಿಕರ ನೆರವು ಬೇಕಾಗಿದೆಯೇ ಕೋಡ್ಕಣಿ ಪಂಚಾಯತಕ್ಕೆ…..?
ಐದುವರ್ಷದ ಹಿಂದೆ ಪ್ರಾರಂಭಗೊಂಡ ಕಾಮಗಾರಿ ಪೂರ್ಣಗೊಳ್ಳುವುದು ಯಾವಾಗ……?
ಜನರಿಗೆ ಅನುಕೂಲವಾಗಿದ್ದ ಸರಕಾರಿ ಸಾರ್ವಜನಿಕ ಬಸ್ ನಿಲ್ದಾಣ ಕೆಡವಿ,ಅಂಗಡಿ ಮಾಡೋ ಅನಿವಾರ್ಯತೆಯಾದರು ಏನಿತ್ತು…..?
2015-16 ನೇ ಸಾಲಿನಲ್ಲಿ ಪ್ರಾರಂಭಗೊಂಡ ಈ ಕಾಮಗಾರಿಗೆ ಅನುಮತಿ ನೀಡಿದ ತಿರುಮಲೇಶ ಡಿ ಅವರು ಈಗ ಸುಮ್ಮನಿರುವುದೇಕೆ…..?
ಪಂಚಾಯತದಲ್ಲಿ ಹಣವಿಲ್ಲದೇ ಇದ್ದರೆ ,ಈ ಕಾಮಗಾರಿಗೆ ಅನುಮತಿ ನೀಡಿರುವದೇಕೆ…..?
ಈ ಕಾಮಗಾರಿ ಪೂರ್ಣಗೊಳ್ಳಲು ಇನ್ನೆಷ್ಟು ವರ್ಷ ಬೇಕು…..?
ಸರಿಯಾಗಿದ್ದ ಬಸ್ ನಿಲ್ದಾಣವನ್ನು ಇವರ ಲಾಭಕ್ಕಾಗಿ ಕೆಡವಿಬಿಟ್ಟರೇ…..?
ಸರಿಯಾಗಿರುವ ಬಸ್ ನಿಲ್ದಾಣ ಕೆಡವಲು ಯಾರಿಂದ ಅನುಮತಿ ಪಡೆದಿದ್ದಾರೆ…..?
ಕೆ.ಎಸ್.ಆರ್.ಟಿ.ಸಿ ಅಧಿಕಾರಿಗಳ ಗಮನಕ್ಕೆ ಇದು ಬಂದಿದೆಯೇ……?
ಇಷ್ಟುವರ್ಷದಿಂದ ಕಾಮಗಾರಿ ನಿಂತಿದ್ದರು ಯಾರೊಬ್ಬ ಅಧಿಕಾರಿಗಳು ಪ್ರಶ್ನಿಸದಿರುವುದೇಕೆ…..?ರಾಜಕೀಯ ಒತ್ತಡವೇ……?
ಈ ಎಲ್ಲ ಪ್ರಶ್ನೆಗಳಿಗೆ ಅಧಿಕಾರಿಗಳಿಂದ ಉತ್ತರ ನಿರೀಕ್ಷಿಸಲಾಗಿದೆ.