ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಸಂನ್ಯಾಸ ದೀಕ್ಷೆಯ 26ನೆಯ ವರ್ಷಾಚರಣೆಯನ್ನು ಪ್ರತಿವರ್ಷದಂತೆ ಸಂಕಷ್ಟಕ್ಕೆ ಒಳಗಾದ ಹವ್ಯಕ ಕುಟುಂಬವನ್ನು ಶ್ರೀ ಮಠದ ಜೀವನದಾನ ಟ್ರಸ್ಟ್ ಮೂಲಕ ದತ್ತು ಸ್ವೀಕರಿಸುವ ವಿಧಾನದಲ್ಲಿ ಜೀವನದಾನವಾಗಿ ಇಂದು ಆಚರಿಸಲಾಯಿತು.
ಆರ್ಥಿಕವಾಗಿ ಸಂಕಷ್ಟದಲ್ಲಿರುವ ಹೊನ್ನಾವರ ಕಡ್ಲೆಯ ಕಮಲಾ ಗೋವಿಂದ ಹೆಗಡೆಯವರಿಗೆ ಜೀವನ ದಾನ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರತಿಯೊಬ್ಬರ ಹುಟ್ಟಿನ ದಿನ ಸಮಾಜದ ಆರ್ತರ ಬದುಕಿಗೆ ಆತ್ಮಸ್ಥೈರ್ಯದ ದಢತೆ ನೀಡುವ ಸಂಕಲ್ಪ ದಿನವಾಗಬೇಕು ಮತ್ತೊಬ್ಬರ ಜೀವನದಲ್ಲಿ ದೀಪ ಬೆಳಗಿಸಿ ಬದುಕು ಕಟ್ಟಿ ಕೊಡುವ ಪುಣ್ಯ ಕಾರ್ಯ ವಾಗಬೇಕು ಎಂದು ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.
ಬೇರೆಯವರ ಜೀವನ ಆರಿ ಹೋಗುವ ಮುನ್ನ ನಾವು ದೀಪ ಹೊತ್ತಿಸಿ ಸಂಭ್ರಮಪಟ್ಟರೆ ನಮ್ಮ ಹುಟ್ಟ ಹಬ್ಬ ಸಾರ್ಥಕ ಕ್ಷಣ ಅನುಭವಿಸಿದಂತೆ. ಬದುಕನ್ನು ಪಡೆದಿರುವ ದಿನವನ್ನು ಇನ್ನೊಬ್ಬರಿಗೆ ಬದುಕು ಕೊಟ್ಟು ಆಚರಿಸಬೇಕು ಎಂದ ಅವರು ಅದಕ್ಕಾಗಿ ತಮ್ಮ ಸಂನ್ಯಾಸ ಗ್ರಹಣ ದಿನವನ್ನು ಆರ್ತರ ಕಣ್ಣೀರು ಒರೆಸುವ ದಿನವನ್ನಾಗಿ ಸ್ವೀಕರಿಸಲಾಗಿದೆ. ಇದು ಪ್ರತಿಯೊಬ್ಬರಿಗೂ ಪ್ರೇರಣೆಯಾಗಬೇಕು ಲೋಕಕ್ಕೆ ಮಾದರಿಯಾಗಬೇಕು ಎಂದರು.
ವೇದಿಕೆಯಲ್ಲಿ ಮಠದ ಮುಖ್ಯಕಾರ್ಯ ನಿರ್ವಹಣಾಧಿಕಾರಿ ಕೆ ಜಿ ಭಟ್ಟ, ತೂಗು ಸೇತುವೆಯ ನಿರ್ಮಾತೃ ಡಾ. ಗಿರೀಶ್ ಭಾರದ್ವಾಜ್ ಇದ್ದರು