ಮೇಷ:- ವಹಿಸಿಕೊಂಡಿರುವ ಮಂಗಳ ಕಾರ್ಯದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಿರಿ. ಇದರಿಂದ ನಿಮಗೆ ತೃಪ್ತಿಯಾಗುವುದು. ಜೀವನದಲ್ಲಿ ಎಂದಿಗಿಂತ ಹೆಚ್ಚು ಕ್ರಿಯಾಶೀಲರಾಗುವಿರಿ. ಮಡದಿಯ ಆರೋಗ್ಯದ ಕಡೆ ಗಮನವಿರಲಿ. 

ವೃಷಭ:- ಮತ್ತಾರನ್ನೋ ಸಂತೃಪ್ತಿಗೊಳಿಸಲು ಹೋಗಿ ನೀವು ಸಮಸ್ಯೆಗೆ ಸಿಲುಕದಿರಿ. ಕೆಲಸದ ಒತ್ತಡ ತೀವ್ರವಾಗುವುದರಿಂದ ಅಪಾರ ತಾಳ್ಮೆ ಅವಶ್ಯಕ ಎಂದು ಮರೆಯದಿರಿ. ಮತ್ತೊಬ್ಬರ ಮೇಲೆ ಸಂಶಯ ಪಡುವುದನ್ನು ಬಿಡಿ. 

ಮಿಥುನ:- ನಿಮ್ಮ ಆದಾಯದ ಮೂಲ ಹೆಚ್ಚಲಿದೆ. ಬಂಧುಗಳಿಗೆ ನಿಮ್ಮ ಕೈಲಾದ ಸಹಾಯ ಮಾಡಲು ಪ್ರಯತ್ನಿಸುವಿರಿ. ಆದರೆ ಎಲ್ಲಾ ಸಮಸ್ಯೆಗಳು ಒಮ್ಮೆಲೆ ಪರಿಹಾರವಾಗುವುದು ಕಷ್ಟ. ಆರೋಗ್ಯದ ವಿಚಾರದಲ್ಲಿ ತೊಂದರೆಯಿಲ್ಲ. 

ಕಟಕ:- ವಿದ್ಯಾವಂತ ನಿರುದ್ಯೋಗಿಗಳಿಗೆ ಅವಕಾಶಗಳ ಹೆಬ್ಬಾಗಿಲು ತೆರೆಯಲಿದೆ. ಸಮಾಜದ ಮುಖಂಡರಿಂದ ನೇತೃತ್ವ ವಹಿಸಿಕೊಳ್ಳಲು ಒತ್ತಡ ಬರಲಿದೆ. ಯೋಗ್ಯತೆ ಮೀರಿ ಏನನ್ನೂ ಮಾಡಲು ಹೋಗಬೇಡಿ. ಅಗತ್ಯ ಬಿದ್ದರೆ ಸ್ನೇಹಿತರ ಸಹಕಾರ ಪಡೆಯಿರಿ. 

ಸಿಂಹ:- ಮಕ್ಕಳ ಪ್ರಗತಿ ಸಂತಸ ನೀಡುವುದು. ಮಗನ ಮದುವೆ ವಿಷಯವಾಗಿ ಉತ್ತಮ ಸಂಬಂಧವೊಂದು ಬರುವುದು. ಸಂಬಂಧ ಉತ್ತಮವಾಗಿದ್ದರೆ ಒಪ್ಪಿಗೆ ನೀಡಿ. ನಿಮ್ಮ ಜಾಣ್ಮೆ ಮತ್ತು ತಾಳ್ಮೆಯನ್ನು ಹಿರಿಯರ ಪ್ರಶಂಶಿಸುವರು. 

ಕನ್ಯಾ:- ಅನುಭವಿ ಪಾಲುದಾರರನ್ನು ವ್ಯಾಪಾರದಲ್ಲಿ ಸೇರಿಸಿಕೊಳ್ಳುವುದರಿಂದ ನಿಮಗೆ ಲಾಭವಾಗುವುದು. ಮಗನ ಉನ್ನತ ಅಧ್ಯಯನಕ್ಕೆ ಆರ್ಥಿಕ ಸಹಾಯ ದೊರೆಯಲಿದೆ. ಹಮ್ಮಿಕೊಂಡ ಕೆಲಸಗಳು ಸುಗಮವಾಗಿ ಮುಕ್ತಾಯ ಹಂತ ತಲುಪುವವು. 

ತುಲಾ:- ಹೊಸ ಹೊಸ ಯೋಜನೆಗಳಿಗೆ ಪ್ರೋತ್ಸಾಹ ಸಿಗಲಿದೆ. ನಿಮ್ಮ ಕೋರಿಕೆಗಳು ಕ್ರಮೇಣ ಒಂದೊಂದಾಗಿ ನೆರವೇರುವುದು. ಪತ್ನಿ ವರ್ಗದವರ ಮನೆಗಳಿಗೆ ಭೇಟಿ ನೀಡುವಿರಿ. ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿ. 

ವೃಶ್ಚಿಕ:- ಅಪರಿಚಿತ ವ್ಯಕ್ತಿಯ ಸಲಹೆಯಿಂದಾಗಿ ವ್ಯವಹಾರಗಳಲ್ಲಿ ಸಾಕಷ್ಟು ತೊಂದರೆ ಅನುಭವಿಸುವಿರಿ. ಹಾಗಾಗಿ ಅಪರಿಚಿತ ವ್ಯಕ್ತಿಗಳೊಂದಿಗೆ ವ್ಯವಹಾರ ಬೇಡ. ಆರ್ಥಿಕ ಮುಗ್ಗಟ್ಟು ಕಂಡು ಬರುವುದು. 

ಧನುಸ್ಸು:- ಅವಸರದಲ್ಲಿ ಹಮ್ಮಿಕೊಂಡ ಕಾರ್ಯಗಳು ಅರ್ಧಕ್ಕೆ ನಿಲ್ಲುವ ಸಾಧ್ಯತೆಯಿದೆ. ಆರ್ಥಿಕ ಭರವಸೆ ಕೊಟ್ಟವರು ಹಣ ಸಹಾಯ ಮಾಡಲು ಹಿಂಜರಿಯುವರು. ವ್ಯಾಪಾರದ ದೃಷ್ಟಿಯಿಂದ ಹಳೆ ವಾಹನ ಖರೀದಿ ಸೂಕ್ತವಲ್ಲ. 

ಮಕರ:- ಮಂಗಳ ಕಾರ್ಯಗಳಿಗೆ ಪೂರ್ವ ಸಿದ್ಧತೆ ಮಾಡಿಕೊಳ್ಳುವಿರಿ. ಸಾರ್ವಜನಿಕರ ಸೇವೆ ಸಂತಸ ತರಲಿದೆ. ಹಣಕಾಸಿನ ವಿಷಯದಲ್ಲಿ ಎಚ್ಚರಿಕೆ ಅಗತ್ಯ. ಪ್ರಯಾಣ ಕಾಲದಲ್ಲಿಯೂ ಜಾಗ್ರತೆ ವಹಿಸಿ. ಆಂಜನೇಯ ಸ್ತೋತ್ರ ಪಠಿಸಿ. 

ಕುಂಭ:- ವಿವಾಹಾಕಾಂಕ್ಷಿಗಳಿಗೆ ಕಂಕಣಬಲ ಕೂಡಿ ಬರುವುದು. ಗಣ್ಯರೊಂದಿಗೆ ದೊಡ್ಡ ದೊಡ್ಡ ಸಮಾರಂಭದಲ್ಲಿ ವೇದಿಕೆ ಹಂಚಿಕೊಳ್ಳುವಿರಿ. ಮಕ್ಕಳ ಮೇಲಿಟ್ಟ ಅತಿ ಭರವಸೆ ಹುಸಿಯಾಗುವುದು. ಕುಲದೇವರನ್ನು ಸ್ಮರಿಸಿ. 

ಮೀನ:- ಶಾರೀರಿಕ ಬಳಲಿಕೆ ಕಂಡು ಬಂದರೂ ಉತ್ಸಾಹ ಕುಂದದು. ಆರೋಗ್ಯದ ಕಡೆ ಲಕ್ಷ್ಯ ನೀಡಿ. ವಾಹನಗಳನ್ನು ಚಲಾಯಿಸುವಾಗ ಎಚ್ಚರದಿಂದಿರಿ. ಲೇವಾದೇವಿ ವ್ಯವಹಾರ ಮುಂದುವರೆಸಲು ಸಕಾಲವಿದು.