ಕಾರವಾರ: ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆ ಕಾವು ಎರುತ್ತಿದೆ. ಚುನಾವಣೆಗೆ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಸ್ಪರ್ಧೆಯಲ್ಲಿ ಇರುವವರೂ ಪ್ರಚಾರ ಕಾರ್ಯದಲ್ಲಿ ಫುಲ್ ಬ್ಯೂಸಿ ಇದ್ದಾರೆ. ಹಾಗಾದರೆ ಯಾರೆಲ್ಲಾ ಸ್ಪರ್ಧೆಯಲ್ಲಿ ಇದ್ದಾರೆ ಎಂಬುದರ ಡಿಟೇಲ್ಸ ಇಲ್ಲಿದೆ ನೋಡಿ.

ಜಿಲ್ಲೆಯಲ್ಲಿ ಲೋಕಸಭೆ ಚುನಾವಣೆಗೆ ಒಟ್ಟೂ 17 ಜನರು 27 ನಾಮಪತ್ರಗಳನ್ನು ಸಲ್ಲಿಸಿದ್ದರು. ಇದರಲ್ಲಿ ಇಬ್ಬರ ನಾಮಪತ್ರ ತಿರಸ್ಕೃತಗೊಂಡು, ಇಬ್ಬರು ನಾಮಪತ್ರ ಹಿಂತೆಗೆದುಕೊಂಡಿದ್ದರಿಂದ ಒಟ್ಟೂ 13 ಜನ ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

RELATED ARTICLES  ಹಿರೇಗುತ್ತಿ ಹೈಸ್ಕೂಲಿನಲ್ಲಿ ವಿದ್ಯಾರ್ಥಿಗಳಿಗೆ ವಿನೂತನ ನೇಚರ್ ಕ್ಯಾಂಪ್

ಬಿಜೆಪಿಯಿಂದ ಅನಂತಕುಮಾರ್ ಹೆಗಡೆ(ಕಮಲ), ಜೆಡಿಎಸ್ ನಿಂದ ಆನಂದ ಅಸ್ನೋಟಿಕರ್( ತೆನೆಹೊತ್ತ ರೈತ ಮಹಿಳೆ), ಬಿಎಸ್ಪಿಯಿಂದ ಸುಧಾಕರ್ ಬೊಗಳೇರಕರ್ (ಆನೆ), ಆರ್ಎಸ್ಪಿ ಪಕ್ಷದಿಂದ ನಾಗರಾಜ್ ನಾಯ್ಕ (ಟ್ರ್ಯಾಕ್ಟರ್ ಓಡಿಸುತ್ತಿರುವ ರೈತ), ಆರ್ ಜೆಪಿ ನಾಗರಾಜ್ ಶೇಟ್ ( ಹೂಕೋಸು), ಬಿಬಿಪಿ ಮಂಜುನಾಥ ಸದಾಶಿವ( ಬ್ರಶ್), ಯುಪಿಪಿನಿಂದ ಸುನೀಲ್ ಪವಾರ್ ಆಟೋ ರಿಕ್ಷಾ ಚಿನ್ಹೆ ಅಡಿಯಲ್ಲಿ ಅನಿತಾ ಶೇಟ್( ಹಡಗು), ಕುಂದಾಬಾಯಿ ಪರುಳೇಕರ್(ಸೀಟಿ) ಚಿದಾನಂದ ಹರಿಜ್(ಟಿಲ್ಲರ್), ನಾಗರಾಜ್ ಶಿರಾಲಿ (ವಜ್ರ), ಬಾಲಕೃಷ್ಣ ಪಾಟೀಲ್(ತೆಂಗಿನ ತೋಟ), ಮೊಹಮ್ಮದ್ ಬಬ್ರೂರ್ ಖತೀಬ್ ಗ್ಯಾಸ್ ಸಿಲಿಂಡರ್ ಚಿನ್ಹೆ ಅಡಿಯಲ್ಲಿ ಸ್ಪರ್ಧೆಗಿಳಿದಿದ್ದಾರೆ.

RELATED ARTICLES  ಬರ್ಗಿಯಲ್ಲಿ ತೆರೆದುಕೊಂಡ ಶ್ರೀಮಹಾಲಿಂಗೇಶ್ವರ ವಿದ್ಯಾಪೀಠ

ಇವರೆಲ್ಲರ ಭವಿಷ್ಯ ಚುನಾವಣಾ ನಂತರದಲ್ಲಿ ಬಹಿರಂಗವಾಗಲಿದೆಯಾದರೂ ಈಗ ಚುನಾವಣಾ ಕಾವು ಬಹು ಜೋರಾಗಿ ಸಾಗಿದೆ.