ಕಾರವಾರ: ‘ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆಯಲ್ಲಿ ಜಿಲ್ಲೆಗೆ ಅನುಕೂಲವಾಗುವಂತೆ ಕರಾವಳಿಯ ರಕ್ಷಣೆಗೂ ಹೆಚ್ಚಿನ ಆದ್ಯತೆ ನೀಡಲಾಗಿದೆ’ ಎಂದು ಉತ್ತರ ಕನ್ನಡ ಲೋಕಸಭಾ ಕ್ಷೇತ್ರದ ಬಿಜೆಪಿಯ ಮಾಧ್ಯಮ ಸಂಚಾಲಕ ನಾಗರಾಜ ನಾಯಕ ಹೇಳಿದರು. 

‘ದೇಶದ ಸಮಗ್ರ ಅಭಿವೃದ್ಧಿ ಹಾಗೂ ರಾಷ್ಟ್ರೀಯ ಭದ್ರತೆಯನ್ನು ಪ್ರಮುಖ ವಿಷಯವನ್ನಾಗಿಸಿಕೊಂಡು ಈ ಪ್ರಣಾಳಿಕೆಯನ್ನು ಸಿದ್ಧಪಡಿಸಲಾಗಿದೆ. ಕೆಲವಷ್ಟು ಕಾನೂನು ತೊಡಕುಗಳಿಂದ ರಾಮ ಮಂದಿರ ನಿರ್ಮಾಣ ಮುಂದೂಡಲ್ಪಟ್ಟಿತು. ಹೀಗಾಗಿ, ಈ ಬಾರಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ಬಂದರೆ ರಾಮ ಮಂದಿರ ನಿರ್ಮಾಣ ಮಾಡಿಯೇ ಸಿದ್ಧ. ಈ ಬಗ್ಗೆಯೂ ಪ್ರಣಾಳಿಕೆಯಲ್ಲಿ ಅಂಶವನ್ನು ಸೇರಿಸಲಾಗಿದೆ’ ಎಂದರು.ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿರುವ ವಿಶೇಷ ಸ್ಥಾನಮಾನದ ರದ್ದತಿ, ಸಂವಿಧಾನದ 35(A) ವಿಧಿಯನ್ನು ತುರ್ತಾಗಿ ರದ್ದುಗೊಳಿಸುವ ಭರವಸೆಯನ್ನೂ ಪ್ರಣಾಳಿಕೆಯಲ್ಲಿ ನೀಡಿದ್ದೇವೆ. ಇವೆಲ್ಲವೂ ರಾಷ್ಟ್ರದ ವಿಕಾಸಕ್ಕಾಗಿ. ಈ ಬಾರಿಯೂ ಬಿಜೆಪಿ ಅಧಿಕಾರಕ್ಕೆ ಬರಬೇಕಿದೆ’ ಎಂದು ಹೇಳಿದರು.

RELATED ARTICLES  ದಿ ತೋಟಗಾರ್ಸ್ ಕೋ-ಆಪರೇಟಿವ್ ಸೇಲ್ ಸೊಸೈಟಿಯ ಬೃಹತ್ ಗಾತ್ರದ ಗೋದಾಮು ಉದ್ಘಾಟನೆ.

‘ಸಾಗರ ಮಾಲಾ ಯೋಜನೆಯ ತುರ್ತು ಅನುಷ್ಠಾನ, ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ, ರೈಲ್ವೆ ಹಳಿಗಳನ್ನು ದ್ವಿಪಥ ಮಾಡುವುದು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಪಿಂಚಣಿ, ರೈತರ ಆದಾಯ ದ್ವಿಗುಣಗೊಳಿಸಲು ಕ್ರಮ, ಭಯೋತ್ಪಾದನೆ ನಿರ್ಮೂಲನೆ, ಎಡಪಂಥೀಯ ಉಗ್ರವಾದದ ನಿರ್ಮೂಲನೆ, ಕ್ರೆಡಿಟ್ ಕಾರ್ಡ್ ಮೂಲಕ ಶೂನ್ಯ ಬಡ್ಡಿ ದರದಲ್ಲಿ ರೈತರಿಗೆ ₹1 ಲಕ್ಷದ ವರೆಗೆ ಸಾಲ, ಗ್ರಾಮೀಣ ವಿಕಾಸಕ್ಕೆ ₹ 25 ಲಕ್ಷ ಕೋಟಿ ಮೀಸಲು ಹಾಗೂ ಎಲ್ಲ ರೈತರಿಗೂ ವಾರ್ಷಿಕ ₹ 6 ಸಾವಿರವನ್ನು ‘ಕಿಸಾನ್ ಸಮ್ಮಾನ್’ ಯೋಜನೆಯ ಮೂಲಕ ಸಹಾಯಧನ ನೀಡಲಾಗುವುದು ಎಂದು ಪ್ರಣಾಳಿಕೆಯಲ್ಲಿ ಭರವಸೆ ನೀಡಿದ್ದೇವೆ’ ಎಂದು ತಿಳಿಸಿದರು.

RELATED ARTICLES  ಯಶಸ್ವಿಯಾಗಿ ಸಂಪನ್ನಗೊಂಡ ಗ್ರಾಮ ಒಕ್ಕಲಿಗರ ಕ್ರಿಕೆಟ್ ಪಂದ್ಯಾವಳಿ

2014ರ ಪ್ರಣಾಳಿಕೆಯ ಅಂಶಗಳನ್ನೇ ಈವರೆಗೂ ಪೂರ್ಣಗೊಳಿಸಿಲ್ಲವೆಂಬ ಆರೋಪವಿದೆ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ‘ಇದಕ್ಕೆ ಕಾರಣ ನಾವಲ್ಲ. ಬಹುಪಾಲು ಪೂರ್ಣಗೊಂಡಿದ್ದು, ಕೆಲವು ಭರವಸೆಗಳು ಕೆಲವಷ್ಟು ಸಮಸ್ಯೆಗಳಿಂದ ಸಂಪೂರ್ಣವಾಗಿ ಪೂರ್ಣಗೊಳಿಸಲಾಗಲಿಲ್ಲ. ಆದರೆ, ಈ ಬಾರಿ ಮತ್ತೆ ಅಧಿಕಾರಕ್ಕೆ ಬಂದರೆ ಅದನ್ನು ಪೂರ್ಣಗೊಳಿಸುವ ಜವಾಬ್ದಾರಿ ಬಿಜೆಪಿಯದ್ದು’ ಎಂದರು.