ಶ್ರೀರಾಮಚಂದ್ರಾಪುರಮಠದ  ಬೆಂಗಳೂರು ಶಾಖೆ ಶ್ರೀರಾಮಾಶ್ರಮ ಗಿರಿನಗರದಲ್ಲಿ, ಸೀತಾ ಲಕ್ಷ್ಮಣ ಹನುಮತ್ ಸಮೇತ ಶ್ರೀರಾಮನ ಸನ್ನಿಧಿಯಲ್ಲಿ ಶ್ರೀರಾಮನವಮೀ ಮಹೋತ್ಸವವು ದಿನಾಂಕ 12.04.2019 ಶುಕ್ರವಾರದಿಂದ ಆರಂಭಗೊಳ್ಳಲಿದೆ.

ಪರಮಪೂಜ್ಯ ಶ್ರೀಮಜ್ಜಗದ್ಗುರುಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತಿಮಹಾಸ್ವಾಮಿಗಳ ದಿವ್ಯ ಮಾರ್ಗದರ್ಶನದಡಿಯಲ್ಲಿ ವಿವಿಧ ಧಾರ್ಮಿಕ ಮತ್ತು ಸಾಂಸ್ಕ್ರತಿಕ ಕಾರ್ಯಕ್ರಮಗಳು ಜರುಗಲಿದೆ.

ಶ್ರೀರಾಮನವಮಿಯಂದು, ಬೆಳಿಗ್ಗೆ 9 ರಿಂದ ಲೋಕಕಲ್ಯಾಣಕ್ಕಾಗಿ ಶ್ರೀರಾಮತಾರಕ ಹವನವನ್ನು ಆಯೋಜಿಸಲಾಗಿದೆ ಮತ್ತು 10 ಗಂಟೆಯಿಂದ ಶ್ರೀರಾಮನ ಕುರಿತಾದ ಭಜನಾ ಸಂಕೀರ್ತನ ನಡೆಯಲಿದೆ. ಅಲ್ಲದೆ, ಶ್ರೀರಾಮನ ಜೀವನ ಚರಿತ್ರೆಯನ್ನಾಧರಿಸಿದ, “ಗೀತಾರಾಮಾಯಣ” ಶನಿವಾರ (13.04.2019 ) ಸಂಜೆ 5 ರಿಂದ ಸಂಪನ್ನವಾಗಲಿದೆ. “ಗಾಯನ, ಚಿತ್ರಣ, ವಾದನ, ವ್ಯಾಖ್ಯಾನಗಳ ಸಮ್ಮಿಲನವಾದ ಗೀತಾರಾಮಾಯಣ ಅತ್ಯಂತ ವಿಶಿಷ್ಟವಾಗಿ ಮೂಡಿಬರಲಿದೆ”.

RELATED ARTICLES  ನಿಮ್ಮ ಜನ್ಮರಾಶಿಗೆ ಅನುಗುಣವಾಗಿ (ದಿನಾಂಕ 25-12-2018) ಇಂದಿನ ದಿನ ಫಲಾನುಫಲಗಳು ಹೇಗಿರಲಿದೆ ಗೊತ್ತೆ? .

ಶ್ರೀರಾಮನವಮೀ ಉತ್ಸವ ವದ ಅಂಗವಾಗಿ ನಡೆಯುವ ಕಾರ್ಯಕ್ರಮಗಳ ವಿವರ ಇಂತಿದೆ :

ಶುಕ್ರವಾರ, 12.04.2019 ರ ಸಂಜೆ  6 ರಿಂದ ಶ್ರೀ ಮಹಾಗಣಪತಿ ಯಕ್ಷಾಗಾನ ಮಂಡಳಿ ಹಣಜಿಬೈಲ್ ಇವರಿಂದ ಯಕ್ಷಗಾನ ಕನಕಾಂಗಿ ಕಲ್ಯಾಣ ನಡೆಯಲಿದೆ.

RELATED ARTICLES  ಭ್ರಷ್ಟಾಚಾರ ವಿರುದ್ಧದ ಹೋರಾಟದಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳುವುದಿಲ್ಲ : ಮೋದಿ

ಶನಿವಾರ –  13.04.2019:

ಬೆಳಿಗ್ಗೆ 9ರಿಂದ ಶ್ರೀರಾಮತಾರಕ ಹವನ ಆರಂಭ

ಬೆಳಿಗ್ಗೆ 10ರಿಂದ  ಭಜನ ಸಂಕೀರ್ತನ 

11.30 ರಿಂದ ಕುಂಕುಮಾರ್ಚನೆ

ಮಧ್ಯಾಹ್ನ 12.00 ರಿಂದ  ಮಹಾಮಂಗಳಾರತಿ

ಸಂಜೆ 5. 00ರಿಂದ  ಗೀತಾರಾಮಾಯಣ (ಗಾಯನ, ಚಿತ್ರಣ, ವಾದನ, ವ್ಯಾಖ್ಯಾನಗಳ ಸಮ್ಮಿಲನ)

ಸಂಜೆ  7 ರಿಂದ ಅಷ್ಟಾವಧಾನ ಸಹಿತ ಮಹಾಮಂಗಳಾರತಿ

ಸರ್ವರಿಗೂ ಪಾಲ್ಗೊಂಡು ಶ್ರೀರಾಮನ ಕಾರುಣ್ಯಕ್ಕೆ ಪಾತ್ರರಾಗಬೇಕಾಗಿ ಶಾಖಾ ಮಠದ ಸೇವಾ ಸಮಿತಿ ಕೋರಿದೆ.