ಶಿರಸಿ: ಆತ್ಮಹತ್ಯೆ ಮಾಡಿಕೊಳ್ಳೋಕೆ ಎಂತೆಂಥ ಕಾರಣ ಇರುತ್ತಪ್ಪಾ ಅಂತಾ ನೋಡಿದ್ರೆ ಇಲ್ಲೊಂದು ವಿಶೇಷ ಪ್ರಕರಣ ಬೆಳಕಿಗೆ ಬಂದಿದೆ.
ವ್ಯಕ್ತಿಯೊರ್ವ ಕುಡಿದ ಮತ್ತಿನಲ್ಲಿ ತಾಯಿಯೊಂದಿಗೆ ವಾದ ಮಾಡಿ ನಂತರ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಗಿಡಮಾವಿನಕಟ್ಟೆಯಲ್ಲಿ ನಡೆದಿದೆ.
ಕೆರಿಯಾ ಚನ್ನಯ್ಯ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯಾಗಿದ್ದು, ತಾಯಿಯೊಂದಿಗೆ ವಾದ ಮಾಡಿ ತಾನು ಬಾವಿಗೆ ಹಾರಿತ್ತೇನೆ ಎಂದು ಹೇಳಿ ಆತ್ಮಹತ್ಯೆ ಮಾಡಿಕೊಂಡಿದ್ದಾಗಿ ಪೋಲೀಸರು ತಿಳಿಸಿದ್ದಾರೆ.
ಈ ಕುರಿತಾಗಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.