ಹಳಿಯಾಳ: ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದ ಕೆನರಾಬ್ಯಾಂಕ ದೇಶಪಾಂಡೆ ಆರ್ ಸೆಟ್ ಸಂಸ್ಥೆಯಲ್ಲಿ ಬರುವ ಏಪ್ರಿಲ್ ತಿಂಗಳಲ್ಲಿ ಆರಂಭವಾಗುವ ಹಪ್ಪಳ, ಉಪ್ಪಿನಕಾಯಿ ಹಾಗೂ ಮಸಾಲಾ ಸಾಂಬಾರ ಪದಾರ್ಥಗಳ ತಯಾರಿಕೆ ತರಬೇತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಅಹ್ವಾನಿಸಲಾಗಿದೆ.
ಈ ತರಬೇತಿಯು ಊಟ-ವಸತಿ ಸಹಿತ ಉಚಿತವಾಗಿದೆ. ಆಸಕ್ತಿ ಇರುವ 18 ರಿಂದ 45 ವರ್ಷವಯೋಮಿತಿಯ, ಯುವಕರು ಅರ್ಜಿಯನ್ನು ಹಾಕಬಹುದು.
ತರಬೇತಿ ಪಡೆಯಲಿಚ್ಚಿಸುವವರು ಕೆನರಾ ಬ್ಯಾಂಕ ದೇಶಪಾಂಡೆ ಆರ್ ಸೆಟ್ ಸಂಸ್ಥೆ, ಉದ್ಯೋಗ ವಿದ್ಯಾ ನಗರ, ದಾಂಡೇಲಿ ರಸ್ತೆ, ಹಳಿಯಾಳ ಈ ವಿಳಾಸಕ್ಕೆ ಕೂಡಲೇ ಸಂಪರ್ಕಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಸಂಸ್ಥೆಯ ದೂರವಾಣಿ ಸಂಖೈ 9483485489, 9482188780, 08284-220807 ಸಂಪರ್ಕಿಸಲು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.