ಅಂಕೋಲಾ: ತಾಲ್ಲೂಕಿನ ಮೊಗಟಾ ಹಾಗೂ ವಂದಿಗೆ ಪಂಚಾಯತಿಯಲ್ಲಿ ಮುಂಬರುವ ಲೋಕಸಭಾ ಚುನಾವಣಾ ಪ್ರಯುಕ್ತ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾದ ಶ್ರೀ ಅನಂತಕುಮಾರ ಹೆಗಡೆಯವರ ಪರವಾಗಿ ಮತಯಾಚನೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಮಾನ್ಯ ಶಾಸಕರಾದ ಶ್ರೀಮತಿ ರೂಪಾಲಿ ಎಸ್. ನಾಯ್ಕ ಮಾತನಾಡಿ ಮೋದಿರವರು ಜಗತ್ತಿನ‌ ಎಲ್ಲ ರಾಷ್ಟ್ರಗಳಿಗೂ ಅತಿಥಿಯಾಗಿ ಹೋಗಿಬರುತ್ತಾರೆ. ಅವರು ಹೋದಲ್ಲೆಲ್ಲ ರಾಜ ಮರ್ಯಾದೆ ಸಿಗುತ್ತಿದೆ. ಇದು ಅವರ ಗತ್ತು ಗಾಂಭೀರ್ಯ ನಮ್ಮ‌ ಹಿಂದಿನ ಪ್ರಧಾನಿ ವಿದೇಶಗಳಿಗೆ ಹೋದರೆ ಅಷ್ಟು ಪ್ರಮಾಣದ ಗೌರವವನ್ನು ಯಾವ ದೇಶವೂ ನೀಡುತ್ತಿರಲಿಲ್ಲ. ಆದರೆ ಪರಿಸ್ಥಿತಿ ಬದಲಾಗಿದೆ ಜಗತ್ತು ಮೋದಿಜಿರವರನ್ನು ಒಪ್ಪಿಕೊಳ್ಳುತ್ತಿದೆ. ನಮ್ಮ‌ ಕೆಲವು ಜನ ಅವರನ್ನು ಒಪ್ಪಿಕೊಳ್ಳಲು ತಯಾರಾಗುತ್ತಿಲ್ಲ.

RELATED ARTICLES  ರೋಟರಿ ಪದಗ್ರಹಣ ಸಮಾರಂಭ: ಕೊರೊನಾ ಮುಕ್ತ ವಿಶ್ವಕ್ಕೆ ಪಣ ತೊಡೋಣ ಎಂದ ಗಣ್ಯರು.

  ವಿಶ್ವವೇ ಇಂದು ಮೋದಿಜಿರವರ ಬೆನ್ನಿಗೆ ನಿಲ್ಲುತ್ತಿದೆ. ಅವರ ಅನೇಕ ಜನಪರ ಯೋಜನೆಗಳನ್ನು ತಾವೂ ಸಹ ಜಾರಿಗೊಳಿಸಬೇಕೆಂದು ತುದಿಗಾಲಲ್ಲಿ‌ ನಿಂತಿದೆ ಎಂದರು. ನಮ್ಮ ಅನಂತಕುಮಾರ ಹೆಗಡೆರವರು ಎಂದಿಗೂ ಉದ್ಘಾಟನೆಗೆ ಬಂದು ತಮ್ಮ ಹೆಸರು ತೋರಿಸಿಕೊಳ್ಳುವ ಜಾಯಮಾನದವರಲ್ಲ ಅವರು ಅವರ ಕೆಲಸವನ್ನು ಅಚ್ಚುಕಟ್ಟಾಗಿ ನಿಭಾಯಿಸುತ್ತಾರೆ. ಅದಕ್ಕಾಗಿ ಅವರು ಐದುಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ ಎಂದರು. ಸೀಬರ್ಡ್ ನಿರಾಶ್ರಿತರ ಪರಿಹಾರಧನ ಅವರನ್ನು ತಲುಪಲು ಮೂವತ್ತು ವರ್ಷಗಳ ಕಾಲ ಬೇಕಾಯಿತು. ನಮ್ಮ ಅನಂತಕುಮಾರ ಹೆಗಡೆರವರು ಹಾಗೂ ನಿರ್ಮಲಾ ಸೀತಾರಾಮನ್ ರವರ ವಿಶೇಷ ಪ್ರಯತ್ನದಿಂದ ೬೦೦ ಕೋಟಿ ಪರಿಹಾರ ಧನಗಳು ನಿರಾಶ್ರಿತರ ಕೈ ಸೇರಿದವು ಎಂದರು.

RELATED ARTICLES  ಪದ್ಮಶ್ರೀ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಹುಟ್ಟೂರು ಹೊಸಾಕುಳಿಯಲ್ಲಿ ನಡೆದ ಚಿಟ್ಟಾಣಿ ಪ್ರಶಸ್ತಿ ಪ್ರದಾನ ಸಮಾರಂಭ

   ಇದೇ ಬರುವ 23 ನೇ ತಾರೀಕಿನಂದು ಪ್ರತಿಯೊಬ್ಬರೂ ಮತ ಚಲಾಯಿಸೋಣ ಯಾರೂ ತಪ್ಪಿಸಿಕೊಳ್ಳುವುದು ಬೇಡ.‌ನಮ್ಮ‌ದೇಶದ ಭವಿಷ್ಯ ನಮ್ಮ‌ ಕೈಯಲ್ಲಿ ಇದೆ. ಮೋದಿಜಿರವರನ್ನು ಮತ್ತೊಮ್ಮೆ ಪ್ರಧಾನಿಯನ್ನಾಗಿಸಿ ಭಾರತ ವಿಶ್ವದಲ್ಲೇ ನಂ 1 ಸ್ಥಾನ ತಲುಪುವಂತೆ ಮಾಡೋಣ ಎಂದರು.