ಗೋಕರ್ಣ ,ಇಲ್ಲಿಗೆ ಸಮೀಪದ ಕಡಮೆಯ ಶ್ರೀ ಬೀರ ದೇವರ 9ನೇ ಪುನರ್ ಪ್ರತಿಷ್ಠಾ ವರ್ಧಂತಿ ಉತ್ಸವವು ,ಎ 12ನೇ ಶುಕ್ರವಾರದಂದು ಜರುಗಲಿದೆ .
ತನ್ನಿಮಿತ್ತ ಶ್ರೀ ದೇವರಲ್ಲಿ ಕಲಾಭಿವೃದ್ದಿ ಹವನ ,ವಿಶೇಷಪೂಜೆ ,ಅನ್ನಸಂತರ್ಪಣೆ ಹಮ್ಮಿಕೊಳ್ಳಲಾಗಿದೆ .ರಾತ್ರಿ ದೀಪಾರಾಧನೆ ,ಮಹಾಪೂಜೆ ನಡೆಯಲಿದೆ .ಶ್ರೀ ದೇವಸ್ಥಾನದ ಹಿಂದಿನ ಪ್ರಧಾನ ಗುನಗರಾದ ಮಂಜುನಾಥ ಗುನಗರು ಅಕಾಲಿಕವಾಗಿ ನಿಧನರಾಗಿದ್ದರಿಂದ ,ಅವರ ಸ್ಥಾನದಲ್ಲಿ ,ಗುರುನಾಥ ಗುನಗರಿಗೆ ಈ ಸಂದರ್ಭದಲ್ಲಿ ದೀಕ್ಷೆ ನೀಡಲಾಗುವದು .
ಈ ಎಲ್ಲಾ ಕಾರ್ಯಕ್ರಮಕ್ಕೆ ಭಕ್ತಾದಿಗಳು ಆಗಮಿಸಿ ಶ್ರೀ ದೇವರ ಪ್ರಸಾದ ಸ್ವೀಕರಿಸಬೇಕಾಗಿ ಮೊಕ್ತೇಸರ ವಿವೇಕ ನಾಡಕರ್ಣಿ ಹಾಗೂ ಅನ್ನದಾನ ಸಮಿತಿಯವರು ಕೋರಿರುತ್ತಾರೆ .