ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜಿನಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸಲು ಹಾಗೂ ಯುವಸಮುದಾಯಕ್ಕೆ ಅರಿವನ್ನು ಮೂಡಿಸಲು ಮತದಾನ ಜಾಗೃತಿ ಕುರಿತಾದ ವಿಡಿಯೋ ಸ್ಪರ್ಧೆ ಆಯೋಜಿಸಲಾಗಿದೆ.
ಭಟ್ಕಳ, ಹೊನ್ನಾವರ, ಬೈಂದೂರು, ಕುಂದಾಪುರ ತಾಲೂಕಿನ ಹೈಸ್ಕೂಲ್ ಹಾಗೂ ಪಿಯುಸಿ ವಿದ್ಯಾರ್ಥಿಗಳು ಭಾಗವಹಿಸಬಹುದಾಗಿದ್ದು, ಮತದಾನದ ಮಹತ್ವದ ಕುರಿತು ಒಂದು ನಿಮಿಷದ ವಿಡಿಯೋ ಮೊಬೈಲ್‍ನಲ್ಲಿ ಚಿತ್ರೀಕರಿಸಿ, ಕಾಲೇಜು ವಾಟ್ಸಾಪ್ ಸಂಖ್ಯೆ 8971071471 ಗೆ ಹೆಸರು, ತರಗತಿ, ಶಾಲಾ ಕಾಲೇಜು ಮಾಹಿತಿಯೊಂದಿಗೆ ಕಳುಹಿಸಿರಿ.
ವಿಡಿಯೋ ತಲುಪಲು ಕೊನೆಯ ದಿನಾಂಕ 18.04.2019. ವಿಜೇತರಿಗೆ ಬೆಳ್ಳಿ ನಾಣ್ಯ, ಫಲಕ ಹಾಗೂ ಪ್ರಶಸ್ತಿಪತ್ರವನ್ನು ನೀಡಲಾಗುವುದು.