ಕಾರವಾರ: ತಾಲೂಕಿನ ದೇವಳಮಕ್ಕಿಯ ಶ್ರೀ ದತ್ತಾತ್ರೇಯ ದೇವರ ವಾರ್ಷಿಕ ರಥೋತ್ಸವು 11 ಮತ್ತು 12 ರಂದು ವಿಜೃಂಭಣೆಯಿಂದ ನಡೆಯಿತು.
ದಿನಾಂಕ 11 ರಂದು ಬೆಳ್ಳಿಗೆ 8 ಗಂಟೆಗೆ ಭಿಕ್ಷಾಟನೆ ಕಾರ್ಯಕ್ರಮ ತದನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ಹಾಗೂ ಶ್ರೀ ದೇವರ ಮಹಾಪೂಜೆ ನಂತರ ಅನ್ನಸಂತರ್ಪಣೆ ಕಾರ್ಯಕ್ರಮ ಜರಗಿತು.
ರಾತ್ರಿ 8 ರಿಂದ ಶ್ರೀ ದೇವರ ರಥೋತ್ಸವ ದೇವಳಮಕ್ಕಿ ಗ್ರಾಮದಾದ್ಯಂತ ರಥದ ಮೆರವಣಿಗೆಯ ಕಾರ್ಯಕ್ರಮ ಅದ್ದೂರಿಯಾಗಿ ಜರುಗಿದವು.
ತದನಂತರ ಶ್ರೀ ದೇವರ ಮಹಾಪೂಜೆ ಆದ ನಂತರ ಮನರಂಜನೆಗಾಗಿ ಸಾಕಾರ ನಾಟಕ ಸಂಘ ಹಣಕೋಣಯವರಿಂದ ‘ಸಕಾ ತುಕಾ ರಾಮ ರಾಮ’ ಎಂಬ ಕೊಂಕಣಿ ನಾಟಕ ಪ್ರದರ್ಶನಗೊಂಡಿತು.