ಕಾರವಾರ: ಇಂದು ನಡೆದ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟ ಘಟನೆಯೊಂದು ವರದಿಯಾಗಿದೆ.

ಓಮಿನಿ ಹಾಗೂ ಬೈಕ್ ನಡುವೆ ಸಂಭವಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಕಾರವಾರದ ಸಿವಿಲ್ ಆಸ್ಪತ್ರೆ ಎದುರು ಸಂಭವಿಸಿದೆ.

RELATED ARTICLES  ರಸಾಯನಶಾಸ್ತ್ರ ರಾಷ್ಟ್ರೀಯ ವೆಬಿನಾರ್ ಕಾರ್ಯಕ್ರಮ ಯಶಸ್ವಿ

ನಗರದ ಬೈತಖೋಲ್ ನಿವಾಸಿ ಸೂರಜ್ ಜನಕ ಪ್ರಸಾದ ಮೃತಪಟ್ಟ ದುರ್ದೈವಿ.

ಎಸ್ಪಿ ಕಚೇರಿ ಕಡೆಯಿಂದ ಬರುತ್ತಿದ್ದ ಬೈಕ್ ಸವಾರನಿಗೆ ಎದುರಿನಿಂದ ಬಂದ ಓಮಿನಿ ಡಿಕ್ಕಿ‌ ಹೊಡೆದಿದೆ. ಇದರಿಂದ ಕೆಳಕ್ಕೆ ಬಿದ್ದಿದ್ದ ಬೈಕ್ ಸವಾರನ ತಲೆಗೆ ಗಂಭೀರ ಗಾಯವಾಗಿತ್ತು. ತಕ್ಷಣ ಅಲ್ಲೆ ಇದ್ದ ಸ್ಥಳಿಯರು ಹಾಗೂ ಪೊಲೀಸ್ ಸಿಬ್ಬಂದಿ ಆಸ್ಪತ್ರೆಗೆ ದಾಖಲಿಸಿದರಾದರು ಅಷ್ಟರಲ್ಲಿಯೇ ಯುವಕ ಮೃತಪಟ್ಟಿದ್ದ ಎನ್ನಲಾಗಿದೆ.

RELATED ARTICLES  ಮತ ಚಲಾಯಿಸಲು ತವರೂರಿಗೆ ಹೋಗುವುದಾಗಿ ತಿಳಿಸಿದ ಕುಮಟಾದ ಮಹಿಳೆ ನಾಪತ್ತೆ

ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.